ನವದೆಹಲಿ: ಕರ್ನಾಟಕದಲ್ಲಿ ಕೀಟಗಳ ಕಾಟ ಹಾಗೂ ರೋಗಗಳ ಬಾಧೆಯಿಂದ ಶೇ 15ರಷ್ಟು ತೆಂಗಿನ ತೋಟಗಳು ಹಾನಿಗೊಳಗಾಗಿವೆ ಎಂದು ಕೇಂದ್ರ ಕೃಷಿ ಸಚಿವಾಲಯದ ತಜ್ಞರ ಸಮಿತಿ ವರದಿ ನೀಡಿದೆ.

ರಾಜ್ಯದಲ್ಲಿ ಪ್ರಮುಖ ಕೀಟಗಳು ಹಾಗೂ ರೋಗಗಳನ್ನು ಪತ್ತೆ ಹಚ್ಚಿ ಉಪಶಮನ ಕ್ರಮಗಳನ್ನು ಸೂಚಿಸಲು ಸಚಿವಾಲಯವು 2025ರಲ್ಲಿ ತಜ್ಞರ ಸಮಿತಿ ರಚಿಸಿತ್ತು. ಆ ಸಮಿತಿ ವರದಿ ನೀಡಿ ಹಲವು ಶಿಫಾರಸುಗಳನ್ನು ಮಾಡಿದೆ. ಈ ಬಗ್ಗೆ ಲೋಕಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ಪ್ರಶ್ನೆಗೆ ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ ಠಾಕೂರ್ ಉತ್ತರ ನೀಡಿದ್ದಾರೆ.

ರಾಜ್ಯದಲ್ಲಿ ತೆಂಗಿನ ಉತ್ಪಾದಕತೆ ಸುಧಾರಣೆ ಹಾಗೂ ಕೀಟ ಮತ್ತು ರೋಗ ನಿರ್ವಹಣೆಗೆ ಹೆಚ್ಚಿನ ಗಮನ ಹರಿಸಿ ಕ್ಷೇತ್ರಾಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಐದು ವರ್ಷಗಳಲ್ಲಿ ₹174.55 ಕೋಟಿ ಬಳಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೀಟ ಹಾಗೂ ರೋಗಗಳ ನಿಯಂತ್ರಣಕ್ಕೆ ತೆಂಗು ಅಭಿವೃದ್ಧಿ ಮಂಡಳಿಯು ಐದು ವರ್ಷಗಳಲ್ಲಿ 144 ಕಾರ್ಯಕ್ರಮಗಳನ್ನು ನಡೆಸಿದೆ. ತೆಂಗಿನಕಾಯಿ ಕಪ್ಪು ತಲೆಯ ಮರಿಹುಳುಗಳನ್ನು ನಿಯಂತ್ರಿಸಲು ಮಂಡಳಿಯು ಮಂಡ್ಯದಲ್ಲಿರುವ ಫಾರಂನಲ್ಲಿ ಐದು ವರ್ಷಗಳಲ್ಲಿ 11.27 ಲಕ್ಷ ಜೈವಿಕ ನಿಯಂತ್ರಣ ಎಕ್ಟೋಪ್ಯಾರಾಸಿಟಾಯ್ಡ್ ಉತ್ಪಾದಿಸಿ ವಿತರಿಸಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೀಟ ಮತ್ತು ರೋಗ ನಿರ್ವಹಣೆಗೆ ವಿಶೇಷ ಒತ್ತು ನೀಡಿ ಪ್ರಸಕ್ತ ವರ್ಷ 'ತೆಂಗು ಆಧಾರಿತ ಬೆಳೆ ಪದ್ಧತಿಯ ಮೂಲಕ ಉತ್ಪಾದಕತೆ ಸುಧಾರಣೆ'ಗಾಗಿ (3,757 ಹೆಕ್ಟೇರ್) ₹10.89 ಕೋಟಿ ಮತ್ತು ಮರು ನಾಟಿ ಮತ್ತು ಪುನರುಜ್ಜೀವನಕ್ಕಾಗಿ (1,000 ಹೆಕ್ಟೇರ್) ₹4.52 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.