ಬೆಂಗಳೂರು: ಕರ್ನಾಟಕ ರಾಜಕಾರಣದ ದಿಗ್ಗಜ, ಹೋರಾಟದ ಹರಿಕಾರ ಬಿ.ಎಸ್. ಯಡಿಯೂರಪ್ಪನವರ ಹಾದಿಯಲ್ಲೇ ಅವರ ರಾಜಕೀಯ ಪರಂಪರೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನೀಗ ಅವರ ಇಬ್ಬರು ಪುತ್ರರು ಮುಂದುವರೆಸುತ್ತಿದ್ದಾರೆ. ಶಿವಮೊಗ್ಗದ ಸಂಸದರಾಗಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಬಿ.ವೈ.ರಾಘವೇಂದ್ರ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸುತ್ತಿರುವ ಬಿ.ವೈ.ವಿಜಯೇಂದ್ರ ಇಂದು ರಾಜ್ಯ ರಾಜಕಾರಣದ ಅತಿ ಪ್ರಭಾವಿ ಶಕ್ತಿಗಳಾಗಿ ಹೊರಹೊಮ್ಮಿದ್ದಾರೆ. ರಾಘವೇಂದ್ರ ಮತ್ತು ವಿಜಯೇಂದ್ರ ಇಬ್ಬರೂ ತಮ್ಮ ಸಂಘಟನಾ ಚಾತುರ್ಯ ಮತ್ತು ಕಾರ್ಯವೈಖರಿಯ ಮೂಲಕ ತಾವೇನು ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ತಂದೆ ಕಟ್ಟಿದ ಭದ್ರ ಬುನಾದಿಯ ಮೇಲೆ ಈ ಇಬ್ಬರು ನಾಯಕರು ಇಂದು ಬಲಿಷ್ಠ ನಾಯಕತ್ವವನ್ನು ನಿರೂಪಿಸಿಕೊಂಡಿದ್ದಾರೆ.

ಯಶಸ್ವಿ ಸಂಸದ ಬಿ.ವೈ.ರಾಘವೇಂದ್ರ : ಬಿಎಸ್ವೈ ಹಿರಿಯ ಪುತ್ರ ಬಿ.ವೈ.ರಾಘವೇಂದ್ರ ಸಾರ್ವಜನಿಕ ವಲಯದಲ್ಲಿ ತಮ್ಮದೇ ಆದ ಪ್ರತ್ಯೇಕ ಛಾಪು ಮೂಡಿಸಿದ್ದಾರೆ. ಸಮಾಧಾನಿ ಮತ್ತು ಅಭಿವೃದ್ಧಿ ಪರ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರ. ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ಮಾಣ, ರೈಲ್ವೆ ಯೋಜನೆಗಳ ವೇಗವರ್ಧನೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯಲ್ಲಿ ರಾಘವೇಂದ್ರ ಅವರ ಪಾತ್ರ ದೊಡ್ಡದಿದೆ. ತಂದೆಯಂತೆ ಅಬ್ಬರದ ಭಾಷಣಗಳ ಹೊರತಾಗಿ ಕೆಲಸದಿಂದಲೇ ಸದ್ದು ಮಾಡುತ್ತಿದ್ದಾರೆ. ವಿಶೇಷವಾಗಿ, ಜನರೊಂದಿಗೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ರಾಘವೇಂದ್ರ ಅವರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ತಂದುಕೊಟ್ಟಿದೆ. ದೆಹಲಿ ಮಟ್ಟದಲ್ಲಿ ಕರ್ನಾಟಕದ ಮತ್ತು ವಿಶೇಷವಾಗಿ ಮಲೆನಾಡು ಭಾಗದ ರೈತರ ಸಮಸ್ಯೆಗಳ ಬಗ್ಗೆ (ಅಡಿಕೆ ಬೆಳೆಗಾರರ ಸಮಸ್ಯೆ ಇತ್ಯಾದಿ) ಧ್ವನಿ ಎತ್ತುವ ಮೂಲಕ ಅವರು ದಕ್ಷ ಸಂಸದ ಎನಿಸಿಕೊಂಡಿದ್ದಾರೆ.

ಸಂಘಟನಾ ಚತುರ ಬಿ.ವೈ. ವಿಜಯೇಂದ್ರ: ಯಡಿಯೂರಪ್ಪನವರ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ ಅವರ ಬೆಳವಣಿಗೆ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸುವಂತದ್ದು. ಕೇವಲ ಕೆಲವೇ ವರ್ಷಗಳಲ್ಲಿ ಅವರು ರಾಜ್ಯ ಬಿಜೆಪಿಯ ಸಾರಥ್ಯ ವಹಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಅನೇಕ ಟೀಕೆ, ಟಿಪ್ಪಣಿ ಸೇರಿದಂತೆ ರಾಜಕೀಯ ಏಳ್ಗೆಯ ಹಾದಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ. ಯುವ ನಾಯಕನ ಸಾರಥ್ಯ ಎಂದಾಗ ಕೆಲವರಲ್ಲಿ ಸಂದೇಹಗಳು, ಬಿಎಸ್ವೈ ಪ್ರಭಾವದಿಂದ ಅವಕಾಶ ಎನ್ನುವ ಆರೋಪಗಳೆಲ್ಲಾ ಬಿ.ವೈ.ವಿ ಎದುರಿಸಬೇಕಾಯಿತು. ಆದರೆ, ಕೆಲವೇ ದಿನಗಳಲ್ಲಿ ಈ ಆರೋಪಗಳಿಗೆ ತಮ್ಮ ಕೆಲಸದ ಮೂಲಕ ವಿಜಯೇಂದ್ರ ಉತ್ತರ ನೀಡಿದ್ದಾರೆ. ಜತೆಗೆ, ತಮ್ಮ ನಾಯಕತ್ವವನ್ನು ಸಾಬೀತುಪಡಿಸಿಕೊಂಡಿದ್ದಾರೆ ಕೆ.ಆರ್. ಪೇಟೆ ಮತ್ತು ಶಿರಾ ಉಪಚುನಾವಣೆಗಳಲ್ಲಿ ಬಿಜೆಪಿ ಎಂದೂ ಗೆಲ್ಲದ ಕ್ಷೇತ್ರಗಳಲ್ಲಿ ವಿಜಯೇಂದ್ರ ನಡೆಸಿದ ತಂತ್ರಗಾರಿಕೆ ಮತ್ತು ಜಯ ತಂದ ರೀತಿ ಹೈಕಮಾಂಡ್ ಗಮನ ಸೆಳೆಯಿತು. ಇದು ಅವರಿಗೆ 'ಯುವರಾಜ' ಎಂಬ ಪಟ್ಟದ ಜತೆಗೆ ದೊಡ್ಡ ಜವಾಬ್ದಾರಿಯನ್ನು ತಂದುಕೊಟ್ಟಿತು. ಯಡಿಯೂರಪ್ಪ ಅವರ ನಂತರ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಯಾರು ಎಂಬ ಪ್ರಶ್ನೆಗೆ ವಿಜಯೇಂದ್ರ ಅವರು ಉತ್ತರದಂತೆ ಕಾಣುತ್ತಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬುತ್ತಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ವಿಜಯೇಂದ್ರ ಅವರು ನಡೆಸುತ್ತಿರುವ ಹೋರಾಟಗಳು ಅವರನ್ನು ಒಬ್ಬ ಸಮರ್ಥ ನಾಯಕನನ್ನಾಗಿ ರೂಪಿಸಿವೆ. ಒಟ್ಟಾರೆ ರಾಜಕೀಯ ವಲಯದ ವಿಶ್ಲೇಷಕರ ಪ್ರಕಾರ ಬಿ.ಎಸ್.ಯಡಿಯೂರಪ್ಪನವರು ಹಾಕಿಕೊಟ್ಟ ಹಾದಿಯಲ್ಲಿ ರಾಘವೇಂದ್ರ ಮತ್ತು ವಿಜಯೇಂದ್ರ ಯಶಸ್ವಿಯಾಗಿ ಸಾಗುತ್ತಿದ್ದಾರೆ. ರಾಘವೇಂದ್ರ ಅವರು ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿಯ ಮುಖವಾದರೆ, ವಿಜಯೇಂದ್ರ ಅವರು ರಾಜ್ಯ ಮಟ್ಟದಲ್ಲಿ ಸಂಘಟನೆಯ ಶಕ್ತಿಯಾಗಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಮೂಲಕ ಈ ಸಹೋದರರು ತಮ್ಮ ತಂದೆಯ ರಾಜಕೀಯ ಘನತೆಯನ್ನು ಎತ್ತಿ ಹಿಡಿಯುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಯಡಿಯೂರಪ್ಪನವರ ಹೆಸರು ಹೇಗೆ ಶಾಶ್ವತವೋ, ಹಾಗೆಯೇ ಅವರ ಮಕ್ಕಳಾದ ರಾಘವೇಂದ್ರ ಮತ್ತು ವಿಜಯೇಂದ್ರ ಕೂಡ ತಮ್ಮದೇ ಆದ ಮುದ್ರೆಯನ್ನು ಒತ್ತಲು ಸಜ್ಜಾಗಿದ್ದಾರೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-51-2036608985

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.