ಭಾರತೀನಗರ: ‘ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳ ಸಾಧನೆ ಸಂಬಂಧ ಸಮಾವೇಶ ಮಾಡಿದ್ದು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಇದನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ಸಾಧನೆಗೆ ಬಿಜೆಪಿ ಸರ್ಟಿಫಿಕೇಟ್ ಅಗತ್ಯವಿಲ್ಲ’ ಎಂದು ಶಾಸಕ ಕೆ.ಎಂ.ಉದಯ್ ಕಿಡಿಕಾರಿದರು.

ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ₹10 ಲಕ್ಷ ವೆಚ್ಚದ ಸಮುದಾಯ ಭವನ ಕಾಮಗಾರಿ, ₹20 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಶಾಸಕ ಹರತಾಳ್ ಹಾಲಪ್ಪ ಅವರಂತೆ ಯಾವ ಕಾಂಗ್ರೆಸ್ ಶಾಸಕರು ಜೈಲಿಗೆ ಹೋಗಿ ಬಂದಿಲ್ಲ’ ಎಂದು ಕುಟುಕಿದರು.

‘ಮದ್ದೂರು ನಗರಸಭೆಗೆ ಹಲವು ಹಳ್ಳಿಗಳನ್ನು ಸೇರ್ಪಡೆಗೊಳಿಸಿದ್ದು, ಪ್ರತಿಭಟನೆ ನಡೆಸುತ್ತಿದ್ದ ಕೆಲವು ಮುಖಂಡರು ಈಗ ತಮ್ಮಲ್ಲಿ ಮನವಿ ಮಾಡುತ್ತಿದ್ದಾರೆ. ಆದರೆ ಪ್ರತಿಭಟನೆ ನಡೆಸುವುದಕ್ಕೂ ಮುನ್ನ ಇದೇ ರೀತಿ ತಮ್ಮನ್ನು ಭೇಟಿ ಮಾಡಿ ಮಾತನಾಡಿದ್ದರೆ ನಗರ ಸಭೆ ವ್ಯಾಪ್ತಿಗೊಳಪಡುವುದನ್ನು ತಪ್ಪಿಸಬಹುದಿತ್ತೇನೋ, ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಈಗ ಯಾವುದೇ ಕಾರಣಕ್ಕೂ ಹಿಂಪಡೆಯಲ್ಲ ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಬಸವರಾಜು, ಸದಸ್ಯ ಎ.ಎಸ್. ರಾಜೀವ್, ಕೆ.ಶೆಟ್ಟಹಳ್ಳಿ ಗ್ರಾಮದ ರಘು, ಚಿಕ್ಕರಸಿನಕೆರೆ ಗ್ರಾಮದ ಸಿ.ಶಿವಲಿಂಗಯ್ಯ, ಯಜಮಾನ್ ಶಿವಲಿಂಗೇಗೌಡ, ಚನ್ನೇಗೌಡ, ತಮ್ಮಯ್ಯ, ಪುಟ್ಟರಾಜು, ದೊಡ್ಡರಸಿನಕೆರೆ ಎಪಿಸಿಎಸ್ ನಿದರ್ೇಶಕ ಡಿ.ಸಿ.ಸತೀಶ್ಕುಮಾರ್, ಕಾಂಗ್ರೆಸ್ ಮುಖಂಡರಾದ ರಘು, ಅಮರ್, ಬಿಳಿಗೌಡ, ಪ್ರಸನ್ನ, ಜಯರಾಮು, ಕೊಂಡಯ್ಯ, ಸೋಮಣ್ಣ, ಮಹೇಶ್, ಚೇತು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-40-1358862006

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.