ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸವನ್ನು ಬಿ.ಎಸ್.ಯಡಿಯೂರಪ್ಪ (ಬಿಎಸ್ವೈ) ಅವರ ಉಲ್ಲೇಖವಿಲ್ಲದೆ ಬರೆಯಲು ಸಾಧ್ಯವಿಲ್ಲ. ಮಂಡ್ಯದ ಬೂಕನಕೆರೆಯ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ, ಶಿವಮೊಗ್ಗದ ಶಿಕಾರಿಪುರವನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು, ದಕ್ಷಿಣ ಭಾರತದಲ್ಲಿ ಬಿಜೆಪಿಯ ಭದ್ರಕೋಟೆ ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮೇ ತಿಂಗಳಿಗೆ ಬಿ.ಎಸ್.ಯಡಿಯೂರಪ್ಪನವರು ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿ 50 ವರ್ಷಗಳು ಕಳೆಯುತ್ತಿವೆ. ಈ 5ದಶಕಗಳ ಸುದೀರ್ಘ ಹಾದಿ ಸಾಮಾನ್ಯ ಕಾರ್ಯಕರ್ತನೋರ್ವ ರಾಜ್ಯಾಡಳಿತ ಶಕ್ತಿಕೇಂದ್ರದ ಚುಕ್ಕಾಣಿ ಹಿಡಿವ ಕಥೆಯಾಗಿ ಅನೇಕರಿಗೆ ಸ್ಪೂರ್ತಿಯ ಸ್ವರೂಪವಾಗಿದೆ. ಯಾವುದೇ ರಾಜಕೀಯದ ಹಿನ್ನೆಲೆಯಿಲ್ಲದೇ ಸಾಮಾನ್ಯ ಗುಮಾಸ್ತ ವೃತ್ತಿಯ ಓರ್ವ ವ್ಯಕ್ತಿ ರಾಜಕೀಯ ರಂಗದಲ್ಲಿ ಮಹತ್ತರ ಸ್ಥಾನಕ್ಕೇರುವ ಘಟ್ಟಗಳು ನಿಜಕ್ಕೂ ರೋಚಕ.

1943ರಲ್ಲಿ ಜನಿಸಿದ ಯಡಿಯೂರಪ್ಪನವರ ಜೀವನ ಸತತ ಸಂಘರ್ಷಗಳಿಂದಲೇ ಕೂಡಿತ್ತು. ಸಾಮಾನ್ಯ ಗುಮಾಸ್ತ ವೃತ್ತಿ ಜೀವನ ಆರಂಭಿಸಿದ ಅವರು, ನಂತರ ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡಿದರು. ಕೊನೆಗೆ ಶಿಕಾರಿಪುರದಲ್ಲಿ ಹಾರ್ಡ್ವೇರ್ ಮಳಿಗೆಯನ್ನು ತೆರೆದರು. ಆದರೆ, ಅವರ ಮನಸ್ಸು ಸಮಾಜ ಸೇವೆಯತ್ತ ತುಡಿಯುತ್ತಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡ ಅವರು, 1972ರಲ್ಲಿ ಶಿಕಾರಿಪುರ ಪುರಸಭೆಯ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಧುಮುಕಿದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ (1975-77) ಜೈಲುವಾಸ ಅನುಭವಿಸಿದ್ದು ಅವರ ರಾಜಕೀಯ ವ್ಯಕ್ತಿತ್ವಕ್ಕೆ ಹೊಸ ಆಯಾಮ ನೀಡಿತು.

80ರ ದಶಕದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಕೇವಲ ಒಂದು ಸಣ್ಣ ಶಕ್ತಿಯಾಗಿತ್ತು. 1983ರಲ್ಲಿ ಮೊದಲ ಬಾರಿಗೆ ಶಿಕಾರಿಪುರದಿಂದ ಶಾಸಕರಾಗಿ ಆಯ್ಕೆಯಾದ ಯಡಿಯೂರಪ್ಪ, ಅಂದಿನಿಂದ ಆ ಕ್ಷೇತ್ರವನ್ನು ತಮ್ಮ ಅವಿಭಾಜ್ಯ ಅಂಗವನ್ನಾಗಿಸಿಕೊಂಡರು. ಹಳ್ಳಿ ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಿ, ರೈತರ ಪರವಾಗಿ ಧ್ವನಿ ಎತ್ತಿದ ಅವರು 'ರೈತ ನಾಯಕ'ನಾಗಿ ಬೆಳೆದರು. ಬಗರ್ ಹುಕುಂ ಸಾಗುವಳಿ ಹೋರಾಟ ಮತ್ತು ಬೆಂಬಲ ಬೆಲೆಗಾಗಿ ಅವರು ನಡೆಸಿದ ಹೋರಾಟಗಳು ಅವರಿಗೆ ಜನಸಾಮಾನ್ಯರ ಬೆಂಬಲ ತಂದುಕೊಟ್ಟವು.

2006ರಲ್ಲಿ ಜೆಡಿಎಸ್ ಜೊತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಉಪಮುಖ್ಯಮಂತ್ರಿಯಾಗಿ ಮತ್ತು ಹಣಕಾಸು ಸಚಿವರಾಗಿ ಅವರು ಮಂಡಿಸಿದ ಬಜೆಟ್ಗಳು ಜನಪ್ರಿಯವಾದವು. ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ 'ಭಾಗ್ಯಲಕ್ಷ್ಮಿ' ಯೋಜನೆ ಮತ್ತು ಶಾಲಾ ಮಕ್ಕಳಿಗೆ 'ಸೈಕಲ್ ವಿತರಣೆ'ಯಂತಹ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದರು.

ಬಿಜೆಪಿಗೆ ದಕ್ಷಿಣದ ಹೆಬ್ಬಾಗಿಲು: 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನಗಳನ್ನು ಗೆದ್ದು, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಿತು. ಯಡಿಯೂರಪ್ಪನವರು ಪೂರ್ಣ ಪ್ರಮಾಣದ ಮುಖ್ಯಮಂತ್ರಿಯಾದರು. ಈ ಅವಧಿಯಲ್ಲಿ ಅವರು ಕೃಷಿಗಾಗಿಯೇ ಪ್ರತ್ಯೇಕ ಬಜೆಟ್ ಮಂಡಿಸಿ ದಾಖಲೆ ಬರೆದರು. ಮಠ-ಮಾನ್ಯಗಳಿಗೆ ಅನುದಾನ ನೀಡುವುದರ ಮೂಲಕ ಸಾಂಸ್ಕೃತಿಕವಾಗಿಯೂ ಪ್ರಭಾವ ಬೀರಿದರು. ರಾಜಕೀಯ ಜೀವನವು ಸದಾ ಏಳುಬೀಳುಗಳಿಂದ ಕೂಡಿತ್ತು. ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ 2011ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ನಂತರ ಬಿಜೆಪಿ ತೊರೆದು 'ಕರ್ನಾಟಕ ಜನತಾ ಪಕ್ಷ' (ಕೆಜೆಪಿ) ಸ್ಥಾಪಿಸಿದರು. 2013ರ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಇದು ಕಾರಣವಾಯಿತು. ಆದರೆ, 2014ರ ಲೋಕಸಭಾ ಚುನಾವಣೆಗೂ ಮುನ್ನ ನರೇಂದ್ರ ಮೋದಿಯವರ ನೇತೃತ್ವದ ಅಡಿಯಲ್ಲಿ ಮತ್ತೆ ಬಿಜೆಪಿಗೆ ಮರಳಿದರು. ಇದು ಬಿಜೆಪಿಗೆ ದಕ್ಷಿಣದಲ್ಲಿ ಹೊಸ ಚೈತನ್ಯ ನೀಡಿತು.

2019ರಲ್ಲಿ ಯಡಿಯೂರಪ್ಪನವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾದರು. ಕೊರೊನಾ ಸಂಕಷ್ಟದ ಕಾಲದಲ್ಲಿ 70ರ ಹರೆಯದಲ್ಲೂ ರಾಜ್ಯಾದ್ಯಂತ ಓಡಾಡಿ ಆಡಳಿತ ನಡೆಸಿದರು. ಗೋಹತ್ಯೆ ನಿಷೇಧ ಕಾಯ್ದೆ ಮತ್ತು ತೃತೀಯ ಲಿಂಗಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವಂತಹ ಪ್ರಮುಖ ನಿರ್ಧಾರಗಳನ್ನು ಕೈಗೊಂಡರು. 2021ರಲ್ಲಿ ಬಿಎಸ್ವೈ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೂ, ಅವರ ಪ್ರಭಾವ ಕುಂದಿಲ್ಲ. ಅವರ ಪುತ್ರ ಬಿ.ವೈ. ವಿಜಯೇಂದ್ರ ಈಗ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಪ್ರಸ್ತುತ ಚಿತ್ರದುರ್ಗದಲ್ಲಿ ನಡೆಯುತ್ತಿರುವ ಅವರ 50 ವರ್ಷಗಳ ಸಾರ್ವಜನಿಕ ಜೀವನದ ಸಂಭ್ರಮಕ್ಕೆ ಅಮಿತ್ ಶಾ ಸೇರಿದಂತೆ ರಾಷ್ಟ್ರೀಯ ನಾಯಕರು ಆಗಮಿಸುತ್ತಿರುವುದು ಅವರ ಶಕ್ತಿಗೆ ಸಾಕ್ಷಿ. ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕನಾಗಿ ಮಾತ್ರವಲ್ಲದೆ, ರಾಜ್ಯದ ಸರ್ವ ಜನಾಂಗದ ಶಾಂತಿಯ ತೋಟದ ರಕ್ಷಕನಾಗಿ ಬಿಎಸ್ವೈ ಕರ್ನಾಟಕದ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅಧಿಕಾರವಿರಲಿ ಇಲ್ಲದಿರಲಿ, ಯಡಿಯೂರಪ್ಪ ಎಂಬ ಹೆಸರು ಕರ್ನಾಟಕ ಬಿಜೆಪಿಯ ಅಸ್ಮಿತೆಯಾಗಿ ಉಳಿಯಲಿದೆ.

ಸಂಘದ ಗರಡಿಯಿಂದ ರಾಜಕೀಯ ಪ್ರಗತಿ : ಕರ್ನಾಟಕದ ರಾಜಕೀಯ ವಲಯದಲ್ಲಿ ಪ್ರೀತಿಯಿಂದ 'ರಾಜಾಹುಲಿ' ಎಂದೇ ಕರೆಸಿಕೊಳ್ಳುವ ಬಿ.ಎಸ್.ಯಡಿಯೂರಪ್ಪ ಅವರ ಸುದೀರ್ಘ 50 ವರ್ಷಗಳ ರಾಜಕೀಯ ಪಯಣದ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮಹತ್ತರ ಪಾತ್ರ ವಹಿಸಿದೆ. ಸ್ವತಃ ಯಡಿಯೂರಪ್ಪನವರೇ ಹಲವು ಬಾರಿ ಹೇಳಿಕೊಂಡಿರುವಂತೆ, ಅವರು ಇಂದು ಈ ಹಂತಕ್ಕೆ ತಲುಪಲು ಆರ್ಎಸ್ಎಸ್ ನೀಡಿದ ಶಿಸ್ತು ಮತ್ತು ತರಬೇತಿಯೇ ಮುಖ್ಯ ಕಾರಣ. ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಜನಿಸಿದ ಯಡಿಯೂರಪ್ಪನವರು ಶಿಕಾರಿಪುರಕ್ಕೆ ವಲಸೆ ಬಂದ ನಂತರ ಆರ್ಎಸ್ಎಸ್ನ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡರು. 1970ರ ದಶಕದಲ್ಲಿ ಆರ್ಎಸ್ಎಸ್ನ ತಾಲೂಕು ಘಟಕದ ಜವಾಬ್ದಾರಿಯನ್ನು ಹೊತ್ತುಕೊಂಡು ಸಂಘಟನೆಯನ್ನು ಬಲಪಡಿಸಿದರು. ಆರ್ಎಸ್ಎಸ್ ಪ್ರೇರಣೆಯಿಂದ ಜನಸಂಘವನ್ನು ಸೇರಿದ ಇವರು, 1972ರಲ್ಲಿ ಶಿಕಾರಿಪುರ ಪುರಸಭೆಯ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಕ್ರಿಯ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟರು.

1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆರ್ಎಸ್ಎಸ್ ಕಾರ್ಯಕರ್ತರ ಮೇಲೆ ನಡೆದ ಕ್ರಮಗಳ ವಿರುದ್ಧ ಧ್ವನಿ ಎತ್ತಿದ ಯಡಿಯೂರಪ್ಪನವರು, ಸುಮಾರು 45 ದಿನಗಳ ಕಾಲ ಜೈಲುವಾಸ ಅನುಭವಿಸಿದರು. ಬಳ್ಳಾರಿ ಮತ್ತು ಶಿವಮೊಗ್ಗದ ಜೈಲುಗಳಲ್ಲಿ ಕಳೆದ ಈ ದಿನಗಳು ಅವರ ರಾಜಕೀಯ ವ್ಯಕ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿದವು.

ವಿಧಾನಸಭೆಯಲ್ಲಿ ತಮ್ಮ ವಿದಾಯದ ಭಾಷಣ ಮಾಡುವಾಗ ಯಡಿಯೂರಪ್ಪನವರು ಅತ್ಯಂತ ಭಾವುಕರಾಗಿ ಆರ್ಎಸ್ಎಸ್ ಕೊಡುಗೆಯನ್ನು ಸ್ಮರಿಸಿದ್ದರು. 'ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ಆರ್ಎಸ್ಎಸ್ ನೀಡಿದ ತರಬೇತಿಯೇ ಕಾರಣ. ಸಂಘದ ಸಂಸ್ಕಾರವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನ ಉಸಿರಿರುವ ತನಕ ಬಿಜೆಪಿಯನ್ನು ಕಟ್ಟಲು ಶ್ರಮಿಸುತ್ತೇನೆ' ಎಂದಿದ್ದರು. 1980ರಲ್ಲಿ ಬಿಜೆಪಿ ಸ್ಥಾಪನೆಯಾದಾಗ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಜವಾಬ್ದಾರಿ ಹೊತ್ತು, ನಂತರ ರಾಜ್ಯದಾದ್ಯಂತ ಪಕ್ಷವನ್ನು ಕಟ್ಟಿ ಬೆಳೆಸಿದರು. ಅನಂತಕುಮಾರ್ ಮತ್ತು ಇತರ ನಾಯಕರೊಂದಿಗೆ ಸೇರಿ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-51-454296189

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.