ಬೆಂಗಳೂರು: ‘ರಾಜ್ಯದ ‘ಗೃಹಲಕ್ಷ್ಮಿ’ಯರಿಗೆ ಸಿಗಬೇಕಾಗಿದ್ದ 2025 ರ ಫೆಬ್ರುವರಿ ಮತ್ತು ಮಾರ್ಚ್ ತಿಂಗಳ ಹಣದ ಸ್ಥಿತಿಗತಿ ಏನು ಎಂಬುದನ್ನು ಜನರಿಗೆ ತಿಳಿಸಬೇಕು. ಈವರೆಗೆ ರಾಜ್ಯದ ಖಜಾನೆಯ ಸಂಪೂರ್ಣ ನಿಯಂತ್ರಣ ಹೊಂದಿದ್ದ ನೀವು ಕೊನೆಗಾದರೂ ಸತ್ಯ ಹೇಳಿ. ಅದು ನಿಮ್ಮ ಜವಾಬ್ದಾರಿ’ ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

‘ಗೃಹಲಕ್ಷ್ಮಿ ಯೋಜನೆಯ ಈ ಎರಡು ತಿಂಗಳುಗಳ ಒಟ್ಟು ಮೊತ್ತ ₹5,000 ಕೋಟಿ. ಇದು ಫಲಾನುಭವಿಗಳಿಗೆ ತಲುಪಿಲ್ಲ. ಹಾಗಿದ್ದರೆ ಈ ಹಣ ಎಲ್ಲಿ ಹೋಗಿದೆ? 1.14 ಕೋಟಿ ಗೃಹಲಕ್ಷ್ಮಿಯರ ಪಾಲಿಗೆ ಇದೊಂದು ದೊಡ್ಡ ವಂಚನೆ’ ಎಂದು ಹೇಳಿದ್ದಾರೆ.

‘ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಈ ಹಣ ಬಿಡುಗಡೆ ಆಗಿದೆ ಎಂದು ಉತ್ತರ ನೀಡಿದ್ದರು. ಆದರೆ, ಆ ಹಣ ಫಲಾನುಭವಿಗಳಿಗೆ ಈವರೆಗೂ ಸಿಕ್ಕಿಲ್ಲ. ಈ ಬಗ್ಗೆ ನೀವೇ ಸ್ಪಷ್ಟನೆ ನೀಡಬೇಕು. ಸಚಿವೆ ಉತ್ತರ ನೀಡಿ ಐದು ತಿಂಗಳು ಕಳೆದಿದೆ. ಯಾವುದೇ ಪ್ರಯೋಜನ ಆಗಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.