ಸಿರಿಗೆರೆ: ಭದ್ರಾ ಮೇಲ್ಡಂಡೆ ಯೋಜನೆಯ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಡ ಹಾಕುವ ಸಂಬಂಧ ತರಳಬಾಳು ಮಠದ ಶಿವಮೂರ್ತಿ ಸ್ವಾಮೀಜಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಕೇಂದ್ರದ ಸಚಿವರು ಹಾಗೂ ರಾಜಕೀಯ ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕೇಂದ್ರ ಸಚಿವ ವಿ. ಸೋಮಣ್ಣ, ಸಂಸದರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಬಿ.ವೈ. ರಾಘವೇಂದ್ರ ಜೊತೆ ಚರ್ಚಿಸಿದ್ದಾರೆ.

ದೆಹಲಿಯಲ್ಲಿ ನಡೆದ ನೀರಾವರಿ ತಾಂತ್ರಿಕ ಸಲಹಾ ಸಮಿತಿಯಲ್ಲಿ ಯೋಜನೆಯ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಅನುಮೋದನೆ ದೊರೆತಿದೆ. ಇದು ಪಬ್ಲಿಕ್ ಇನ್ವೆಸ್ಟ್ಮೆಂಟ್ ಬೋರ್ಡ್ ಬಳಿಕ ಕೇಂದ್ರ ಸಚಿವ ಸಂಪುಟ ಸಭೆಯ ಮುಂದೆ ಬರಲಿದೆ. ಈ ಎರಡು ಮಜಲು ದಾಟಿದರೆ ಆಮೆವೇಗದಲ್ಲಿ ಸಾಗುತ್ತಿರುವ ಯೋಜನೆಗೆ ಬಲ ಬಂದು ಅದು ನಿಗದಿತ ವೇಳೆಗೆ ಕಾರ್ಯಾರಂಭವಾಗಲು ಸಾಧ್ಯವಾಗುತ್ತದೆ.

ಶ್ರೀಗಳ ಮಾರ್ಗದರ್ಶನವು ಕೇಂದ್ರೀಯ ಸಮಿತಿ ಅನುಮೋದನೆ ನೀಡಲು ಸಹಾಯಕವಾಯಿತು ಎಂದು ಯೋಜನೆಯ ಎಂಜಿನಿಯರೊಬ್ಬರು ತಿಳಿಸಿದ್ದಾರೆ.

ಪ್ರತಿಭಟನೆ, ಧರಣಿ, ಮುಷ್ಕರ ಕೈಬಿಟ್ಟು ನಮನ್ವಯ ಭಾವದಿಂದ ಯೋಜನೆ ಜಾರಿಗೆ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಸ್ವಾಮೀಜಿ ರೈತರಿಗೆ ಈಚೆಗೆ ಕಿವಿಮಾತು ಹೇಳಿದ್ದರು.

ಚಿತ್ರದುರ್ಗ ವರದಿ: ಭದ್ರಾ ಮೇಲ್ದಂಡೆ ಯೋಜನೆಗೆ ವೇಗ ನೀಡಲು ಮುಂದಾಗಿರುವ ಸಿರಿಗೆರೆ ಶ್ರೀ ನಡೆ ಸ್ವಾಗತಾರ್ಹ ಎಂದು ಭದ್ರಾ ಮೇಲ್ದಂಡೆ ಹೋರಾಟಗಾರ ಆರ್.ಶೇಷಣ್ಣ ಕುಮಾರ್ ತಿಳಿಸಿದ್ದಾರೆ.

ಯೋಜನೆಗೆ ಅನುದಾನ ಕೊಡುವಂತೆ ಮೊದಲ ಬಾರಿಗೆ ದೆಹಲಿಯಲ್ಲಿ ಧ್ವನಿ ಮೊಳಗಿಸಿರುವುದು ಜಿಲ್ಲೆಯ ಹೋರಾಟಗಾರರಲ್ಲಿ ಆಶಾಭಾವ ಮೂಡಿಸಿದೆ. ಜನರ ನಾಡಿಮಿಡಿತಕ್ಕೆ ಸದಾ ಸ್ಪಂದಿಸುವ ಸ್ವಾಮೀಜಿ, ದೀರ್ಘಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುವ ವಿಶ್ವಾಸ ಇದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-44-1092472422

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.