ಮೈಸೂರು: 'ಕಾಂಗ್ರೆಸ್ ಹೈಕಮಾಂಡ್ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ. ದಲಿತ ನಾಯಕರು ಸಚಿವ ಸ್ಥಾನ ಪಡೆಯದೆ ಪ್ರತಿಭಟಿಸಲಿ' ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ಡಿಕೆಶಿ ಮುಖ್ಯಮಂತ್ರಿಯಾದರೆ ನೋವಿಲ್ಲ. ಆದರೆ ದಲಿತರನ್ನು ವೋಟ್ ಬ್ಯಾಂಕ್ ಮಾಡಿ, ನಿಮ್ಮ ನಾಯಕರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ವಂಚನೆ ಮಾಡಿರುವ ಬಗ್ಗೆ ಬೇಸರವಿದೆ' ಎಂದರು.

'ಕಾಂಗ್ರೆಸ್ನಲ್ಲಿರುವ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಕೇಳುವ ತಾಕತ್ತು ಇಲ್ಲ. ಹೀಗಾಗಿ ಕಾಂಗ್ರೆಸ್ ದಲಿತರಿಗೆ ಬಗನಿಗೂಟ ಇಟ್ಟಿದೆ. ಅಂಬೇಡ್ಕರ್ ಮೇಲೆ ಗೌರವ ಇದ್ದರೆ, ಸ್ವಾಭಿಮಾನಿಗಳಾಗಿ ಕ್ಯಾಬಿನೆಟ್ ಸ್ಥಾನ ತಿರಸ್ಕರಿಸಿ. ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬೇರೆ ಪಕ್ಷ ಸೇರಿ' ಎಂದು ಸಲಹೆ ನೀಡಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ದಲಿತ ಮುಖ್ಯಮಂತ್ರಿಗೆ ಬೇಡಿಕೆ ಇಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, 'ನಮ್ಮಲ್ಲಿ ಕೇಳದೆಯೇ ಅನೇಕ ಸ್ಥಾನಮಾನ ದಲಿತರಿಗೆ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನವನ್ನೂ ನೀಡುತ್ತಾರೆ. ಪವಾಡಗಳು ನಡೆಯಬೇಕಿದ್ದರೆ ಬಿಜೆಪಿಯಲ್ಲಿ ಮಾತ್ರವೇ ಸಾಧ್ಯ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.