ಗುಮ್ಮಾ(ಜನವಾಡ): ಕುಡಿಯುವ ನೀರಿನ ವಾಲ್ ದುರಸ್ತಿಗೆ ಪತಿ ಹೆಸರಲ್ಲಿ ಚೆಕ್ ಮೂಲಕ ಹಣ ಪಡೆದು ನಿಯಮ ಉಲ್ಲಂಘಿಸಿದ ಬೀದರ್ ತಾಲ್ಲೂಕಿನ ಅಷ್ಟೂರು ಗ್ರಾಮ ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮಿ ಬೀರಪ್ಪ ಅವರನ್ನು ಸದಸ್ಯ ಸ್ಥಾನದಿಂದ ವಜಾಗೊಳಿಸಲಾಗಿದೆ.

ಮುಂದಿನ ಆರು ವರ್ಷಗಳ ವರೆಗೆ ಯಾವುದೇ ಚುನಾವಣೆ ಸ್ಪರ್ಧಿಸದಂತೆಯೂ ಅನರ್ಹಗೊಳಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಪೀಠಾಧಿಕಾರಿ (ಗ್ರಾಮ ಪಂಚಾಯಿತಿ) ಯಲ್ಲಯ್ಯು ಈ ಕುರಿತು ಆದೇಶ ಹೊರಡಿಸಿದ್ದಾರೆ.

ವಿಜಯಲಕ್ಷ್ಮಿ ಅವರು ಗುಮ್ಮಾ ಗ್ರಾಮದಲ್ಲಿ ಕುಡಿಯುವ ನೀರಿನ ವಾಲ್ ದುರಸ್ತಿ ಮಾಡಿಸಲು ಪತಿ ಹೆಸರಲ್ಲಿ ₹11 ಸಾವಿರದ ಚೆಕ್ ಪಡೆದು ನಿಯಮ ಉಲ್ಲಂಘಿಸಿರುವುದು ತನಿಖೆಯಲ್ಲಿ ಸಾಬೀತಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-33-1582000646

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.