ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ), ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹಾಗೂ ವಾಹನಗಳ ಮೇಲೆ ತೆರಿಗೆ ವಿಧಿಸುವಲ್ಲಿ ಆಗಿರುವ ಲೋಪಗಳ ಕಾರಣ 2023–24ನೇ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರಕ್ಕೆ ಒಟ್ಟು ₹243.33 ಕೋಟಿ ಖೋತಾ ಆಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

ಹಿಂದಿನ ಆರ್ಥಿಕ ವರ್ಷಗಳಲ್ಲಿ ವಸೂಲಿಗೆ ಸೂಚಿಸಲಾಗಿದ್ದ ದಂಡದ ಮೊತ್ತವನ್ನೂ ಇದು ಒಳಗೊಂಡಿದೆ.

ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾದ, ‘ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ರಾಜ್ಯ ರಾಜಸ್ವದ ವರದಿ 2024ರ ಮಾರ್ಚ್’ನಲ್ಲಿ ಈ ಅಂಶಗಳು ಇವೆ.

ಜಿಎಸ್ಟಿ ಮರುಪಾವತಿ ಪರಿಶೀಲನೆಯಲ್ಲಿ ಲೋಪಗಳು ಆಗಿವೆ. ಅಗತ್ಯಕ್ಕಿಂತ ಹೆಚ್ಚು ಮೊತ್ತವನ್ನು ಮರುಪಾವತಿ ಮಾಡಲಾಗಿದೆ. ಲೆಕ್ಕಪರಿಶೋಧನೆಗೆ ಒಳಪಡಿಸಿದ 24 ಪ್ರಕರಣಗಳ ಪೈಕಿ 5ರ ದಾಖಲೆಗಳನ್ನು ಮಾತ್ರವೇ ಅಧಿಕಾರಿಗಳು ಒದಗಿಸಿದ್ದು, ₹1.75 ಕೋಟಿಯಷ್ಟು ಮೊತ್ತವನ್ನು ಹೆಚ್ಚುವರಿಯಾಗಿ ಮರುಪಾವತಿ ಮಾಡಲಾಗಿದೆ. 19 ಮರುಪಾವತಿ ಪ್ರಕರಣಗಳ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿಲ್ಲ ಎಂದು ಸಿಎಜಿ ವಿವರಿಸಿದೆ.

2020–21ರ ಅವಧಿಯಲ್ಲಿ ಇದೇ ರೀತಿ 90 ಪ್ರಕರಣಗಳಲ್ಲಿ ₹21.26 ಕೋಟಿ ಆದಾಯ ನಷ್ಟ ಮಾಡಲಾಗಿತ್ತು. 2024ರ ಮಾರ್ಚ್ ಅಂತ್ಯದ ಹೊತ್ತಿಗೂ ಇದನ್ನು ವಸೂಲಿ ಮಾಡಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕಾಗಿ ರಾಜ್ಯದಾದ್ಯಂತ 28 ಗುತ್ತಿಗೆದಾರರು ನಡೆಸಿಕೊಟ್ಟ ವಿವಿಧ ಕಾಮಗಾರಿಗಳಲ್ಲಿ ಒಟ್ಟು ₹7.28 ಕೋಟಿ ತೆರಿಗೆ ನಷ್ಟವಾಗಿದೆ. 2022ರ ಜನವರಿ 1ರ ನಂತರ ನಿರ್ಮಾಣ ಕಾಮಗಾರಿಗಳ ಮೊತ್ತದ ಮೇಲೆ ಶೇ 18ರಷ್ಟು ತೆರಿಗೆ ಪಾವತಿ ಮಾಡಬೇಕಿತ್ತು. ಆದರೆ 2022ರ ಫೆಬ್ರುವರಿ–ಮಾರ್ಚ್ ಅವಧಿಯಲ್ಲಿ ನಡೆಸಿದ ಕಾಮಗಾರಿಗಳೂ ಶೇ 12ರಷ್ಟು ತೆರಿಗೆಯನ್ನಷ್ಟೇ ಪಾವತಿ ಮಾಡಿಸಿಕೊಳ್ಳಲಾಗಿದೆ. ಉಳಿಕೆ ಮೊತ್ತವಾದ ₹7.28 ಕೋಟಿಯನ್ನು ವಸೂಲಿ ಮಾಡಿಲ್ಲ ಎಂದು ವಿವರಿಸಿದೆ.

ವಾಹನಗಳ ಮೇಲೆ ವಿಧಿಸಲಾಗುವ ವಿವಿಧ ರೀತಿಯ ತೆರಿಗೆ ಮತ್ತು ಶುಲ್ಕಗಳ ಸಂಗ್ರಹದಲ್ಲಿ ಸೋರಿಕೆ ಆಗಿರುವ ಕಾರಣ ₹96.68 ಕೋಟಿಯಷ್ಟು ನಷ್ಟವಾಗಿದೆ. 2019–2024ರ ಅವಧಿಯಲ್ಲಿ ವಾಹನಗಳ ಮೇಲೆ ಹಸಿರು ತೆರಿಗೆ ವಿಧಿಸದೇ ಇದ್ದ ಕಾರಣ ₹90.46 ಕೋಟಿ ಖೋತಾ ಆಗಿದೆ. ರಾಜ್ಯದಲ್ಲಿ ಪರವಾನಗಿ ಮತ್ತು ಅರ್ಹ ಯೋಗ್ಯತಾ ಪತ್ರ ಇಲ್ಲದೆ 7 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿದ್ದು, ಅವುಗಳಿಂದ ₹6.22 ಕೋಟಿ ನಷ್ಟವಾಗಿದೆ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.