ಶಿರಹಟ್ಟಿ: ಬೀದರ ಜಿಲ್ಲೆ, ಬಸವಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಪಕ್ಕದಲ್ಲಿನ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅಪ್ಪಣ್ಣನವರ ಮೂರ್ತಿ ಪುನಃ ಪ್ರತಿಷ್ಠಾಪನೆ ಮಾಡುವಂತೆ ಆಗ್ರಹಿಸಿ, ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ತಾಲ್ಲೂಕು ಘಟಕದ ವತಿಯಿಂದ ಗ್ರೇಡ್-2 ತಹಶೀಲ್ದಾರ್ ವಿ.ಎಸ್.ಮುಳಗುಂದಮಠ ಅವರ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಶರಣಪ್ಪ ಮಾಗಡಿ ಮಾತನಾಡಿ, ಬೀದರ ಜಿಲ್ಲೆ, ಬಸವಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಹತ್ತಿರ 12ನೇ ಶತಮಾನದ ಅನೇಕ ಬಸವಾದಿ ಶರಣರ ಅರಿವಿನ ಗವಿಗಳು ಇರುವುದಾಗಿ ಇತಿಹಾಸ ಸಾರುತ್ತದೆ. ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಅರವಿನ ಗುಹೆ ಪಕ್ಕದಲ್ಲಿಯೇ ಅವರ ಅಪ್ತಕಾರ್ಯದರ್ಶಿಯಾಗಿದ್ದ, ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯೂ ಅಲ್ಲಿ ಅಸ್ತಿತ್ವದಲ್ಲಿದೆ. ಅಪ್ಪಣ್ಣನವರು ವಿಶ್ವಗುರು ಬಸವಣ್ಣನವರ ಆಪ್ತಕಾರ್ಯದರ್ಶಿಗಳಾಗಿದ್ದರು. ಅಲ್ಲದೇ ಪ್ರಭುದೇವರು, ಸಿದ್ದರಾಮದೇವರ ಜೊತೆಯಲ್ಲಿಯೇ ಇದ್ದವರು ಎಂಬುವದನ್ನು ಬಸವಣ್ಣನವರೇ ಒಂದು ವಚನದಲ್ಲಿ ಹೇಳಿದ್ದಾರೆ. ಈ ಕುರಿತು ಸೂಕ್ತ ದಾಖಲೆಗಳು ಸಹ ಇವೆ. ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಬಸವೇಶ್ವರ ದೇವಸ್ಥಾನದ ಪಂಚಕಮೀಟಿಯವರು ಅಕ್ರಮ ಹಸ್ತಕ್ಷೇಪದಿಂದ ಬೇರೆ ಇನ್ನೊಬ್ಬ ಶರಣರ ಮೂರ್ತಿಗಳನ್ನು ಪ್ರತಿಷ್ಠಾನ ಮಾಡಿರುವುದು ಖೇದದ ಸಂಗತಿ. ಇದರಿಂದ ಅಪ್ಪಣ್ಣನವರ ಮೂರ್ತಿ ಇಲ್ಲದಿರುವದು ಹಡಪದ ಸಮುದಾಯದ ಭಕ್ತಿ-ಭಾವನೆಗಳಿಗೆ ತೀವ್ರ ನೋವನ್ನುಂಟು ಮಾಡಿದೆ. ಅಲ್ಲದೇ ಇತಿಹಾಸವನ್ನು ತಿರುಚಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತದೆ. ಅಲ್ಲಿ ಹಾಕಲಾದ ಬೋರ್ಡನ್ನು ಸಹ ರಾತ್ರೋರಾತ್ರಿ ಕಿಡಗೇಡಿಗಳು ಕಿತ್ತು ಹಾಕಿದ್ದು, ಕಾರಣ ಹಡಪದವರು ಕನಿಷ್ಠರು ಎಂಬ ಅವರ ಕೀಳರಿಮೆ ಭಾವನೆ ಎತ್ತಿ ತೋರಿಸುತ್ತಿದೆ. ಅಪ್ಪಣ್ಣನವರ ವಂಶಸ್ಥರಾದ ನಾವುಗಳು ಅವರ ಇತಿಹಾಸ ಮತ್ತು ಗವಿಯನ್ನು ಕಳೆದುಕೊಳ್ಳುವ ಪ್ರಶ್ನೇಯೇ ಇಲ್ಲಾ. ಇತಿಹಾಸ ಹೇಳುವುದನ್ನೆ ಅನುಷ್ಠಾನ ಮಾಡಲಿ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಈಗಾಗಲೇ ಸಮಾಜದ ಮುಖಂಡರು, ಭಕ್ತರು ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಅನೇಕ ಮಠಾಧೀಶರು ಹಾಗೂ ಭಾಲ್ಕಿ ಶ್ರೀಗಳು ಸೇರಿದಂತೆ ಅನೇಕ ನಾಯಕರು ಸಹ ಹಡಪದ ಅಪ್ಪಣ್ಣ ಗವಿ ಅನುಷ್ಠಾನ ಮಾಡುವಂತೆ ಹೋರಾಟ ಮಾಡಿದ್ದಾರೆ. ಅಕ್ರಮ ಕೃತ್ಯ ಎಸಗಿದ ಪಂಚಕಮೀಟಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ಅಲ್ಲಿಯೇ ಹಡಪದ ಅಪ್ಪಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು. ಈ ಸ್ಥಳವನ್ನು ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಬೇಕು. ಪೂಜ್ಯ ಶ್ರೀ ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳನ್ನು ಪ್ರಾಧಿಕಾರದ ಸದಸ್ಯರನ್ನಾಗಿ ಮಾಡಿಕೊಂಡು ಸಮರ್ಪಕವಾಗಿ ಅಭಿವೃದ್ಧಿಪಡಿಸಲು ಅಗತ್ಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಯಲ್ಲಪ್ಪ ಮಾಗಡಿ, ರಮೇಶ ಮಾಗಡಿ, ಮಂಜುನಾಥ ನಾವಿ, ಶ್ರೀಕಾಂತ ಹಡಪದ, ವೀರುಪಾಕ್ಷಪ್ಪ ನಾವಿ, ಪ್ರಕಾಶ ನಾವಿ, ರೇಣುಕಾ ನಾವಿ, ಸರೋಜಾ ನಾವಿ, ಕೆ.ಡಿ.ನಾವಿ, ಪ್ರಕಾಶ ನಾವಿ, ಮಲ್ಲಿಕಾರ್ಜುನ ಹಡಪದ, ಚನವೀರಪ್ಪ ನಾವಿ ಸೇರಿದಂತೆ ಮುಂತಾದವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-23-208030503

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.