ಬೆಂಗಳೂರು: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿರುದ್ಧ ಪಕ್ಷ ಹಾಗೂ ಸರ್ಕಾರದ ಕಡೆಯಿಂದ ಕಾನೂನು ಹೋರಾಟ ಮಾಡುತ್ತೇವೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಎಸ್ಐಆರ್ ಎನ್ನುವುದು ಬಿಜೆಪಿಯನ್ನು ಗೆಲ್ಲಿಸಲೆಂದೇ ಮಾಡಿರುವ ವಿನ್ಯಾಸ’ ಎಂದು ಆರೋಪಿಸಿದರು.

‘ಹೊಸ ನಿಯಮ ತಂದು ಯಾರನ್ನು ಬೇಕಾದರೂ ಮತದಾರರ ಪಟ್ಟಿಯಿಂದ ತೆಗೆಯಬಹುದು ಎಂದಾದರೆ, ಅದನ್ನು ಸಂವಿಧಾನದ ಪ್ರಕಾರ ನಡೆಯುತ್ತಿದೆ ಎಂದು ಹೇಳಲು ಆಗುತ್ತದೆಯೇ? ಇದು ಸಂಪೂರ್ಣ ಅಸಾಂವಿಧಾನಾತ್ಮಕ’ ಎಂದು ವಾಗ್ದಾಳಿ ನಡೆಸಿದರು.

‘ಎಸ್ಐಆರ್ ಮಾಡಬೇಡಿ ಎಂದು ನಾವು ಹೇಳುವುದಿಲ್ಲ. ಆದರೆ, ಕಾನೂನಾತ್ಮಕವಾಗಿ ಮಾಡಿ ಎನ್ನುವುದು ನಮ್ಮ ಬೇಡಿಕೆ. ಪ್ರತಿಯೊಬ್ಬ ನಾಗರಿಕನಿಗೂ ತೊಂದರೆ ಆಗದಂತೆ ಸಂವಿಧಾನದ ಹಕ್ಕು ಕೊಡಬೇಕು’ ಎಂದರು.

‘ಸಾರ್ವಜನಿಕರಿಂದ ಬಂದಿರುವ ದೂರುಗಳನ್ನು ಮೊದಲು ಚುನಾವಣಾ ಆಯೋಗ ಸರಿಪಡಿಸಬೇಕು.
ಪಾರದರ್ಶಕವಾಗಿ ತಿದ್ದಿದ ಬಳಿಕವೇ ಎಸ್ಐಆರ್ ಪ್ರಕ್ರಿಯೆ ನಡೆಸಬೇಕು’ ಎಂದೂ ಆಗ್ರಹಿಸಿದರು.

ಬಿಜೆಪಿಯವರದ್ದು ನಾಟಕ: ಪ್ರಧಾನಿ ಮೋದಿ ಅವರ ಇಂಧನ ಮಿತವ್ಯಯ ಕರೆಗೆ ಸ್ಪಂದಿಸಿದ ರಾಜ್ಯ ಬಿಜೆಪಿ ನಾಯಕರ ನಡೆಗೆ ವ್ಯಂಗ್ಯವಾಡಿದ ಪ್ರಿಯಾಂಕ್, ‘ಬಿಜೆಪಿ ನಾಯಕರ ಮೆಟ್ರೊ ಮತ್ತು ಬೈಕ್ ಪ್ರಯಾಣ ಬರೀ ನಾಟಕ’ ಎಂದಿದ್ದಾರೆ.

‘ಒಂದು ದಿನ ಒಬ್ಬ ಮೆಟ್ರೊ ಹತ್ತುವುದು, ಮತ್ತೊಬ್ಬ ಬೈಕ್ ಹತ್ತುವುದು ಜನರಿಗಾಗಿ ಮಾಡಿದ ಕೆಲಸ ಅಲ್ಲ. ನಿಜವಾಗಿಯೂ ಜನರ ಕಷ್ಟ ಗೊತ್ತಾಗಬೇಕೆಂದರೆ ಪ್ರತಿದಿನ ಬಿಎಂಟಿಸಿ ಬಸ್ ಹತ್ತಲಿ. ನಮ್ಮ ಶಕ್ತಿ ಯೋಜನೆ ಉಪಯೋಗ ಪಡೆದುಕೊಳ್ಳಲಿ’ ಎಂದು ಸವಾಲು ಹಾಕಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಮೆಟ್ರೊ ಹತ್ತುವಂತೆ ಮಾಡಿದವರು ಯಾರು. ಆ ಪರಿಸ್ಥಿತಿ ಯಾಕೆ ಬಂತು. ಅದಕ್ಕೂ ಉತ್ತರ ಬೇಕಲ್ಲವೇ’ ಎಂದೂ ಪ್ರಶ್ನಿಸಿದರು.

‘ಬೆಂಗಾವಲು ವಾಹನ ಕಡಿತ: 21ರಂದು ಚರ್ಚೆ’

‘ಸರ್ಕಾರದ ಮಟ್ಟದಲ್ಲಿ ಬೆಂಗಾವಲು ವಾಹನಗಳನ್ನು ಕಡಿತ ಮಾಡುವ ವಿಚಾರದ ಕುರಿತು 21ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ’ ಎಂದು ಪ್ರಿಯಾಂಕ್ ಹೇಳಿದರು.

‘ಇಂಧನ ಕೊರತೆ ಇದೆ ಎಂದು ಪ್ರಧಾನಿ ಮೋದಿ ಹೇಳಿದರೆ, ಇಂಧನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ವಾಗಿಲ್ಲ ಎಂದು ಕೇಂದ್ರ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳುತ್ತಾರೆ. ನಾವು ಯಾರ ಮಾತು ನಂಬಬೇಕು’ ಎಂದೂ ಪ್ರಶ್ನಿಸಿದರು.

ಯಾವಾಗ ಹೇಳಿದ್ದಾರೆ ?

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾವಾಗ ಹೇಳಿದ್ದಾರೆ’ ಎಂದು ಮರುಪ್ರಶ್ನಿಸಿದರು.

‘ಅವರು ಹಾಗೇ ಹೇಳಿಲ್ಲ. ಏನು ಮಾಡಬೇಕೆಂದು ನನಗೆ ಗೊತ್ತಿದೆ ಅಂದಿದ್ದಾರೆ ಅಷ್ಟೆ’ ಎಂದರು.

‘ಹಾಗಿದ್ದರೆ ಮುಖ್ಯಮಂತ್ರಿ ಬದಲಾವಣೆ ವಿಷಯ ಜೀವಂತವಾಗಿದೆಯೇ’ ಎಂಬ ಪ್ರಶ್ನೆಗೆ, ‘ಅದನ್ನು ಎಐಸಿಸಿ ಅಧ್ಯಕ್ಷರನ್ನೇ ಕೇಳಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.