ಬೆಂಗಳೂರು: 2027ರ ಜನಗಣತಿಯ ಮೊದಲ ಹಂತವಾದ ‘ಮನೆಗಳ ಪಟ್ಟಿ ಮತ್ತು ವಸತಿ ಗಣತಿ’ ಪ್ರಕ್ರಿಯೆಯು ರಾಜ್ಯದಲ್ಲಿ ಏಪ್ರಿಲ್ 15ರಿಂದ ಮೇ 15ರವರೆಗೆ ನಡೆಯಲಿದ್ದು, ಈ ಕಾರ್ಯಕ್ಕೆ ಶಿಕ್ಷಕರನ್ನು ಬಳಸಿಕೊಳ್ಳುವಂತೆ ಜನಗಣತಿ ನಿರ್ದೇಶನಾಲಯ ಸೂಚನೆ ನೀಡಿದೆ. ಎರಡನೇ ಹಂತದಲ್ಲಿ 2027ರ ಮಾರ್ಚ್ ತಿಂಗಳಲ್ಲಿ ಜನಸಂಖ್ಯಾ ಗಣತಿ ನಡೆಯಲಿದೆ.

ಆ ಮೂಲಕ, ಒಂದು ವರ್ಷದಲ್ಲಿ ಮೂರನೇ ಬಾರಿಗೆ ಗಣತಿದಾರರಾಗಿ ಕೆಲಸ ನಿಭಾಯಿಸುವ ಹೊಣೆ ಶಿಕ್ಷಕರ ಹೆಗಲೇರಲಿದೆ. 2025ರ ಬೇಸಿಗೆ ರಜೆಯಲ್ಲಿ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ, ನಂತರದ ಮಧ್ಯಂತರ ರಜೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಶಿಕ್ಷಕರು ಗಣತಿದಾರರಾಗಿ ಕೆಲಸ ಮಾಡಿದ್ದರು.

ಗಣತಿ ಅವಧಿಯಲ್ಲಿಯೇ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕೂಡಾ ನಡೆಯಲಿದೆ. ಮತಗಟ್ಟೆ ಅಧಿಕಾರಿಗಳಾಗಿ (ಬಿಎಲ್ಒ) ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ಬಳಸಿಕೊಳ್ಳಬಾರದು ಎಂದೂ ನಿರ್ದೇಶನಾಲಯ ಸೂಚನೆ ನೀಡಿದೆ. ಶಿಕ್ಷಕರ ಕೊರತೆಯಾದರೆ, ಯಾವುದೇ ಇಲಾಖೆಯ ಗ್ರೂಪ್ ‘ಸಿ’ ವೃಂದದ ಅಧಿಕಾರಿಗಳನ್ನು ಬಳಸಿಕೊಳ್ಳುವಂತೆ ತಿಳಿಸಿದೆ.

ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ ನಡೆಯಲಿದೆ. ಈ ಕಾರ್ಯವನ್ನು ಸಮರ್ಪಕವಾಗಿ ನಡೆಸಲು, ಮೊದಲೇ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲು ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳಿಗೆ ಮೂರು ದಿನಗಳ ತರಬೇತಿ ಶಿಬಿರವನ್ನು ನಿರ್ದೇಶನಾಲಯವು ಆಯೋಜಿಸಿದೆ. ಕೆಲವು ಜಿಲ್ಲೆಗಳಲ್ಲಿ ತರಬೇತಿ ಈಗಾಗಲೇ ಮುಗಿದಿದೆ. ಗಣತಿ ಆರಂಭವಾಗುವ 15 ದಿನಗಳ ಮೊದಲೇ, ಜನಗಣತಿ ಆ್ಯಪ್ ಅಥವಾ ಪೋರ್ಟಲ್ ಮೂಲಕ ಸ್ವಯಂ ಮಾಹಿತಿ ದಾಖಲಿಸಿಕೊಳ್ಳಬಹುದು. ಗಣತಿದಾರರ ಸ್ಮಾರ್ಟ್ ಫೋನ್ ಮೀಸಲಾದ ಮೊಬೈಲ್ ಆ್ಯಪ್ ಮೂಲಕ ಆನ್ಲೈನ್ನಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆಫ್ಲೈನ್ನಲ್ಲಿಯೂ ಈ ಆ್ಯಪ್ ಕೆಲಸ ಮಾಡಲಿದ್ದು, ನೆಟ್ವರ್ಕ್ ವ್ಯಾಪ್ತಿಗೆ ಬಂದಾಗ ಸಂಗ್ರಹಿಸಿದ ಮಾಹಿತಿಗಳು ಸರ್ವರ್ಗೆ ಸಂಯೋಜನೆ ಆಗಲಿವೆ. ಗಣತಿ ಪ್ರಕ್ರಿಯೆಯನ್ನು ಆರಂಭದಿಂದ ಮುಕ್ತಾಯದವರೆಗೆ ನಿರ್ವಹಿಸಲು ‘ಜನಗಣತಿ ನಿರ್ವಹಣೆ ಮತ್ತು ಮಾನಿಟರಿಂಗ್ ಸಿಸ್ಟಂ’ (ಸಿಎಂಎಂಎಸ್) ಎಂಬ ವಿಶೇಷ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ.

‘ಮನೆ ಗಣತಿಗೆ ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತರಬೇತಿಯಲ್ಲಿ ತಿಳಿಸಲಾಗಿದೆ. ‘ಮೊದಲ ಹಂತದಲ್ಲಿ ಮನೆ ಗಣತಿ ಮಾತ್ರ ನಡೆಯಲಿದ್ದು, ಕ್ಷೇತ್ರ ಮಟ್ಟದ ಗಣತಿದಾರರು ಎಚ್ಎಲ್ಬಿ (ಹೌಸ್ ಲಿಸ್ಟಿಂಗ್ ಬ್ಲಾಕ್) ಕ್ರಿಯೇಟರ್ ಆ್ಯಪ್ ಬಳಸಿ ಪ್ರತಿ ಬ್ಲಾಕ್ನ ಮನೆಗಳ ಲೊಕೇಶನ್ ಮತ್ತು ವ್ಯಾಪ್ತಿಯನ್ನು ಜಿಯೋ ಟ್ಯಾಗಿಂಗ್ ಮೂಲಕ ಗುರುತಿಸಲಿದ್ದಾರೆ. ಮನೆಗಳಲ್ಲಿ ಎಷ್ಟು ಜನ ಇದ್ದಾರೆ, ಆ ಪ್ರದೇಶದಲ್ಲಿ ಏನೆಲ್ಲ ನಾಗರಿಕ ಸೌಲಭ್ಯಗಳಿವೆ ಎಂದು ಗಣತಿ ಮಾಡಬೇಕು. ಮುಂದಿನ ಗಣತಿಗೆ ಪ್ರಾಥಮಿಕ ಕೆಲಸ ಇದು. ಎರಡನೇ ಹಂತದಲ್ಲಿ ‘ಜಾತಿ ಗಣತಿ’ಯನ್ನೂ ಸೇರಿಸಲಾಗಿದೆ. 1948ರ ಜನಗಣತಿ ಕಾಯ್ದೆಯ ಪ್ರಕಾರ, ಪ್ರತಿಯೊಬ್ಬ ನಾಗರಿಕನು ಜನಗಣತಿ ಅಧಿಕಾರಿ ಕೇಳುವ ಮಾಹಿತಿಯನ್ನು ಕಾನೂನುಬದ್ಧವಾಗಿ ಒದಗಿಸಲೇಬೇಕು. ಜನಗಣತಿ ಅಧಿಕಾರಿಯ ಪ್ರವೇಶಕ್ಕೆ ಅಡ್ಡಿಪಡಿಸುವುದೂ ಕಾನೂನುಬಾಹಿರ’ ಎಂದೂ ಅವರು ವಿವರಿಸಿದರು.

ಈ ಹಿಂದೆ 2011ರಲ್ಲಿ ಕೊನೆಯ ಬಾರಿಗೆ ಜನಗಣತಿ ನಡೆದಿತ್ತು. ಬಳಿಕ 2021ರಲ್ಲಿ ಜನಗಣತಿ ನಡೆಯಬೇಕಾಗಿತ್ತು. ಆದರೆ, ಕೋವಿಡ್ ಕಾರಣಕ್ಕೆ 10 ವರ್ಷಗಳಿಗೆ ಒಮ್ಮೆ ನಡೆಯಬೇಕಾದ ಜನಗಣತಿ ನಡೆದಿರಲಿಲ್ಲ. ಇದೀಗ 2026-27ನೇ ಸಾಲಿನಲ್ಲಿ ಜನಗಣತಿ ನಡೆಯುತ್ತಿದೆ.

ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಗಣತಿ

ಬಿಎಲ್ಒಗಳಾಗಿರುವ ಶಿಕ್ಷಕರಿಗೆ ವಿನಾಯಿತಿ

2ನೇ ಹಂತದಲ್ಲಿ ಗಣತಿ ಜೊತೆ ‘ಜಾತಿ ಗಣತಿ’

700– 800 ಜನಸಂಖ್ಯೆಗೆ ಒಬ್ಬ ಗಣತಿದಾರ

‘ಗಣತಿ ಉದ್ದೇಶಕ್ಕಾಗಿ ಬ್ಲಾಕ್ ರಚಿಸಲಾಗುತ್ತಿದ್ದು, 700ರಿಂದ 800 ಜನಸಂಖ್ಯೆಗೆ ಒಬ್ಬ ಗಣತಿದಾರರನ್ನು ಮತ್ತು ಪ್ರತಿ ಆರು ಜನ ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಲಾಗುವುದು. ಗಣತಿದಾರರಿಗಿಂತ ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಮೇಲ್ವಿಚಾರಕರ ಹುದ್ದೆಗೆ ಪರಿಗಣಿಸಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ತಹಶೀಲ್ದಾರರು ಹಾಗೂ ನಗರ ಪ್ರದೇಶಗಳಲ್ಲಿ ನಗರಸಭೆ, ಪುರಸಭೆಯ ಮುಖ್ಯಾಧಿಕಾರಿಗಳು ಉಸ್ತುವಾರಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಪ್ರಧಾನ ಜನಗಣತಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದು, ಮಹಾನಗರ ಪಾಲಿಕೆಗಳಲ್ಲಿ ಆಯುಕ್ತರು ಈ ಜವಾಬ್ದಾರಿ ನಿಭಾಯಿಸಲಿದ್ದಾರೆ’ ಎಂದು ತರಬೇತಿಯಲ್ಲಿ ಭಾಗವಹಿಸಿದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.