ಚಿಕ್ಕಬಳ್ಳಾಪುರ: ‘ಸರ್ಕಾರ ಇವರ ಒತ್ತಡ ತಂತ್ರಕ್ಕೆ ಬಗ್ಗುವುದಿಲ್ಲ. ಇವರು ಹೇಳುವುದನ್ನೆಲ್ಲ ಕೇಳಲು ಸಾಧ್ಯವಿಲ್ಲ. ಸಮಸ್ಯೆಗಳು ಇದ್ದರೆ ಸೌಜನ್ಯಯುತವಾಗಿ ಪರಿಹರಿಸಿಕೊಳ್ಳಬೇಕು. ಆದರೆ ಇವರು ನಮ್ಮ ವಿರುದ್ಧವೇ ಹೀನಾಯವಾಗಿ ಮಾತನಾಡುತ್ತಿದ್ದಾರೆ’– ಹೀಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಜಂಗಮಕೋಟೆ ಹೋಬಳಿಯ ಭೂ ಸ್ವಾಧೀನ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ವಿರುದ್ಧ ಹರಿಹಾಯ್ದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಆರಂಭದಿಂದಲೂ ನಾನು ಅವರಿಗೆ ಗೌರವ ನೀಡಿದ್ದೇನೆ. ಆದರೆ ಅವರು ಹಿಂದೊಂದು ಮುಂದೊಂದು ಮಾತನಾಡುವರು. ನಾನು ಈ ವಿಚಾರದಲ್ಲಿ ತಲೆ ಹಾಕುವುದಿಲ್ಲ. ಕೈಗಾರಿಕೆ ಬೇಡ ಎನ್ನುವ ಅವರ ವಾದವನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಕೆಲವು ರೈತರು ಜಮೀನು ಕೊಡುತ್ತೇವೆ ಎನ್ನುತ್ತಿದ್ದಾರೆ. ನಾನು ಬೆಳಗಾವಿ ಕಾರ್ಯಕ್ರಮಕ್ಕೆ ಹೋಗಿದ್ದೆ. ನಮ್ಮ ಮನೆ ಮುಂದೆ ಪ್ರತಿಭಟಿಸಿದರು. ಇಲ್ಲಿಗೆ ನಮ್ಮ ರಾಜಕೀಯ ವಿರೋಧಿಗಳನ್ನು ಕರೆಯಿಸಿ ರಾಜಕೀಯ ಭಾಷಣ ಮಾಡಿಸುವರು. ಹೀಗಿರುವಾಗ ನಾನು ಅವರನ್ನು ಭೇಟಿ ಮಾಡುವ ಅವಶ್ಯಕತೆ ಏನಿದೆ’ ಎಂದು ಪ್ರಶ್ನಿಸಿದರು.

ಜಮೀನು ಕೊಡುತ್ತೇವೆ ಎಂದು ಕೆಲವರು ಗೌರವಯುತವಾಗಿ ಬಂದರು. ಸಮಸ್ಯೆ ಹೇಳಿಕೊಂಡರು. ದರ ಹೆಚ್ಚಳಕ್ಕೆ ಬೇಡಿಕೆ ಸಲ್ಲಿಸಿದರು. ಅವರನ್ನು ಗೌರವಯುತವಾಗಿ ಮಾತನಾಡಿ ಕಳುಹಿಸಿದ್ದೇನೆ. ಜಿಲ್ಲೆಯಲ್ಲಿ ಕೈಗಾರಿಕೆಗಳು ಆಗಬೇಕೊ ಬೇಡವೊ ಎನ್ನುವುದು ಸಾರ್ವಜನಿಕವಾಗಿ ಚರ್ಚೆಯಾಗಲಿ ಎಂದರು.

ನಡಪಿನಾಯಕನಹಳ್ಳಿ ಬಳಿ ವಿಲ್ಲಾ ಫ್ಲಾಟ್ಗಳನ್ನು ನಿರ್ಮಿಸುತ್ತಿದ್ದಾರೆ. ಜಂಗಮಕೋಟೆ ಭಾಗದಲ್ಲಿ ವಿಲ್ಲಾಗಳ ನಿರ್ಮಾಣದ ಬಗ್ಗೆಯೂ ಚರ್ಚಿಸಿ. ಕೈಗಾರಿಕೆಗಳು ಬೇಡ ಎಂದು ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಜಮೀನು ನೀಡಲು ಸಿದ್ಧವಿರುವವರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಫಲವತ್ತಾದ ಕೃಷಿ ಭೂಮಿ ಈ ಪ್ರಮಾಣದಲ್ಲಿ ಇದೆ. ಈ ಜಮೀನುಗಳನ್ನು ಕೈ ಬಿಡಿ ಎಂದರೆ ಒಪ್ಪಬಹುದು. ಆದರೆ ಕೈಗಾರಿಕೆಯನ್ನೇ ಮಾಡಬೇಡಿ ಎನ್ನುತ್ತಿದ್ದಾರೆ ಎಂದರು.

ಚಿಕ್ಕಬಳ್ಳಾಪುರದ ಕೊಳಚೆ ನೀರು ಕಂದವಾರ ಕೆರೆ ಸೇರುತ್ತಿದೆ. ಕಂದವಾರ ಕೆರೆ ಬಳಿ ಎಸ್ಟಿಪಿ ಘಟಕ ನಿರ್ಮಿಸಿ ಕೊಳಚೆ ನೀರು ಶುದ್ಧೀಕರಿಸಿ ಕೆರೆಗೆ ಹರಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.