ಬೀದರ್: ‘30ಕ್ಕೂ ಹೆಚ್ಚು ಜನ ಕಾಂಗ್ರೆಸ್ ಪಕ್ಷದ ಕಿರಿಯ–ಹಿರಿಯ ಶಾಸಕರು ನವದೆಹಲಿಗೆ ಹೋಗುತ್ತಿದ್ದಾರೆ. ಇದು ಕಾಂಗ್ರೆಸ್ ಒಳಜಗಳವಲ್ಲವೇ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದರು.

ಭಾನುವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಬಣಗಳು ಸೃಷ್ಟಿಯಾಗಿವೆ. ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಒಬ್ಬರ ಮುಖ ಒಬ್ಬರು ನೋಡುತ್ತಿಲ್ಲ. ಹಲವಾರು ಸಭೆಗಳಿಗೆ ಉಪ ಮುಖ್ಯಮಂತ್ರಿಗಳು ಬರುತ್ತಿಲ್ಲ. ಇದು ಏನು ತೋರಿಸುತ್ತದೆ’ ಎಂದು ಪ್ರಶ್ನಿಸಿದರು.

‘ಅಧಿಕಾರಕ್ಕಾಗಿ ಕಾಂಗ್ರೆಸ್ನವರು ಹಂಬಲಿಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಬೇಕಾಗಿಲ್ಲ. ಭಿನ್ನಮತೀಯ ಶಾಸಕರು ದೆಹಲಿಗೆ ಹೋಗ್ತಾ ಇದ್ದಾರೆ. ಸಿ.ಎಂ ಅವರನ್ನ ಕೆಳಗಿಳಿಸೋಕೆ ಒಂದು ಗ್ಯಾಂಗ್, ಅವರನ್ನು ಏರಿಸೋಕೆ ಮತ್ತೊಂದು ಗ್ಯಾಂಗ್ ಹೋಗ್ತಾ ಇದೆ. ನೆಪಕ್ಕೆ ಮಾತ್ರ ಮಂತ್ರಿ ಸ್ಥಾನದ ಲಾಬಿ. ಸಿ.ಎಂ ಅವರನ್ನು ಕೆಳಗಿಳಿಸುವ ಪ್ರಯತ್ನ ನಡೀತಾ ಇದೆ’ ಎಂದು ಹೇಳಿದರು.

‘ಸಿಎಂ ಬದಲಾವಣೆ ಆಗೋದು ಗ್ಯಾರಂಟಿ. ಆದರೆ, ಸಿ.ಎಂ ಕುರ್ಚಿ ಬಿಡಲ್ಲ ಅಂತಿದ್ದಾರೆ. ಡಿಕೆಶಿ ಒದ್ದು ಕಿತ್ಕೋತೀನಿ ಅಂತಿದ್ದಾರೆ. ಜನ ಬೇಸತ್ತಿದ್ದಾರೆ. ಸರ್ಕಾರ ತೊಲಗಿಸೋಕೆ ನಾವು ಕೆಲಸ ಮಾಡ್ತೀವಿ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-51-2098073479

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.