ಚಿಕ್ಕಮಗಳೂರು: ‘ಜಗತ್ತು ಎದುರಿಸುತ್ತಿರುವ ಜಾಗತಿಕ ಸಮಸ್ಯೆಗಳಿಗೆ ಮಹಾವೀರರ ಸಂದೇಶವೇ ಪರಿಹಾರ. ನಾಗರಿಕ ಸಮಾಜಕ್ಕೆ ಅವರ ಸಂದೇಶ ಅವಶ್ಯಕ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಭಗವಾನ್ ಮಹಾವೀರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಗವಾನ್ ಮಹಾವೀರರು ಜಗತ್ತನ್ನು ಗೆಲ್ಲಲು ಹೋಗಲಿಲ್ಲ, ಬದಲಾಗಿ ತನ್ನನ್ನು ತಾನು ಗೆದ್ದರು. ಇಂದಿನ ದಿನಗಳಲ್ಲಿ ಮತ ಸಂಪ್ರದಾಯಗಳನ್ನು ಧರ್ಮ ಎಂದು ತಪ್ಪಾಗಿ ಗುರುತಿಸಲಾಗುತ್ತಿದೆ. ಹಿಂಸೆಗೆ ಪ್ರಚೋದನೆ ನೀಡುವುದು ಧರ್ಮವಾಗಲು ಸಾಧ್ಯವಿಲ್ಲ. ಪರರ ಆಸ್ತಿಯನ್ನು ಕಬಳಿಸುವುದು ಅಧರ್ಮವೇ ಹೊರತು ಧರ್ಮವಲ್ಲ. ಧರ್ಮ ಎನ್ನುವುದು ಕರ್ತವ್ಯ, ಕಾಲಧರ್ಮಕ್ಕೆ ಅನುಗುಣವಾಗಿರಬೇಕು ಎಂದು ಹೇಳಿದರು.

ಜಗತ್ತಿಗೆ ಭಾರತೀಯ ಚಿಂತನೆಗಳು, ಭಾರತೀಯ ದೃಷ್ಟಿಕೋನಗಳು ಮಾತ್ರ ಶಾಂತಿ ನೀಡಬಲ್ಲವು. ಮಹಾವೀರ, ಬುದ್ಧರನ್ನು ಜಗತ್ತಿಗೆ ನೀಡಿರುವುದು ಭಾರತ. ವಿಶ್ವ ಒಂದು ಕುಟುಂಬ. ಅಣುರೇಣು ತೃಣಕಾಷ್ಠಗಳಲ್ಲಿ ದೇವರನ್ನು ಕಾಣು ಎಂದು ಹೇಳಿರುವುದು ಭಾರತೀಯ ಸಂಸ್ಕೃತಿ. ಆದ್ದರಿಂದ ಭಾರತೀಯ ಧರ್ಮ, ಚಿಂತನೆಗಳು ಶ್ರೇಷ್ಠ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಮಾತನಾಡಿ, ಜಗತ್ತಿಗೆ ಅಹಿಂಸೆ, ಶಾಂತಿಯ ಪರಮೋಚ್ಚ ಸಂದೇಶ ನೀಡಿದ ಭಗವಾನ್ ಮಹಾವೀರರ ತತ್ವಗಳು ಇಂದಿನ ಸಂಘರ್ಷಮಯ ಕಾಲಘಟ್ಟದಲ್ಲಿ ವಿಶ್ವಕ್ಕೆ ಮಾದರಿ ಎಂದು ಹೇಳಿದರು.

ವಿಶ್ವದಾದ್ಯಂತ ಯುದ್ಧದ ಕಾರ್ಮೋಡ ಕವಿದಿದೆ. ಮಧ್ಯಪ್ರಾಚ್ಯ ದೇಶಗಳು ಸೇರಿ ಹಲವೆಡೆ ಸಂಘರ್ಷಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಭಾರತವು ವಿವಿಧ ಧರ್ಮ, ವರ್ಗಗಳ ನಡುವೆಯೂ ಸ್ನೇಹ– ಸೌಹಾರ್ದದಿಂದ ಬಾಳುತ್ತಿದೆ ಎಂದರೆ ಅದಕ್ಕೆ ಮಹಾವೀರರಂತಹ ಮಹಾಪುರುಷರು ಹಾಕಿಕೊಟ್ಟ ಅಹಿಂಸೆಯ ಅಡಿಪಾಯವೇ ಕಾರಣ ಎಂದರು.

ರಾಜ ಮನೆತನದಲ್ಲಿ ಜನಿಸಿದ ಮಹಾವೀರರು 30ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಪಡೆದರು. 12 ವರ್ಷಗಳ ಸುದೀರ್ಘ ತಪಸ್ಸಿನ ನಂತರ ಜ್ಞಾನೋದಯ ಪಡೆದ ಅವರು, ಸತತ 30 ವರ್ಷಗಳ ಕಾಲ ನಾಡಿನಾದ್ಯಂತ ಸಂಚರಿಸಿ ಶಾಂತಿಯ ಸಂದೇಶ ಬಿತ್ತಿದರು. ಅವರು ನೀಡಿದ ತತ್ವಗಳು ಸೂರ್ಯ–ಚಂದ್ರರು ಇರುವ ತನಕ ಶಾಶ್ವತ ಎಂದರು.

ಕನ್ನಡ ಸಾಹಿತ್ಯಕ್ಕೆ ಪಂಪ, ರನ್ನ, ಪೊನ್ನ ಮತ್ತು ಜನ್ನರಂತಹ ರತ್ನಗಳನ್ನು ನೀಡಿದ ಕೀರ್ತಿ ಈ ಸಮುದಾಯಕ್ಕೆ ಸಲ್ಲುತ್ತದೆ. ಶ್ರವಣಬೆಳಗೊಳದ ಗೊಮ್ಮಟೇಶ್ವರ ವಿಗ್ರಹ ಸೇರಿದಂತೆ ದೇಶದಾದ್ಯಂತ ಇರುವ ಜೈನ ಮಂದಿರಗಳು ಅದ್ಭುತ ವಿನ್ಯಾಸ, ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿವೆ ಎಂದರು.

ಭಗವಾನ್ ಮಹಾವೀರರ ಕುರಿತು ಉಪನ್ಯಾಸ ನೀಡಿದ ಹೇಮಲತಾ, ‘ಜಗತ್ತಿನ ರಾಗ, ದ್ವೇಷ, ಯುದ್ಧ ಮತ್ತು ಅಶಾಂತಿಯಂತಹ ವಿನಾಶಕಾರಿ ಸಮಸ್ಯೆಗಳಿಗೆ ಭಗವಾನ್ ಮಹಾವೀರರ ಅಹಿಂಸೆ ಮತ್ತು ತಪಸ್ಸಿನ ತತ್ವಗಳೇ ಮದ್ದು’ ಎಂದು ಹೇಳಿದರು.

ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಉಪತಹಸೀಲ್ದಾರ್ ರಾಮರಾವ್ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಜೈನ ಸಮಾಜದ ಮುಖಂಡರಾದ ಜಿನೇಂದ್ರ ಬಾಬು, ಚಾರಿತ್ರ್ಯ, ಕಾಂತಿಲಾಲ್ ಜೈನ್, ಗೌತಮ್ ಚಂದ್, ಜಿಲ್ಲಾ ಆಯುಷ್ ಅಧಿಕಾರಿ ಗೀತಾ ಭಾಗವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-126-229617505

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.