ಬೆಂಗಳೂರು: ಐಪಿಎಲ್ ಕ್ರಿಕೆಟ್ ವೇಳೆ ಶಾಸಕರಿಗೆ ತಲಾ ಐದು ಟಿಕೆಟ್ ಕೊಡಬೇಕು ಎಂಬ ವಿಚಾರದ ಪರವಾಗಿ ನಾನಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಕಾಂಗ್ರೆಸ್ನ ಕೆಲವು ಸದಸ್ಯರು ಶಾಸಕರಿಗೆ ತಲಾ 5 ಟಿಕೆಟ್ ನೀಡಬೇಕು, ಪಂದ್ಯ ವೀಕ್ಷಣೆಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಒತ್ತಾಯಿಸಿದ್ದರು. ಸಭಾಧ್ಯಕ್ಷ ಯು.ಟಿ.ಖಾದರ್ ಕೂಡ ಇದನ್ನು ಬಲವಾಗಿ ಪ್ರತಿಪಾದಿಸಿದ್ದರು.

ಈ ಕುರಿತು ವಿಜಯೇಂದ್ರ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಒಬ್ಬ ಶಾಸಕ, ಜನಪ್ರತಿನಿಧಿ ಜನ ಸಾಮಾನ್ಯರಿಗಿಂತ ವಿಭಿನ್ನ, ವಿಐಪಿ ಎಂಬುದು ಖಂಡಿತಾ ಒಳ್ಳೆಯ ಬೆಳವಣಿಗೆ ಅಲ್ಲ. ಇದಕ್ಕೆ ನನ್ನ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದರು.

ಸದನದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷ ಶಾಸಕರ ಹೇಳಿಕೆಯನ್ನು ಗಮನಿಸಿದ್ದೇನೆ. ವೈಯಕ್ತಿಕವಾಗಿ ಅವರ ಹೇಳಿಕೆಗಳನ್ನು ಒಪ್ಪುವುದಿಲ್ಲ. ಜನಸಾಮಾನ್ಯರು ರಾಜಕಾರಣಿಗಳನ್ನು ಯಾವ ರೀತಿ ನೋಡುತ್ತಾರೆ ಎಂಬುದನ್ನು ಪ್ರತಿಕೆಗಳು ಮತ್ತು ಟಿ.ವಿಗಳಲ್ಲಿ ನೋಡುತ್ತಿದ್ದೇವೆ.

ಕಳೆದ ಬಾರಿ ಇದೇ ಐಪಿಎಲ್ ಪಂದ್ಯದ ವೇಳೆ ಆಡಳಿತ ಪಕ್ಷದ ಮೂರ್ಖತನದಿಂದ 11 ಮುಗ್ದರು ಪ್ರಾಣ ಕಳೆದುಕೊಂಡಿದ್ದರು. ರಾಜ್ಯದ ಮತ್ತು ದೇಶದ ಜನರು ಅದನ್ನು ಮರೆತಿಲ್ಲ. ಇಂಥ ಸಂದರ್ಭದಲ್ಲಿ ಇಂಥ ಹೇಳಿಕೆಗಳ ಅವಶ್ಯಕತೆ ಇತ್ತೇ ಎಂಬುದು ನನಗಂತೂ ಅರ್ಥವಾಗುವುದಿಲ್ಲ ಎಂದು ವಿಜಯೇಂದ್ರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.