ಬೆಂಗಳೂರು: ‘ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಭಾರತೀಯರ ಮತದಾನದ ಹಕ್ಕನ್ನು ನಾಶ ಮಾಡುತ್ತಿದ್ದು, ರಾಜ್ಯದ ಮತದಾರರು ಇದನ್ನು ವಿರೋಧಿಸಬೇಕು’ ಎಂದು ಆಗ್ರಹಿಸಿ ನನ್ನ ಮತ ನನ್ನ ಹಕ್ಕು ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಕೋರಮಂಗಲದ ವೆಂಕಟಾಪುರ, ಚೆಲುವಾದಿಪಾಳ್ಯ, ಆನಂದಪುರ, ಜನತಾ ಕಾಲೊನಿ, ವಿನೋಬಾ ನಗರ, ಕೆ.ಪಿ ಅಗ್ರಹಾರ, ಬಿಳೇಕಹಳ್ಳಿ, ಬನಶಂಕರಿ, ಸುಭಾಷ್ ನಗರ, ಜಕ್ಕಸಂದ್ರ, ಸೋಮಸುಂದರಪಾಳ್ಯ, ಕದಿರೇನಹಳ್ಳಿ ಮತ್ತು ಚಿನ್ನಪ್ಪ ಗಾರ್ಡನ್ ಪ್ರದೇಶಗಳಲ್ಲಿ ವಿವಿಧ ಗುಂಪುಗಳಿಂದ ಪ್ರತಿಭಟನೆ ನಡೆಯಿತು.

ವಿಧಾನಸೌಧದ ಎದುರು 30 ಮಂದಿ ಚಿಂತಕರು, ವಕೀಲರು ಮತ್ತು ಹೋರಾಟಗಾರರು ಬುಧವಾರ ಘೋಷಣೆಗಳನ್ನು ಕೂಗಿ, ರಾಜಕೀಯ ಸಮಾನತೆಯನ್ನು ರಕ್ಷಿಸುವ ಪ್ರತಿಜ್ಞೆ ಕೈಗೊಂಡರು.

‘ಪಶ್ಚಿಮ ಬಂಗಾಳದ ಮತದಾರರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದಾಗ, ತೆಗೆದು ಹಾಕಲಾದ ಮತದಾರರ ಹೆಸರನ್ನು ತಾತ್ಕಾಲಿಕವಾಗಿ ಉಳಿಸಲು ನಿರಾಕರಿಸಲಾಗಿದೆ. ಅವರು ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಆದೇಶವು ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 21(3)ರ ಉಲ್ಲಂಘನೆಯಾಗಿದೆ’ ಎಂದು ಪ್ರತಿಭಟನಾನಿರತರು ಆರೋಪಿಸಿದರು.

‘ಬಡವರು, ಕಟ್ಟಕಡೆಯ ವ್ಯಕ್ತಿಗೂ ದೇಶದ ದಿಕ್ಕು ರೂಪಿಸುವ ಹಕ್ಕು ದೊರೆಯಲೆಂದು ಸಂವಿಧಾನವು ಮತದಾನದ ಹಕ್ಕನ್ನು ನೀಡಿದೆ. ವಿಶೇಷ ಪರಿಷ್ಕರಣೆ ಪ್ರಶ್ನಿಸದಿದ್ದರೆ ರಾಜಕೀಯ ಸಮಾನತೆಯ ಭರವಸೆ ಉಳಿಯುವುದಿಲ್ಲ’ ಎಂದು ಹೇಳಿದರು.

‘ಎಸ್ಐಆರ್ ವಿರುದ್ಧ ರಾಜ್ಯ ಸರ್ಕಾರ ದೃಢ ನಿಲುವು ತೆಗೆದುಕೊಳ್ಳಬೇಕು. ಮತಹಕ್ಕು ಕಾಪಾಡುವುದಕ್ಕಾಗಿ ಪರಿಷ್ಕರಣೆ ವಿರೋಧಿಸಲು ರಾಜ್ಯದ ಜನತೆ ಮುಂದಾಗಬೇಕು. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತುರ್ತು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-4-1123113301

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.