ನವದೆಹಲಿ: ‘2025-26ನೇ ನೀರಾವರಿ ವರ್ಷದಲ್ಲಿ ಕರ್ನಾಟಕವು ಅನಧಿಕೃತ ಏತ ನೀರಾವರಿ ಯೋಜನೆಗಳ ಮೂಲಕ 9.65 ಟಿಎಂಸಿ ಅಡಿ ನೀರನ್ನು ಅಕ್ರಮವಾಗಿ ಬಳಸಿದೆ. ಈ ಮೂಲಕ ಕಾವೇರಿ ನ್ಯಾಯಮಂಡಳಿಯ ತೀರ್ಪು ಉಲ್ಲಂಘಿಸಿದೆ’ ಎಂದು ತಮಿಳುನಾಡು ಸರ್ಕಾರ ತಗಾದೆ ಎತ್ತಿದೆ.

ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 47ನೇ ಸಭೆಯಲ್ಲಿ ತಮಿಳುನಾಡು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಜೆ.ಜಯಕಂಠನ್ ಅವರು ಕರ್ನಾಟಕದ ವಿರುದ್ಧ ಆರೋಪಗಳ ಸುರಿಮಳೆ ಮಾಡಿದರು.

ನೆರೆ ರಾಜ್ಯವು ಅಕ್ರಮವಾಗಿ ನೀರು ಬಳಸಿ 1.34 ಲಕ್ಷ ಎಕರೆಯಲ್ಲಿ ಬೆಳೆ ಬೆಳೆದಿದೆ. ನೀರಾವರಿ ಯೋಜನೆಯ ವಿವರ, ಪ್ರದೇಶದಲ್ಲಿ ಬೆಳೆದಿರುವ ಬೆಳೆ, ಬೆಳೆಯ ಅವಧಿಯ ವಿವರವನ್ನು ಕಾವೇರಿ ಪ್ರಾಧಿಕಾರಕ್ಕೆ ಒದಗಿಸಿಲ್ಲ. ಕದ್ದು ಮುಚ್ಚಿ ಕಾವೇರಿ ನೀರು ಬಳಸುತ್ತಿರುವ ಕರ್ನಾಟಕದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ನಾಲ್ಕು ಪ್ರಮುಖ ಜಲಾಶಯಗಳಿಂದ ನವೆಂಬರ್ ಹಾಗೂ ಜನವರಿ ಅವಧಿಯಲ್ಲಿ 36 ಟಿಎಂಸಿ ನೀರನ್ನು ಕರ್ನಾಟಕ ಬಳಸಿಕೊಂಡಿದೆ. ಆದರೆ, 3.27 ಲಕ್ಷ ಎಕರೆಯಲ್ಲಿರುವ ರಬಿ ಅರೆ ಒಣ ಬೆಳೆಗಳಿಗೆ 32 ಟಿಎಂಸಿ ಅಡಿ ನೀರು ಸಾಕಾಗುತ್ತದೆ. ಆದರೆ, ಅಗತ್ಯಕ್ಕಿಂತ ಹೆಚ್ಚು ನೀರನ್ನು ಕರ್ನಾಟಕ ಬಳಸಿಕೊಂಡಿದೆ. ಅದರ ಅರ್ಥ ಅರೆ ಒಣ ಬೆಳೆಯ ಪ್ರದೇಶವನ್ನು ವ್ಯಾಪಕ ಪ್ರಮಾಣದಲ್ಲಿ ಹಿಗ್ಗಿಸಿಕೊಂಡಿದೆ. ಜಲಾಶಯದಲ್ಲಿ ಸಂರಕ್ಷಣೆ ಮಾಡಬೇಕಾದ ನೀರನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಅವರು ದೂಷಿಸಿದರು.

‘ನಾಲ್ಕು ಜಲಾಶಯಗಳ ಕಾಲುವೆಗಳ ಮೂಲಕ ನವೆಂಬರ್ 1ರಿಂದ ಡಿಸೆಂಬರ್ 20ರ ಅವಧಿಯಲ್ಲಿ ನೆರೆ ರಾಜ್ಯವು 9.7 ಟಿಎಂಸಿ ನೀರನ್ನು ಬಳಸಿಕೊಂಡಿದೆ. ನ್ಯಾಯಮಂಡಳಿಯ ತೀರ್ಪಿನ ಪ್ರಕಾರ, ಈ ನೀರನ್ನು ಖಾರಿಫ್ ಭತ್ತ ಬೆಳೆಯುವ 1.96 ಲಕ್ಷ ಎಕರೆಗಷ್ಟೇ ಬಳಸಿಕೊಳ್ಳಬೇಕು. ವಾಡಿಕೆ ಪ್ರಕಾರ, ಈ ಬೆಳೆಯ ಕೊಯ್ಲು ನವೆಂಬರ್ 15ರೊಳಗೆ ಮುಗಿಯಬೇಕು. ಆದರೆ, ಆ ಬಳಿಕವೂ 1.94 ಲಕ್ಷ ಎಕರೆಗೆ ನೀರು ಉಣಿಸಲು ಕಾವೇರಿ ನೀರನ್ನು ನಿರಂತರವಾಗಿ ಹರಿಸಲಾಗಿದೆ’ ಎಂದು ಅವರು ಆರೋಪಿಸಿದರು.

‘ಕಾವೇರಿ ನದಿಯ ನೀರನ್ನು ಬಳಸುವ ಮಹದೇಶ್ವರ ನೀರು ಸರಬರಾಜು ಯೋಜನೆಯ ವಿವರಗಳನ್ನೂ ಕರ್ನಾಟಕ ಸರ್ಕಾರ ಒದಗಿಸಿಲ್ಲ. ಜತೆಗೆ, ಕಾಲುವೆಗಳಿಂದ ನೇರವಾಗಿ ನೀರು ಬಳಕೆ ಮಾಡುವ ಏತ ನೀರಾವರಿ ಯೋಜನೆಗಳು ಹಾಗೂ ಸಣ್ಣ ನೀರಾವರಿ ಕೆರೆಗಳ ಮಾಹಿತಿಯನ್ನೂ ನೀಡಿಲ್ಲ’ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ವಾಡಿಕೆಯಷ್ಟು ಮಳೆ ಸುರಿಯದ ವರ್ಷಗಳಲ್ಲಿ ಕರ್ನಾಟಕವು ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರು ಹರಿಸುತ್ತಿಲ್ಲ. ಈ ಬಗ್ಗೆ ಹಿಂದಿನ ಸಭೆಗಳಲ್ಲೂ ಗಮನ ಸೆಳೆಯಲಾಗಿತ್ತು. ಸಂಕಷ್ಟ ಸೂತ್ರ ರೂಪಿಸುವಂತೆ ಹತ್ತು ಹಲವು ಸಲ ಮನವಿ ಅರ್ಪಿಸಲಾಗಿತ್ತು. ಆದರೂ, ಪ್ರಾಧಿಕಾರವು ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಸಂಕಷ್ಟ ಸೂತ್ರ ರೂಪಿಸಲು ಶೀಘ್ರ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಅವರು ಹಕ್ಕೊತ್ತಾಯ ಮಂಡಿಸಿದರು.

ತಮಿಳುನಾಡಿನಿಂದಲೂ ಉಲ್ಲಂಘನೆ: ರಾಜ್ಯ ಆರೋಪ

ಕಾವೇರಿ ನ್ಯಾಯಮಂಡಳಿ ತೀರ್ಪು ಉಲ್ಲಂಘಿಸಿ ತಮಿಳುನಾಡು ಸರ್ಕಾರವು ಮೆಟ್ಟೂರು ಜಲಾಶಯದಿಂದ ಕೃಷಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಸುತ್ತಿದೆ ಎಂದು ಕರ್ನಾಟಕ ಆರೋಪಿಸಿದೆ.

‘ನ್ಯಾಯಮಂಡಳಿ ತೀರ್ಪಿನ ಪ್ರಕಾರ, 1.85 ಲಕ್ಷ ಎಕರೆಯಲ್ಲಿ ಥಳಾಡಿ ಬೆಳೆ ಬೆಳೆಯಲಾಗುತ್ತಿದೆ. ಈ ವರ್ಷ ಡಿಸೆಂಬರ್ನಿಂದ ಇಲ್ಲಿಯವರೆಗೆ ಮೆಟ್ಟೂರು ಜಲಾಶಯದಿಂದ ಪ್ರತಿದಿನ 2,500 ಕ್ಯೂಸೆಕ್ನಿಂದ 14,000 ಕ್ಯೂಸೆಕ್ ವರೆಗೆ ನೀರು ಹರಿಸಲಾಗುತ್ತಿದೆ. ಕಳೆದ ವರ್ಷ ಈ ಅವಧಿಯಲ್ಲಿ 500 ಕ್ಯೂಸೆಕ್ನಿಂದ 1,000 ಕ್ಯೂಸೆಕ್ ನೀರು ಹರಿಸಲಾಗಿತ್ತು. ಇದರಿಂದಾಗಿ, ಜಲಾಶಯದಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದೆ. ಮುಂದಿನ ಜಲ ವರ್ಷಕ್ಕೆ ನೀರು ಉಳಿಯುವುದಿಲ್ಲ. ಇದು ನ್ಯಾಯಮಂಡಳಿಯ ತೀರ್ಪಿನ ಉಲ್ಲಂಘನೆ’ ಎಂದು ಜಲ ಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ದೂರಿದರು.

ಚರ್ಚೆಗೆ ಬಾರದ ಮೇಕೆದಾಟು

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣದ ವಿಷಯವು ಸಭೆಯಲ್ಲಿ ಚರ್ಚೆಗೆ ಬರಲಿಲ್ಲ.

ಈ ಯೋಜನೆಯ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಒಪ್ಪಿಗೆ ಪಡೆಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.