ಬೀದರ್: ಕಾರಂಜಾ ನೀರಾವರಿ ಯೋಜನೆಯಡಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡುವ ವಿಷಯದಲ್ಲಿ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಭೆ ನಡೆಸಿ ಸರ್ಕಾರದ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ರಾತ್ರಿ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.

ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರ ಒದಗಿಸಲು ವಿಶೇಷ ಪ್ಯಾಕೇಜ್ ಘೋಷಿಸಿ, ಸಂತ್ರಸ್ತರ ನಾಲ್ಕು ದಶಕಗಳ ಹೋರಾಟಕ್ಕೆ ಇತಿಶ್ರೀ ಹಾಡಬೇಕೆಂದು ಸದನದ ಗಮನ ಸೆಳೆದರು.ಕಾರಂಜಾ ಸಂತ್ರಸ್ತರ ಪರಿಹಾರ ಬೇಡಿಕೆ ಸಂಬಂಧ ಕಲಬುರಗಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ರಚಿಸಿದ್ದ ಸಮಿತಿ 2025ರ ನವೆಂಬರ್ 13ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿ ಕಾನೂನು, ಕಂದಾಯ, ಆರ್ಥಿಕ ಇಲಾಖೆ ಅಭಿಪ್ರಾಯಕ್ಕೆ ಹೋಗಿದೆ. ಅಲ್ಲಿಂದ ಅಭಿಪ್ರಾಯ ಬಂದ ಮೇಲೆ ಸಿಎಂ, ಡಿಸಿಎಂ ಅವರು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದರು. ಪ್ರಾದೇಶಿಕ ಆಯುಕ್ತರ ವರದಿ ಜೊತೆಗೆ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ವರದಿ ಸಹ ಹೋಲಿಕೆ ಮಾಡಬೇಕಾಗುತ್ತದೆ. ಬಳಿಕ ಕಾನೂನು, ಕಂದಾಯ ಇಲಾಖೆಯಿಂದ ಏನು ವರದಿ ಬರುತ್ತದೆ ನೋಡಿಕೊಂಡು ಆರ್ಥಿಕ ಇಲಾಖೆಗೆ ಇದನ್ನು ಮಂಡನೆ ಮಾಡಲಾಗುತ್ತದೆ. ಇದಾದ ನಂತರ ಸಿಎಂ, ಡಿಸಿಎಂ ಅವರು ನಿಮ್ಮ ಜೊತೆಗೆ ಮತ್ತೊಂದು ಸಭೆ ನಡೆಸಿ ಸರ್ಕಾರದ ತೀರ್ಮಾನ ತಿಳಿಸುತ್ತಾರೆ. ಸತತ ನೀವು ಸಂತ್ರಸ್ತರ ಸಮಸ್ಯೆಯನ್ನು ಸರ್ಕಾರದ ಮುಂದಿಟ್ಟಿರಿ. ನೀವು ಹೇಳಿದ್ದಕ್ಕಾಗಿಯೇ ಹಿಂದೆ ಬೆಳಗಾವಿಯಲ್ಲಿ ಸಿಎಂ, ಡಿಸಿಎಂ ಸಭೆ ಕರೆದಿದ್ದರು. ಸಮಿತಿ ಸಹ ರಚಿಸಿದ್ದರು. ಈಗ ವರದಿ ಸರ್ಕಾರದ ಮುಂದಿದೆ. ಇಷ್ಟು ದಿವಸ ಕಾದಿರುವಿರಿ. ಇನ್ನು ಸ್ವಲ್ಪ ದಿನ ಕಾಯಿರಿ ಎಂದು ಶಾಸಕ ಬೆಲ್ದಾಳೆ ಅವರಿಗೆ ಕೋರಿದರು. ಧರ್ಮಸಿಂಗ್ ಅವರು ಸಿಎಂ ಇದ್ದಾಗ ವಿಶೇಷ ಪ್ಯಾಕೇಜ್ ನೀಡಿಕೆ ಸಂಬಂಧ ಹೈಪವರ್ ಕಮಿಟಿ ರಚಿಸಲಾಗಿತ್ತು. ₹60 ಕೋಟಿ ಕೊಡುವುದಾಗಿಯೂ ಹೇಳಿದ್ದರು. ಆದರೆ ನಂತರ ಆಗಿನ ಅಧಿಕಾರಿಗಳು ಕೆಲವು ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಪರಿಹಾರ ಸಿಕ್ಕಿಲ್ಲ. ಬಳಿಕ ಸರ್ಕಾರ ಬದಲಾಯಿತು, ಸಮಸ್ಯೆ ಹಾಗೆಯೇ ಉಳಿಯಿತು. ಈಗ ಮತ್ತೊಂದು ಹಂತಕ್ಕೆ ಬಂದು ನಿಂತಿದೆ. ಸಂತಸ್ತರಿಗೆ ಸಾವಿರ ಕೋಟಿ ಪ್ಯಾಕೇಜ್ ಕಲ್ಪಿಸಿ, ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ ಒದಗಿಸಿ ಅವರಿಗೆ ಹೊಸ ಜೀವನ ನೀಡುವಂತೆ ಶಾಸಕ ಬೆಲ್ದಾಳೆ ಕೈ ಮುಗಿದು ಮನವಿ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-33-732061388

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.