ಬೆಂಗಳೂರು: ಬಿಟ್ಕಾಯಿನ್ ಕಳವು, ಅಕ್ರಮ ವಹಿವಾಟು ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ರಮೇಶ್ ಆಲಿಯಾಸ್ ಶ್ರೀಕಿ ಸೇರಿ ಮೂವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು 10 ದಿನ ಕಸ್ಟಡಿಗೆ ಪಡೆದಿದ್ದಾರೆ.

ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ, ಸಿಐಡಿ ತನಿಖೆ ನಡೆಸುತ್ತಿರುವ ಈ ಪ್ರಕರಣದ ತನಿಖೆಗೆ ಈಗ ಇ.ಡಿಯೂ ಇಳಿದಿದೆ. ಈಚೆಗೆ ಶ್ರೀಕಿ, ಕಾಂಗ್ರೆಸ್ನ ಯುವ ಮುಖಂಡ ಮಹಮ್ಮದ್ ನಲಪಾಡ್ ಹ್ಯಾರಿಸ್ ಮತ್ತು ಅಕೀಬ್ ಖಾನ್ ಅವರ ಮನೆಯಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದರು. ಶ್ರೀಕಿ ಮನೆಯಲ್ಲಿ ಸತತ 36 ತಾಸು ಶೋಧದ ನಂತರ ಹಾರ್ಡ್ಡಿಸ್ಕ್ ವಶಕ್ಕೆ ಪಡೆದು ಮರಳಿದ್ದರು.

ಈಗ ಶುಕ್ರವಾರ ಬೆಳಿಗ್ಗೆಯೇ ಶ್ರೀಕಿ, ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ರಾಬಿನ್ ಖಂಡೇಲ್ವಾಲ್ ಮತ್ತು ಸುನೀಶ್ ಹೆಗ್ಡೆ ಅವರನ್ನು ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಸತತ ವಿಚಾರಣೆಯ ನಂತರ ಶನಿವಾರ ಬೆಳಿಗ್ಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು.

‘ಆರೋಪಿಗಳು ಸರ್ಕಾರಿ ಪೋರ್ಟಲ್ಗೆ ಕನ್ನಹಾಕಿ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಆ ಹಣವನ್ನು ಬಿಟ್ಕಾಯಿನ್ ಖರೀದಿಗೆ ಬಳಸಿದ್ದಾರೆ. ಜತೆಗೆ ಬಿಟ್ಕಾಯಿನ್ ಕಳವಿಗೆ ಸಂಬಂಧಿಸಿದ ಹಲವು ಡಿಜಿಟಲ್ ದಾಖಲೆಗಳು ತನಿಖೆ ವೇಳೆ ಪತ್ತೆಯಾಗಿದೆ. ಶ್ರೀಕಿಯು ಬಿಟ್ಕಾಯಿನ್ ಕಳವು ಮಾಡಿದ್ದರೆ, ರಾಬಿನ್ ಬಿಟ್ಕಾಯಿನ್ ಸೇರಿ ಹಲವು ಕ್ರಿಪ್ಟೊಕರೆನ್ಸಿಗಳಲ್ಲಿ ವಹಿವಾಟು ನಡೆಸಿದ್ದಾರೆ. ಇಬ್ಬರ ಮಧ್ಯೆ ಹಣದ ಅಕ್ರಮ ವಹಿವಾಟು ನಡೆದಿದೆ ಎಂದು ಇ.ಡಿ. ಪರ ವಕೀಲರು ನ್ಯಾಯಾಧೀಶರಿಗೆ ತಿಳಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಶ್ರೀಕಿ ಮತ್ತು ಸುನೀಶ್ ಮಧ್ಯೆಯೂ ಇದೇ ರೀತಿಯ ವಹಿವಾಟು ನಡೆದಿದೆ. ಶ್ರೀಕಿ ವರ್ಗಾಯಿಸಿದ ಬಿಟ್ಕಾಯಿನ್ಗಳನ್ನು ಸುನೀಶ್ ಇತರೆ ಕ್ರಿಪ್ಟೊಕರೆನ್ಸಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅದರಿಂದ ಬಂದ ಲಾಭವನ್ನು ಶ್ರೀಕಿಗೆ ನೀಡಿ, ಕಮಿಷನ್ ಪಡೆದಿದ್ದಾರೆ. ಜತೆಗೆ, ಶ್ರೀಕಿಗಾಗಿ ಡಾರ್ಕ್ವೆಬ್ನಲ್ಲಿ ಮಾದಕವಸ್ತುಗಳನ್ನು ಖರೀದಿಸಿದ್ದಾರೆ. ಈ ಎಲ್ಲ ವಹಿವಾಟುಗಳಿಗೂ ಬಿಟ್ಕಾಯಿನ್ ಅಕ್ರಮ ವಹಿವಾಟಿನ ಹಣವನ್ನು ಬಳಸಿಕೊಂಡಿದ್ದಾರೆ ನ್ಯಾಯಾಧೀಶರಿಗೆ ಮಾಹಿತಿ ನೀಡಿದ್ದಾರೆ’ ಎಂದು ವಿವರಿಸಿವೆ.

‘ಸುನೀಶ್ ಬಿಟ್ಕಾಯಿನ್ ರೂಪದ ಹಣವನ್ನು ನಗದಿಗೆ ಪರಿವರ್ತನೆ ಮಾಡಿಕೊಟ್ಟು, ಶ್ರೀಕಿಯಿಂದ ಕಮಿಷನ್ ಪಡೆದಿದ್ದಾರೆ. ಬಿಟ್ಕಾಯಿನ್ನಲ್ಲಿ ಹೂಡಿಕೆ ಮಾಡಲು ಶ್ರೀಕಿಗೆ ಹಣ ಒದಗಿಸಿದವರು ಯಾರು ಎಂಬುದು ಪತ್ತೆಯಾಗಬೇಕಿದೆ. ಜತೆಗೆ, ಯಾರೆಲ್ಲಾ ಬಿಟ್ಕಾಯಿನ್ನಲ್ಲಿ ಹಣ ಹೂಡಿಕೆ ಮಾದಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕಿದೆ. ಇದಕ್ಕಾಗಿ ಆರೋಪಿಗಳನ್ನು 14 ದಿನಗಳ ಕಸ್ಟಡಿಗೆ ನೀಡಬೇಕು ಎಂದು ಕೋರಿದ್ದಾರೆ’ ಎಂದು ಮಾಹಿತಿ ನೀಡಿವೆ.

ನ್ಯಾಯಾಧೀಶರು ಮೂವರು ಆರೋಪಿಗಳನ್ನೂ ಇದೇ ಮೇ 19ರವರೆಗೆ 10 ದಿನಗಳ ಅವಧಿಗೆ ಇ.ಡಿ ಕಸ್ಟಡಿಗೆ ನೀಡಿದ್ದಾರೆ ಎಂದು ತಿಳಿಸಿವೆ.

ಮೊಹಮ್ಮದ್ ನಲಪಾಡ್ ಮತ್ತು ಶ್ರೀಕಿ ಮಧ್ಯೆ ₹4.65 ಕೋಟಿ ಹಣ ವರ್ಗಾವಣೆ ಆಗಿರುವದಕ್ಕೆ ದಾಖಲೆಗಳು ಲಭ್ಯವಾಗಿವೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ದೊರೆಯಬೇಕಿದೆ ಎಂದು ಇ.ಡಿ ಮೂಲಗಳು ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.