ಬೆಂಗಳೂರು: ‘ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಸಿಗದೇ ಇರುವ ಕುರಿತು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯದಾದ್ಯಂತ ಜಾಗೃತಿ ಮೂಡಿಸುವ ಜತೆಗೆ ಹೋರಾಟ ನಡೆಸಲಿದೆ’ ಎಂದು ಮೋರ್ಚಾದ ರಾಜ್ಯ ಅಧ್ಯಕ್ಷೆ ಸಿ.ಮಂಜುಳಾ ತಿಳಿಸಿದರು.

ಬೆಂಗಳೂರು ನಗರ ದಕ್ಷಿಣ ಬಿಜೆಪಿ ಘಟಕ ಜೆ.ಪಿ ನಗರದ ಆರ್.ವಿ. ಡೆಂಟಲ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಮಹಿಳಾ ಮೀಸಲಾತಿ ಮಸೂದೆ–ಸವಾಲುಗಳು ಹಾಗೂ ಪರಿಹಾರಗಳು’ ಸಬಲ ನಾರಿ- ಸಮರ್ಥ ಭಾರತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ಆಡಳಿತ ಬಹುತೇಕ ಕುಟುಂಬಗಳ ಹಿಡಿತದಲ್ಲಿದೆ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ನಂತರ ಪ್ರಿಯಾಂಕಾ ಗಾಂಧಿ, ಡಿಎಂಕೆಯಲ್ಲಿ ಕನಿಮೋಳಿ, ಎನ್ಸಿಪಿಯಲ್ಲಿ ಸುಪ್ರಿಯಾ ಸುಳೆ, ಸಮಾಜವಾದಿ ಪಕ್ಷದಲ್ಲಿ ಡಿಂಪಲ್ ಯಾದವ್... ಹೀಗೆ ಮಹಿಳೆಯರು ಸಂಸತ್ತಿನಲ್ಲಿದ್ದಾರೆ. ಬಿಜೆಪಿಯಿಂದ ಜನಪ್ರತಿನಿಧಿಗಳಾಗಿರುವವರಲ್ಲಿ ಹೆಚ್ಚಿನವರು ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲದವರು. ಬೇರೆ ಮಹಿಳೆಯರು ಆಯ್ಕೆಯಾದರೆ ತಮ್ಮ ಸ್ಥಾನಕ್ಕೆ ಕುತ್ತು ಬರುವ ಆತಂಕದಿಂದ ವಿರೋಧ ಪಕ್ಷಗಳು ಮಹಿಳಾ ಮೀಸಲು ವಿರೋಧಿಸುತ್ತಿವೆ’ ಎಂದು ಟೀಕಿಸಿದರು.

ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಮಾತನಾಡಿ, ‘ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದಾಗ ವಿರೋಧ ಪಕ್ಷಗಳು ಒಂದಾಗಿ ಸೋಲಿಸಿದವು. ಇದನ್ನು ಜಾರಿಗೊಳಿಸುತ್ತಿರುವ ಉದ್ದೇಶ, ಇದರಿಂದ ಮಹಿಳೆಯರಿಗೆ ಸಿಗುವ ಅವಕಾಶಗಳ ಕುರಿತು ತಿಳಿಸಿದರೂ ಅರ್ಥ ಮಾಡಿಕೊಳ್ಳಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದರ ಯಶಸ್ಸಿನ ಲಾಭ ಸಿಗುತ್ತದೆ ಎಂಬ ಭಯದಲ್ಲಿ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಮೀಸಲಾತಿ ಜಾರಿಯಿಂದ ನಮ್ಮ ಸರ್ಕಾರ, ಬಿಜೆಪಿ ಹಿಂದೆ ಸರಿಯುವುದಿಲ್ಲ’ ಎಂದರು.

ಶಾಸಕ ಸಿ.ಕೆ. ರಾಮಮೂರ್ತಿ ಮಾತನಾಡಿ, ‘ಕಾಂಗ್ರೆಸ್ ಹಿಂದಿನಿಂದಲೂಮಹಿಳೆಯರಿಗೆ ಸಿಗಬಹುದಾದ ಸಾಂವಿಧಾನಿಕ ಹಕ್ಕುಗಳನ್ನು ತಪ್ಪಿಸುತ್ತಲೇಬಂದಿದೆ. ಗಂಗೆ, ನರ್ಮದಾ, ಸಿಂಧೂ ಎಂದು ನದಿಗಳಿಗೆ ಮಹಿಳೆಯರಹೆಸರನ್ನು ಇಟ್ಟು ಗೌರವಿಸಿರುವ ಭಾರತದಲ್ಲಿ ಅವರಿಗೆ ಅಗೌರವ ತೋರು ವವರನ್ನು ಸಹಿಸಿಕೊಳ್ಳಬಾರದು. ಇದರ ವಿರುದ್ಧ ಹೋರಾಟ ರೂಪಿಸ ಲಾಗುವುದು’ ಎಂದು ಹೇಳಿದರು.

ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಮಹಿಳಾ ಮೋರ್ಚಾ ದಕ್ಷಿಣ ಜಿಲ್ಲಾಧ್ಯಕ್ಷೆ ಶ್ವೇತಾ ರಾಘವೇಂದ್ರ, ಮುಖಂಡರಾದ ಪದ್ಮ, ನೀಲವೇಣಿ, ಪಾಲಿಕೆ ಮಾಜಿ ಸದಸ್ಯರಾದ ನಾಗರತ್ನಮ್ಮ, ಪ್ರತಿಭಾ ಧನರಾಜ್, ಪಲ್ಲವಿ ಚನ್ನಪ್ಪ, ರಾಜೇಶ್ವರಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-4-1930030608

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.