ಬೆಂಗಳೂರು: ‘ಸಂವಿಧಾನಕ್ಕೆ 75 ವರ್ಷ ತುಂಬಿದ ಸಂಭ್ರಮದ ಹೊತ್ತಿನಲ್ಲಿ ಸಂವಿಧಾನವೇ ಪೊಳ್ಳು ಎಂದು ಬಿಂಬಿಸುವ ಯತ್ನಗಳು ನಡೆಯುತ್ತಿವೆ. ಇದರ ವಿರುದ್ಧ ನಾವು ಗಟ್ಟಿಯಾಗಿ ನಿಲ್ಲಬೇಕು’ ಎಂದು ದಿ ವೈರ್ ಸಂಪಾದಕಿ ಸೀಮಾ ಚಿಶ್ತಿ ಹೇಳಿದರು.

ಈದಿನ.ಕಾಂ ಶನಿವಾರ ಆಯೋಜಿಸಿದ್ದ ಓದುಗರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಮುಖ್ಯವಾಹಿನಿಯ ಬಹುತೇಕ ಮಾಧ್ಯಮಗಳು ಜನಪರವಾಗಿ ಮತ್ತು ಸತ್ಯದ ಪರವಾಗಿ ಕೆಲಸ ಮಾಡುತ್ತಿಲ್ಲ. ಡಿಜಿಟಲ್ ಮಾಧ್ಯಮಗಳು ಅಂತಹ ಕೆಲಸ ಮಾಡುತ್ತಿವೆ. ಆದರೆ ಅವುಗಳಿಗೆ ಜಾಹೀರಾತು ಆದಾಯವಿಲ್ಲದ ಕಾರಣ ಚಂದಾದಾರರನ್ನು ಅವಲಂಬಿಸಿವೆ. ಹೆಚ್ಚಿನ ದರದ ಚಂದಾದಾರಿಕೆ ಇರುವುದರಿಂದ ಎಲ್ಲರನ್ನೂ ತಲುಪಲು ಸಾಧ್ಯವಾಗುತ್ತಿಲ್ಲ’ ಎಂದರು.

‘ಮಾಧ್ಯಮ ಸ್ವಾತಂತ್ರ್ಯದ ವಿಚಾರದಲ್ಲಿ 2014ಕ್ಕೂ ಮೊದಲಿನ ಕಾಲ ಸುವರ್ಣಯುಗ ಎಂದು ಹೇಳಲಾಗದು. ಅದರೆ ಆಗ ಹಲವು ಸಮಸ್ಯೆಗಳು ಇದ್ದರೂ, ನಿಧಾನಗತಿಯಲ್ಲಾದರೂ ಮಾಧ್ಯಮಗಳು ಸರಿದಾರಿಯಲ್ಲಿದ್ದವು. 2014ರ ನಂತರ ಮುಖ್ಯವಾಹಿನಿಯ ಮಾಧ್ಯಮಗಳು ಯೂ–ಟರ್ನ್ ಹೊಡೆದಿವೆ’ ಎಂದರು.

‘ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು ಕೊನೆಯ 21ನೇ ಸ್ಥಾನಕ್ಕೆ ಕುಸಿದಿದೆ. ದೇಶದಲ್ಲಿ ಪತ್ರಿಕೆಗಳನ್ನು ಪತ್ರಕರ್ತರನ್ನು ಕೊಲ್ಲಲಾಗುತ್ತಿದೆ. ಈ ಎಲ್ಲ ಸವಾಲುಗಳ ಬಗ್ಗೆ ಡಿಜಿಟಲ್ ಮಾಧ್ಯಮಗಳು ಕೆಲಸ ಮಾಡಬೇಕಿದೆ’ ಎಂದರು.

ನಿಂತು ಹೋದ ತನಿಖಾ ವರದಿಗಾರಿಕೆ: ಸಿದ್ದರಾಮಯ್ಯ

‘ಈಗ ತನಿಖಾ ವರದಿಗಾರಿಕೆ ಮತ್ತು ಪತ್ರಿಕೋದ್ಯಮವೇ ನಿಂತುಹೋಗಿದೆ. ಯಾರೋ ಒಬ್ಬರು ಏನೋ ಒಂದು ಮಾತನಾಡುತ್ತಾರೆ. ಆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಎಲ್ಲರನ್ನೂ ಕೇಳುತ್ತಾರೆ. ಅದನ್ನೇ ದಿನವಿಡೀ ತೋರಿಸುತ್ತಾರೆ. ವರದಿಗಾರಿಕೆ ಎಂಬುದು ಅಲ್ಲಿಗೆ ಬಂದು ನಿಂತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.

‘ಒಬ್ಬರು ಮಳೆ ಬರುತ್ತಿದೆ ಎನ್ನುತ್ತಾರೆ. ಇನ್ನೊಬ್ಬರು ಮಳೆ ಬರುತ್ತಿಲ್ಲ ಎನ್ನುತ್ತಾರೆ. ಮಾಧ್ಯಮಗಳು ಎರಡನ್ನೂ ಬರೆಯುತ್ತವೆ. ಆದರೆ ಹೊರಗೆ ಹೋಗಿ ಮಳೆ ಬರುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುಕ್ಕೆ ಹೋಗುವುದೇ ಇಲ್ಲ. ಯಾರು ಏನು ಹೇಳಿದರೂ ಅದನ್ನು ಪರಿಶೀಲಿಸಿ ಸತ್ಯವನ್ನು ಹೇಳುವ ಕೆಲಸ ಮಾಧ್ಯಮಗಳು ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.