ವಿಚಾರಣೆ ವೇಳೆ ನ್ಯಾಯಪೀಠವು, ಅರ್ಜಿದಾರರಾದ ಉಡುಪಿ ಜಿಲ್ಲೆಯ ಬಡಗಬೆಟ್ಟಿನ, ‘ಕರ್ನಾಟಕ ರಾಜ್ಯ ಎಲ್‌ಪಿಜಿ ಗ್ರಾಹಕರ ಸಂಘ’ದ ಶೀರ್ಷಿಕೆಯನ್ನು ಗಮನಿಸಿ, ‘ಇದೇನಿದು, ಇದ್ಯಾವ ಸಂಘ, ಗ್ರಾಹಕರ ಅನುಮತಿ ಇಲ್ಲದೆ ಈ ಸಂಘ ಅಧಿಕಾರ ಚಲಾಯಿಸುತ್ತಿದೆ. ಇಂತಹ ಸಂಘಗಳ ಹೆಸರಲ್ಲಿ ಬ್ಲಾಕ್‌ಮೇಲ್ ಮಾಡಬೇಡಿ. ಅಷ್ಟಕ್ಕೂ ಸಹಕಾರ ಸಂಘಗಳ ನೋಂದಣಿ ಕಾಯ್ದೆಯಡಿ ಇಂತಹ ಸಂಘ ಸ್ಥಾಪಿಸಲು ಅವಕಾಶ ಇದೆಯೇ? ಇಂತಹುದ್ದೊಂದು ಸಂಘ ಅಸ್ತಿತ್ವಕ್ಕೆ ಬರಲು ಅವಕಾಶ ಸಿಕ್ಕಿದ್ದಾದರೂ ಹೇಗೆ? ಅವಕಾಶ ಕೊಟ್ಟವರು ಯಾರು? ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ತಾಕೀತು ಮಾಡಿತು.