ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ: 9 ಸಾವಿರ ಸೀಟು ಹಿಂ‍ಪಡೆದ ಕೆಇಎ

Published 3 ಆಗಸ್ಟ್ 2023, 16:18 IST
Last Updated 3 ಆಗಸ್ಟ್ 2023, 16:18 IST
ಅಕ್ಷರ ಗಾತ್ರ

ಬೆಂಗಳೂರು: 9 ಸಾವಿರ ಎಂಜಿನಿಯರಿಂಗ್‌ ಹಾಗೂ ಆರ್ಕಿಟೆಕ್ಚರ್‌ ಸೀಟುಗಳನ್ನು ಸಿಇಟಿ ಅಂತಿಮ ಹಂಚಿಕೆ ಪಟ್ಟಿಯಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕೈಬಿಟ್ಟಿದೆ.

ಹಲವು ಎಂಜಿನಿಯರಿಂಗ್‌ ಕಾಲೇಜುಗಳು ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆದಿಲ್ಲ. ಸರ್ಕಾರದಿಂದ ಅನುಮೋದನೆ ಪಡೆದಿಲ್ಲ. ಹಾಗಾಗಿ, ರಾಜ್ಯದ 90ಕ್ಕೂ ಹೆಚ್ಚು ಕಾಲೇಜುಗಳ ಸೀಟುಗಳನ್ನು ಹಂಚಿಕೆ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ. ನಿಯಮದ ಪ್ರಕಾರ ದಾಖಲೆಗಳನ್ನು ಒದಗಿಸಿದ ನಂತರ ಮರು ಸೇರ್ಪಡೆ ಮಾಡಲಾಗುವುದು ಎಂದು ಕೆಇಎ ತಿಳಿಸಿದೆ. 

ಆರ್‌.ವಿ ಎಂಜಿನಿಯರಿಂಗ್‌ ಕಾಲೇಜು, ಎಂ.ಎಸ್. ರಾಮಯ್ಯ, ದಯಾನಂದ ಸಾಗರ್‌, ಬಿಎಂಎಸ್‌ ಸೇರಿದಂತೆ ಹಲವು ಕಾಲೇಜುಗಳು ಸೀಟು ಕೈಬಿಡಲಾದ ಪಟ್ಟಿಯಲ್ಲಿವೆ. 

‘ಮೊದಲು ಪ್ರಕಟಿಸಿದ ಸೀಟುಗಳಿಗೂ, ಅಂತಿಮ ಪಟ್ಟಿಗೂ ಸಾಕಷ್ಟು ವ್ಯತ್ಯಾಸವಿದೆ. ಈ ಭಿನ್ನಾಭಿಪ್ರಾಯ ಬಗೆಹರಿಯುವವರೆಗೆ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಬಾರದು’ ಎಂದು ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸಂಘವು (ಕುಪೆಕಾ) ಪ್ರಾಧಿಕಾರಕ್ಕೆ ಪತ್ರ ಬರೆದು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT