ನವದೆಹಲಿ: 'ವಂದೇ ಮಾತರಂ'ನ ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರ ಗೀತೆಯಾಗಿ ಬಳಸುವ ನಿರ್ಧಾರವನ್ನು ಮಹಾತ್ಮ ಗಾಂಧಿ ಮತ್ತು ರವೀಂದ್ರನಾಥ ಟ್ಯಾಗೋರ್ ಅವರಂತಹ ನಾಯಕರು ಸಾಮೂಹಿಕವಾಗಿ ತೆಗೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಜವಾಹರಲಾಲ್ ನೆಹರೂ ಅವರನ್ನು ಅವಮಾನಿಸಿದ್ದಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ನಿಮಿತ್ತ ರಾಜ್ಯಸಭೆಯಲ್ಲಿ ಮಂಗಳವಾರ ನಡೆದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ‘ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರೆ, ಬ್ರಿಟಿಷರಿಗಾಗಿ ಕೆಲಸ ಮಾಡಿದವರು ನೀವು‘ ಎಂದು ಜರಿದರು.

ವಂದೇ ಮಾತರಂ ಘೋಷಣೆ ಕೂಗುತ್ತಾ ಭಾಷಣ ಆರಂಭಿಸಿದ ಅವರು, ‘ನಾವು ಯಾವಾಗಲೂ ವಂದೇ ಮಾತರಂ ಹಾಡುತ್ತಲೇ ಇದ್ದೇವೆ. ಆದರೆ, ಈ ಗೀತೆ ಹಾಡದವರು ಈಗ ಅದನ್ನು ಹಾಡಲು ಪ್ರಾರಂಭಿಸಿದ್ದಾರೆ. ಅದು ವಂದೇ ಮಾತರಂನ ಶಕ್ತಿ. ಇದು ರಾಷ್ಟ್ರೀಯ ಹಬ್ಬವೇ ಹೊರತು ಚರ್ಚೆಯಲ್ಲ‘ ಎಂದೂ ವ್ಯಾಖ್ಯಾನಿಸಿದರು.

‘1921ರಲ್ಲಿ ಅಸಹಕಾರ ಚಳುವಳಿ ಪ್ರಾರಂಭವಾದಾಗ, ಕಾಂಗ್ರೆಸ್ ಸದಸ್ಯರು ವಂದೇ ಮಾತರಂ ಹಾಡುತ್ತಾ ಜೈಲಿಗೆ ಹೋದರು. ನೀವು ಏನು ಮಾಡುತ್ತಿದ್ದೀರಿ? ನೀವು ಬ್ರಿಟಿಷರಿಗಾಗಿ ಕೆಲಸ ಮಾಡುತ್ತಿದ್ದೀರಿ‘ ಎಂದು ಖರ್ಗೆ ಅವರು ಬಿಜೆಪಿ ಸದಸ್ಯರನ್ನು ಉದ್ದೇಶಿಸಿ ಹೇಳಿದರು.

'ನೀವು ನಮಗೆ ದೇಶಭಕ್ತಿ ಕಲಿಸುತ್ತಿದ್ದೀರಾ? ನೀವು ಹೆದರಿ ಬ್ರಿಟಿಷರಿಗೆ ಸೇವೆ ಸಲ್ಲಿಸಿದವರು. ನೆಹರೂ ಅವರನ್ನು ಅವಮಾನಿಸುವ ಯಾವುದೇ ಅವಕಾಶವನ್ನು ಪ್ರಧಾನಿ ಮೋದಿ ಬಿಡುವುದಿಲ್ಲ. ಗೃಹ ಸಚಿವರೂ ಸಹ... ಚರಣಗಳನ್ನು ತೆಗೆದುಹಾಕಿದ ಕಾರಣಕ್ಕೆ ನೆಹರೂ ಅವರನ್ನು ದೂಷಿಸುವುದನ್ನು ನಾನು ಕೇಳಿದೆ‘ ಎಂದರು.

‘ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡುವ ತೀರ್ಮಾನವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ತೆಗೆದುಕೊಂಡಿತ್ತು. ಈ ನಿರ್ಣಯವನ್ನು ನೆಹರೂ ಒಬ್ಬಂಟಿಯಾಗಿ ಮಾಡಿರಲಿಲ್ಲ. ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಮದನ್ ಮೋಹನ್ ಮಾಳವಿಯಾ ಮತ್ತು ಆಚಾರ್ಯ ಜೆ.ಬಿ. ಕೃಪಲಾನಿ ಅವರಂತಹ ನಾಯಕರು ಉಪಸ್ಥಿತರಿದ್ದರು‘ ಎಂದು ಖರ್ಗೆ ಹೇಳಿದರು.

ಟ್ಯಾಗೋರ್ ಅವರ ಮಾತುಗಳನ್ನು ಖರ್ಗೆ ಉಲ್ಲೇಖಿಸಿದರು. ಕವಿತೆಯ ಮೊದಲ ಎರಡು ಚರಣಗಳನ್ನು ಹಾಡಿ ಉಳಿದ ಭಾಗಗಳನ್ನು ಕೈಬಿಟ್ಟರೆ ಯಾವುದೇ ತೊಂದರೆ ಇಲ್ಲ ಎಂದೂ ಟ್ಯಾಗೋರ್ ಹೇಳಿದ್ದರು. ಆದರೆ, ಬಿಜೆಪಿ ನಾಯಕರು ನಮ್ಮ ಉನ್ನತ ನಾಯಕ ನೆಹರೂ ಅವರನ್ನು ಅವಮಾನಿಸುತ್ತಿದ್ದಾರೆ. ಎರಡು ಚರಣಗಳನ್ನಷ್ಟೇ ಹಾಡುವುದು ಸಾಮೂಹಿಕ ನಿರ್ಧಾರವಾಗಿತ್ತು. ನೀವು ನೆಹರೂ ಅವರನ್ನು ಮಾತ್ರ ಏಕೆ ಗುರಿ ಮಾಡುತ್ತಿದ್ದೀರಿ‘ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.