ಭಾಲ್ಕಿ: ರಾಜ್ಯದಲ್ಲಿ ರಚನೆ ಆಗಲಿರುವ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕ ಈಶ್ವರ ಖಂಡ್ರೆ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಸಿಗಲಿ ಎಂದು ಹಾರೈಸಿ ಅವರ ಬೆಂಬಲಿಗರು ನಗರದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

ನಗರದ ಆಂಜನೇಯ ದೇಗುಲದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಸೇರಿ ಖಂಡ್ರೆ ಅವರ ಭಾವಚಿತ್ರದೊಂದಿಗೆ ಶನಿವಾರ ಆಂಜನೇಯ ದೇವರಿಗೆ ಖಂಡ್ರೆ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಪ್ರಮುಖರು ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ 2 ಸಲ ಸಚಿವರಾಗಿ ಈಶ್ವರ ಖಂಡ್ರೆ ಅವರು ರಾಜ್ಯದ ಪ್ರಗತಿಗೆ ಹೊಸ ದಿಕ್ಕು ನೀಡಿದ್ದಾರೆ. ಅವರ ಸೇವೆ, ಪಕ್ಷ ನಿಷ್ಠೆ ಮತ್ತು ಹಿರಿತನವನ್ನು ಪರಿಗಣಿಸಿ ಖಂಡ್ರೆ ಅವರನ್ನು ಕಾಂಗ್ರೆಸ್ ಪಕ್ಷದ ವರಿಷ್ಠರು ಉಪ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟೆ, ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶಿವಕುಮಾರ ರಾಜಭವನ, ಪ್ರಮುಖರಾದ ಅನಿಲ್ ಲೋಖಂಡೆ, ಕಪಿಲ್ ಕಲ್ಯಾಣೆ, ಸಂಗಮೇಶ ವಾಲೆ, ಚಂದ್ರಶೇಖರ ವಂಕೆ, ಲೋಕೇಶ ಭೂರೆ, ಕಿರಣ, ಮಲ್ಲಿಕಾರ್ಜುನ, ಚೇತನ, ಗಣೇಶ, ರೋಹನ, ರಾಹುಲ್, ಕುಮಾರ, ಮಲ್ಲಿಕಾರ್ಜುನ, ವಿನೋದ, ಶಿವಾನಂದ, ಸಂತೋಷ ಸೇರಿದಂತೆ ಹಲವರು ಇದ್ದರು.

ನಮ್ಮ ಕರ್ನಾಟಕ ಸೇನೆಯಿಂದ ಪೂಜೆ: ಶಾಸಕ ಈಶ್ವರ ಖಂಡ್ರೆ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಸಿಗಲಿ ಎಂದು ಹಾರೈಸಿ ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ತಾಲ್ಲೂಕಿನ ಚಳಕಾಪುರ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ನೇತೃತ್ವದಲ್ಲಿ ಪದಾಧಿಕಾರಿಗಳು ಖಂಡ್ರೆ ಭಾವಚಿತ್ರದೊಂದಿಗೆ ಶನಿವಾರ ವಿಶೇಷ ಪೂಜೆ ನೆರವೇರಿಸಿದರು. ಪ್ರಮುಖರಾದ ರಾಜಕುಮಾರ ಪಾಟೀಲ, ಸುದೀಪ ತುಗಾವೆ, ಬಸವರಾಜ ಕಾರಬಾರಿ, ಪ್ರಶಾಂತ ಹಣಮಶೆಟ್ಟಿ, ಮಹೇಶ ರಾಚೋಟೆ, ಅನಿಲ್ ಪಾಟೀಲ ಇದ್ದರು.

ಬಸವಕಲ್ಯಾಣ: ‘ಈ ಭಾಗದಲ್ಲಿ ಎಲ್ಲ ಸಮುದಾಯಗಳ ಪ್ರೀತಿಗೆ ಪಾತ್ರರಾಗಿ ಜನನಾಯಕರಾಗಿ ಬೆಳೆದಿರುವ ಈಶ್ವರ ಖಂಡ್ರೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು’ ಎಂದು ಸಂಭಾಜಿ ಬ್ರಿಗೇಡ್ ಮರಾಠಾ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಜ್ಞಾನೋಬಾ ನಿಟ್ಟೂರೆ ಆಗ್ರಹಿಸಿದ್ದಾರೆ.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಈಶ್ವರ ಖಂಡ್ರೆ ಅವರು ಸಮರ್ಥ, ಮುತ್ಸದ್ಧಿ ಮುಖಂಡರಾಗಿದ್ದು ಗಡಿಭಾಗದ ಬೀದರ್ ಜಿಲ್ಲೆಯ ಎಲ್ಲ ಭಾಷಿಕ ಮತ್ತು ಎಲ್ಲ ಸಮುದಾಯಗಳ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸುತ್ತಿದ್ದಾರೆ. ಅವರಿಗೆ ಈ ಸ್ಥಾನ ನೀಡಿದರೆ ಎಲ್ಲರಿಗೂ ಹರ್ಷವಾಗಬಲ್ಲದು’ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-33-1090370129

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.