ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಅವರ ವಿರುದ್ಧ ಹೇಳಿಕೆ ನೀಡಿರುವ ಪಕ್ಷದ ಮುಖಂಡರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು. ಈ ಸಂಬಂಧ ಪಕ್ಷದ ಅಧ್ಯಕ್ಷರು ಸೇರಿ ರಾಜ್ಯ ನಾಯಕರಿಗೆ ದೂರು ಸಲ್ಲಿಸಲಾಗುವುದು ಎಂದು ಶಾಸಕರ ಬೆಂಬಲಿಗರು ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜಿ.ಪಂ ಮಾಜಿ ಸದಸ್ಯ ಕೆ.ಎಂ.ಮುನೇಗೌಡ, ಪಕ್ಷದ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷರು ಸಭೆ ನಡೆಸಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬೇಕು. ಶಾಸಕರ ವಿರುದ್ಧ ಏಕವಚನದಲ್ಲಿ ಹೇಳಿಕೆ ನೀಡಿರುವುದು ಸರಿಯಲ್ಲ. ಜಿಲ್ಲಾ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷರು ಶಿಸ್ತು ಕ್ರಮಕೈಗೊಳ್ಳದಿದ್ದರೆ ಹೈಕಮಾಂಡ್ಗೆ ದೂರು ಕೊಡುತ್ತೇವೆ ಎಂದರು.

‘ನಾವು ಯಾವ ಪಕ್ಷದಲ್ಲಿ ಇದ್ದೇವೆ ಎನ್ನುವುದನ್ನು ಮುಖಂಡರು ಅರ್ಥ ಮಾಡಿಕೊಳ್ಳಬೇಕಿತ್ತು. ಗೌರವಯುತವಾಗಿ ಮಾತನಾಡಬೇಕಿತ್ತು. ನಮ್ಮ ಮನೆಯ ಮೇಲೆ ನಾವೇ ಕಲ್ಲು ಎಸೆಯಬಾರದು’ ಎಂದರು.

ಶಾಸಕ ಪ್ರದೀಪ್ ಈಶ್ವರ್ ದಾವಣೆಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಅವರು ಪಕ್ಷ ಕಟ್ಟುತ್ತಿದ್ದಾರೆ. ಶಾಸಕರ ವಿರುದ್ಧ ಹೇಳಿಕೆ ನೀಡಿರುವ ಮುಖಂಡರು ದಾವಣಗೆರೆಯಲ್ಲಿ ಪ್ರಚಾರಕ್ಕೆ ಹೋಗಿದ್ದರಾ ಎಂದು ಪ್ರಶ್ನಿಸಿದರು.

ಶಾಸಕರ ವಿರುದ್ಧ ಹೇಳಿಕೆ ನೀಡಿರುವ ಮುಖಂಡರಿಗೆ ಪಕ್ಷ ಸಂಘಟನೆ ಮಾಡಲು ಅರ್ಹತೆ ಇಲ್ಲವೆ? ನೀವುಗಳು ಜನಪ್ರತಿನಿಧಿಗಳಲ್ಲವೇ? ಅವರನ್ನು ಯಾವುದಾದರೂ ಕಾರ್ಯಕ್ರಮಗಳಿಗೆ ಕರೆದಿದ್ದೀರಾ? ಅವರ ಬಳಿ ತೆರಳಿ ನಮ್ಮ ಕೆಲಸ ಮಾಡಿಕೊಡಿ ಎಂದರೆ ಅವರು ಮಾಡಿಕೊಡುವುದಿಲ್ಲ ಎಂದಿದ್ದಾರೆಯೇ? ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕೆಲಸ ಮಾಡಬೇಕು ಎಂದರು.

ಪರಿಶ್ರಮ ಅಕಾಡೆಮಿಗೆ ಬೀಡಗಾನಹಳ್ಳಿ ಬಳಿ 27 ಸಾವಿರ ಅಡಿ ಸಿಎ ನಿವೇಶನ ಮಂಜೂರು ಮಾಡಿಸಿಕೊಳ್ಳುವ ಬಗ್ಗೆ ಕಾನೂನು ಪ್ರಕ್ರಿಯೆಗಳು ಇವೆ. ಕಾನೂನುಬದ್ಧವಾಗಿದ್ದರೆ ಅಧಿಕಾರಿಗಳು ಮಾಡಿಕೊಡುವರು ಎಂದರು.

ಏನೇ ಸಮಸ್ಯೆಗಳು ಇದ್ದರೂ ಪಕ್ಷದ ಕಚೇರಿಯಲ್ಲಿ ಕುಳಿತು ಪರಿಹರಿಸಿಕೊಳ್ಳಬೇಕು. ಈ ಹಿಂದೆ ನಂದಿಗಿರಿಧಾಮದಲ್ಲಿ ನಡೆದ ಸಚಿವ ಸಂಪುಟ ಸಭೆಯ ಸಂದರ್ಭದಲ್ಲಿ ಎಲ್ಲರನ್ನೂ ಒಂದೆಡೆ ಕೂರಿಸಿ ಸಮಸ್ಯೆ ಪರಿಹರಿಸಲು ಪಕ್ಷವು ಮುಂದಾಗಿತ್ತು. ಆದರೆ ಕೆಲವರು ಬರಲಿಲ್ಲ ಎಂದು ಹೇಳಿದರು.

ರಾಜಕೀಯ ಪಕ್ಷ ಅಂದ ಮೇಲೆ ಭಿನ್ನಾಭಿಪ್ರಾಯ ಸಹಜ. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು. ಆದರೆ ಶಾಸಕರ ಬಗ್ಗೆ ಏಕವಚನದಲ್ಕಿ ಮಾತನಾಡಿದ್ದು ತಪ್ಪು ಎಂದರು.

ಮುಖಂಡ ‘ಡ್ಯಾನ್ಸ್’ ಶ್ರೀನಿವಾಸ್ ಮಾತನಾಡಿ, ‘ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರದೀಪ್ ಈಶ್ವರ್ ಅವರಿಗೆ 86 ಸಾವಿರ ಮತಗಳನ್ನು ಜನರು ನೀಡಿದ್ದಾರೆ. ಬೆಂಗಳೂರು ಬಾಯ್ಸ್ ಮಾತ್ರ ಮತ ಹಾಕಿಲ್ಲ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವೆ ಟಿಕೆಟ್ ಕೊಡಿಸಿ ಎಂದು ಪ್ರದೀಪ್ ಈಶ್ವರ್ ನಿಮ್ಮ ಮನೆ ಬಾಗಿಲಿಗೆ ಬಂದಿದ್ದರೇ? ಚುನಾವಣೆಯಲ್ಲಿ ಸ್ಪರ್ಧಿಸಲು ನಿಮ್ಮಲ್ಲಿ ಯಾರೂ ಗಂಡಸು ಇರಲಿಲ್ಲವೇ ಎಂದು ಟೀಕಿಸಿದರು.

ಬಲಿಜಿಗರ ಹುಡುಗ ಎಂದು ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಿತು. ಶಾಸಕ ಪ್ರದೀಪ್ ಈಶ್ವರ್ ಒಕ್ಕಲಿಗರು, ದಲಿತರು, ಬಲಿಜಿಗರು, ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯಗಳಿಗೂ ಸ್ಥಾನಮಾನ ನೀಡಿದ್ದಾರೆ ಎಂದರು.

ಬ್ಯಾನರ್ಗಳಲ್ಲಿ ಬರಿ ಸಚಿವ ಡಾ.ಎಂ.ಸಿ.ಸುಧಾಕರ್ ಭಾವಚಿತ್ರಗಳನ್ನು ಹಾಕುವರು. ಶಾಸಕರ ಚಿತ್ರಗಳನ್ನು ಹಾಕುವುದಿಲ್ಲ. ಕೆಲವು ಮುಖಂಡರು ಸಚಿವರು ಮತ್ತು ಶಾಸಕರ ನಡುವೆ ಬೆಂಕಿ ಹಚ್ಚುತ್ತಿದ್ದಾರೆ. ರಾಜಕೀಯ ಯಾರೊಬ್ಬರ ಸ್ವತ್ತಲ್ಲ. ಎಲ್ಲರನ್ನು ಜೊತೆಯಲ್ಲಿ ಇಟ್ಟುಕೊಂಡು ಹೋದರೆ ರಾಜಕೀಯ ಎಂದರು.

ಮುಖಂಡ ಸಂದೀಪ್ ಮಾತನಾಡಿ, ‘ನಗರಸಭೆ ಮಾಜಿ ಸದಸ್ಯರೊಬ್ಬರು ಶಾಸಕರನ್ನು ದಲಿತ ವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ದಲಿತರ ಹುಡುಗ ಸತ್ತಾಗ ಅವರ ಮನೆಗೆ ಹೋಗಿ ಶಾಸಕರು ಸರ್ಕಾರದಿಂದ ನೆರವು ಕೊಡಿಸಿದರು. ಕೆಲವು ಕಡೆ ದಲಿತರ ಸ್ಮಶಾನಕ್ಕೆ ಜಾಗ ಕೊಡಿಸಿದರು. ಹೀಗಿದ್ದರೂ ಅವರನ್ನು ದಲಿತರ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಎಂದು ಹೇಳಿದರು.

ಮುಖಂಡರಾದ ಗವಿರಾಯಪ್ಪ, ಮಂಜಣ್ಣ, ಶ್ರೀನಿವಾಸ್, ಆದಿ ನಾರಾಯಣ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-16-973547067

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.