ಚನ್ನಪಟ್ಟಣ: ದೂರದೃಷ್ಟಿ ಚಿಂತನೆಯಿಂದ ಕನ್ನಡ ನಾಡಿನ ಜನರನ್ನು ಒಟ್ಟುಗೂಡಿಸಿ ಕಟ್ಟಿದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇರುವುದು ದುರಂತ ಎಂದು ಜಾನಪದ ವಿದ್ವಾಂಸ ಚಕ್ಕೆರೆ ಶಿವಶಂಕರ್ ವಿಷಾದ ವ್ಯಕ್ತಪಡಿಸಿದರು.

ನಗರದ ಕೇಂಬ್ರಿಜ್ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಿಂದ ಮಂಗಳವಾರ ನಡೆದ ಕಸಾಪ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಇಂದು ನಮ್ಮನ್ನಾಳುವವರು ಧರ್ಮ ರಾಜಕಾರಣ ಮಾಡುತ್ತಿದ್ದಾರೆ. ಮಕ್ಕಳ ಮೇಲೆ ಭಾಷೆ ಹೇರಲಾಗುತ್ತಿದೆ. ಇದು ಕಳವಳಕಾರಿ. ಇಂಗ್ಲಿಷ್ ಹೊಡೆತ ತಪ್ಪಿಸಲು ನಾಡು, ನುಡಿ, ಸಂಸ್ಕೃತಿಯನ್ನು ಪ್ರವರ್ಧಕ್ಕೆ ತರಬೇಕು. ಕನ್ನಡಿಗರು ನಾಡುನುಡಿ ಕಟ್ಟುವ ಕೆಲಸದಲ್ಲಿ ನಿರತವಾಗಬೇಕು’ ಎಂದರು.

ಸಾಹಿತಿ ಮತ್ತೀಕೆರೆ ಬಿ.ಚಲುವರಾಜು ಮಾತನಾಡಿ, ಕನ್ನಡಿಗರ ಆಶಯದಂತೆ ಕಸಾಪ ಸಂಸ್ಥೆ ಹುಟ್ಟುಹಾಕಲಾಗಿದೆ. ಇಂದು ಹಲವು ಸಾಹಿತ್ಯದ ಕೊಡುಗೆಗಳನ್ನು ನೀಡುವ ಮೂಲಕ ಕಸಾಪ ಹೆಮ್ಮರವಾಗಿ ಬೆಳೆದಿದೆ. ಬೋಧನಾಂಗ, ಪ್ರಕಟಣಾಂಗ, ಸಂಶೋಧನಾಂಗಗಳನ್ನು ತೆರೆದು ರಾಜ್ಯದಾದ್ಯಂತ ಮನೆ, ಮನಗಳಿಗೆ ಸಾಹಿತ್ಯವನ್ನು ಉಣಬಡಿಸಿದ ಕೀರ್ತಿ ಸಾಹಿತ್ಯ ಪರಿಷತ್ತಿಗೆ ಸಲುತ್ತದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗರು ಪರಭಾಷಾ ವ್ಯಾಮೋಹ ಬಿಟ್ಟು ಮಾತೃಭಾಷೆಗೆ ಒತ್ತು ನೀಡಬೇಕು. ಶಾಲಾ, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಮಾತೃಭಾಷೆಯ ಬಗ್ಗೆ ಜೀವ ತುಂಬುವ ಕೆಲಸ ಮಾಡಬೇಕಾಗಿದೆ ಎಂದರು.

ಗಾಯಕರಾದ ಚೌ.ಪು.ಸ್ವಾಮಿ, ಗೋವಿಂದಹಳ್ಳಿ ಶಿವಣ್ಣ, ಬ್ರಹ್ಮಣಿಪುರ ರಾಮಕೃಷ್ಣಯ್ಯ ಗೀತಗಾಯನ ನಡೆಸಿಕೊಟ್ಟರು.

ಕೇಂಬ್ರಿಜ್ ಕಾಲೇಜು ಪ್ರಾಂಶುಪಾಲ ಕೆ.ಎನ್. ಮಧುಸೂಧನ್, ನಿವೃತ್ತ ಪ್ರಾಧ್ಯಾಪಕರಾದ ಚನ್ನವೀರೇಗೌಡ, ಚೌಡೇಗೌಡ, ರಂಗಸ್ವಾಮಿ, ನಾರಾಯಣಸ್ವಾಮಿ, ವೆಂಕಟೇಗೌಡ, ಲೋಕಾನಂದ್, ಕದಂಬಸೇನೆಯ ಜಿಲ್ಲಾಧ್ಯಕ್ಷ ಶಿವಕುಮಾರ್, ನಿವೃತ್ತ ಮುಖ್ಯ ಶಿಕ್ಷಕ ವಸಂತಕುಮಾರ್, ಸಾಹಿತಿಗಳಾದ ಕೂರಣಗೆರೆ ಕೃಷ್ಣಪ್ಪ, ಓಂಕಾರಪ್ರಿಯ, ನಾಗರಾಜು, ನಿವೃತ್ತ ಸಿಡಿಪಿಒ ಪುಟ್ಟಸ್ವಾಮಿ, ಉಪನ್ಯಾಸಕ ರಂಜನ್ ಕುಮಾರ್, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-14-1094382634

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.