ಚಂದಾಪುರ(ಆನೇಕಲ್): ಬುದ್ಧ ಬಸವ, ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ವಿಚಾರಧಾರೆಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟದ ಮೂರು ಮೂಲಮಂತ್ರಗಳನ್ನು ಜೀವನದ ಭಾಗವಾಗಿಸಿಕೊಳ್ಳಬೇಕುಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಹೇಳದರು.

ಬೋಧಿಸತ್ತ್ವ ಟ್ರಸ್ಟ್ ವತಿಯಿಂದ ಚಂದಾಪುರದ ಕಪಿಲವಸ್ತು ಸಭಾಂಗಣದಲ್ಲಿ ಭಾನುವಾರ ನಡೆದ ಬುದ್ಧ, ಅಂಬೇಡ್ಕರ್ ಜಯಂತಿ, ಅಂತರರಾಷ್ಟ್ರೀಯ ಮಹಿಳಾ ಮತ್ತು ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.

ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಗುಣವನ್ನು ಯುವಕರು ರೂಢಿಸಿಕೊಳ್ಳಬೇಕು. ಅಂಬೇಡ್ಕರ್ ಅವರ ಹೋರಾಟದ ಗುಣ ರಕ್ತದ ಕಣಕಣದಲ್ಲೂ ಇರಬೇಕು. ಸಾಧಿಸುವ ಗುರಿಯಿದ್ದರೆ ಪ್ರತಿಯೊಬ್ಬರು ಸಹ ಶ್ರೇಷ್ಠ ಸಾಧನೆ ಮಾಡಬಹುದಾಗಿದೆ ಎಂದರು.

ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕಲ್ಪಿಸಿಕೊಡಬೇಕು. ರಾಜನ ಮಗ ರಾಜನಾಗುತ್ತಿದ್ದ ಕಾಲವಿತ್ತು. ಆದರೆ ಅಂಬೇಡ್ಕರ್ ಅವರ ಸಂವಿಧಾನದಿಂದಾಗಿ ಸಾಮಾನ್ಯರು ಸಹ ಪ್ರಧಾನಿ, ಮುಖ್ಯಮಂತ್ರಿಯಾಗುವಂತಹ ಅವಕಾಶ ಇದೆ. ಸಂವಿಧಾನ ಪೀಠಿಕೆಯಲ್ಲಿ ಸಮಾನತೆ ತತ್ವವಿದೆ ಮತ್ತು ಭ್ರಾತೃತ್ವದ ಮೂಲಕ ದೇಶದ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ಹೇಳಿದರು.

ಮೈಸೂರಿನ ಅಂಬೇಡ್ಕರ್ ಸಾಹಿತ್ಯ ಅಕಾಡೆಮಿಯ ವಿದ್ಯಾರ್ಥಿಗಳು ಬುದ್ಧ ಬೆಳಕು ನಾಟಕ ಪ್ರದರ್ಶನ ಪ್ರಸ್ತುತ ಪಡಿಸಿದರು.

ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಚಿಕ್ಕಮಗಳೂರಿನ ಚೈತನ್ಯ ಅವರಿಗೆ ಪ್ರಶಸ್ತಿ ನೀಡಲಾಯಿತು. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಮಾಡಲಾಯಿತು. ರಕ್ತದಾನ ಶಿಬಿರ ನಡೆಯಿತು.

ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಆನಂದ ಭಂತೇಜಿ, ಕೆಎಸ್ಆರ್ಟಿಸಿಯ ನಿವೃತ್ತ ಸಂಚಾರ ಅಧೀಕ್ಷಕ ಚಂದ್ರನಾಯಕ್, ಬೋಧಿಸತ್ತ್ವ ಟ್ರಸ್ಟ್ನ ಡಾ.ಎಸ್.ಮೀನಾಕ್ಷಿ ವಜ್ರಪ್ಪ, ಜಿ.ನಾಗರಾಜು, ಮುಖಂಡರಾದ ಮನು, ಚಂದ್ರಲೇಖ, ಮನು, ರಾವಣ, ಗೌರೀಶ್, ಪುರುಷೋತ್ತಮ್ ಚಿಕ್ಕಹಾಗಡೆ, ವಿಜಯಕುಮಾರ್, ನಾಗವೇಣಿ, ನಾಗರಾಜು ಮೌರ್ಯ, ಜಯರಾಮ್ ಸರ್ಜಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-15-1102508181

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.