ಬೆಂಗಳೂರು: ‘ವಿಶ್ವಕರ್ಮ ಸಮುದಾಯವು ವಿಶ್ವಧರ್ಮ ಸಮುದಾಯವಾಗಿದೆ. ಮನುಷ್ಯನ ಬದುಕಿಗೆ ಅಗತ್ಯವಿರುವ ಎಲ್ಲ ಸಂಗತಿಗಳನ್ನು ವಿಶ್ವಕರ್ಮ ಸಮುದಾಯ ಒದಗಿಸುತ್ತದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ್ಣಿಸಿದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಧು-ವರರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

‘ಬಾಗಿಲು, ನೇಗಿಲು ವಿಶ್ವಕರ್ಮ ಸಮುದಾಯದ ಕೊಡುಗೆಯಾಗಿದೆ. ವಿಶ್ವದ ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಪ್ರತಿಮೆಗಳಿಂದ ಹಿಡಿದು, ಆಭರಣ ವಿನ್ಯಾಸ ಎಲ್ಲವೂ ವಿಶ್ವಕರ್ಮರ ಕೈಯಲ್ಲಿ ಅರಳುವ ಕಲೆಗಳಾಗಿವೆ. ಭೂಮಿಯನ್ನು ಸೃಷ್ಟಿ ಮಾಡಿದ್ದೂ ಸಹ ವಿಶ್ವಕರ್ಮ ಮಹರ್ಷಿಗಳು. ವಿಶ್ವಕರ್ಮ ಸಮುದಾಯ ಕೇವಲ ಈ ರಾಜ್ಯಕ್ಕೆ ಸೀಮಿತವಾದ ಸಮುದಾಯವಲ್ಲ’ ಎಂದರು.

‘ಇತ್ತೀಚಿನ ದಿನಗಳಲ್ಲಿ ಅಂತರ್ಜಾತಿ ವಿವಾಹಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಲೂ ಅನೇಕ ಬದಲಾವಣೆಗಳು ಆಗುತ್ತಿವೆ. ಜನರು ಜಾತಿ, ಧರ್ಮಗಳನ್ನು ಮೀರಿ ಮದುವೆಯಾಗುತ್ತಿದ್ದಾರೆ’ ಎಂದು ಹೇಳಿದರು.

‘ಸಿದ್ದಪ್ಪಾಜಿ ದೇವರು ಹಾಗೂ ನನಗೆ ಅವಿನಾಭಾವ ಸಂಬಂಧವಿದೆ. ಚಿಕ್ಕ ವಯಸ್ಸಿನಲ್ಲಿ ತಂದೆ ನಡೆಸಿಕೊಂಡು ಸಂಗಮದ ಮೂಲಕ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆ ದೇವಸ್ಥಾನದ ಅಭಿವೃದ್ಧಿಗೆ ಏನು ಮಾಡಬೇಕೆಂದು ಚರ್ಚೆ ನಡೆಸಲಾಗುವುದು’ ಎಂದರು.

‘ವಿಶ್ವಕರ್ಮ ಶ್ರೀಗಳ ಮಾರ್ಗದರ್ಶನದಲ್ಲಿ, ಕೆ.ಪಿ.ನಂಜುಂಡಿ ಅವರ ಮುಂದಾಳತ್ವದಲ್ಲಿ, ಬಸವರಾಜು ಅವರ ಅಧ್ಯಕ್ಷತೆಯಲ್ಲಿ ಮುಂದಿನ ಪೀಳಿಗೆಗೆ ಅಡಿಪಾಯ ಹಾಕಲು, ಸಮುದಾಯವನ್ನು ಒಗ್ಗೂಡಿಸಲು ಸಂಘಟನೆ ಮಾಡುತ್ತಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.