ಬೆಂಗಳೂರು: ‘ಒಬ್ಬ ಉದ್ಯೋಗಿಗೆ ಯಾವುದೇ ರೀತಿಯ ರಜೆಗಳನ್ನು ನೀಡುವ ವಿವೇಚನಾಧಿಕಾರ ಉದ್ಯೋಗದಾತರಿಗೆ ಇದೆ. ಆದರೆ, ಮಕ್ಕಳ ಆರೈಕೆ ರಜೆ (ಸಿಸಿಎಲ್) ಕೋರಿಕೆ ಬಂದಾಗ ಅದನ್ನು ನಿರಾಕರಿಸದೆ ಆದ್ಯತೆ ಮೇರೆಗೆ ರಜೆ ಮಂಜೂರು ಮಾಡಬೇಕು. ಸಿಸಿಎಲ್ ಎಂಬುದು ಮಗುವಿನ ಹಕ್ಕು’ ಎಂದು ಹೈಕೋರ್ಟ್ ಆದೇಶಿಸಿದೆ.

ರಜೆ ನೀಡುವಂತೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಕಳೆದ ಫೆಬ್ರುವರಿ 5ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ಕೇಂದ್ರ ಸರ್ಕಾರದ, ‘ಸೆಂಟರ್ ಫಾರ್ ಡೆವಲಪಮೆಂಟ್ ಆಫ್ ಅಡ್ವಾನ್ಸಡ್ ಕಂಪ್ಯೂಟಿಂಗ್’ನಲ್ಲಿ (ಸಿ-ಡಾಕ್) ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮೂಲ ಅರ್ಜಿದಾರರಾದ ಕವಿತಾ ವಡ್ಡೆ ಅವರಿಗೆ ಫೆಬ್ರುವರಿ 6ರಿಂದ ಮೇ 20ರವರೆಗೆ ಚೈಲ್ಡ್ ಕೇರ್ ಲೀವ್(ಸಿಸಿಎಲ್) ನೀಡುವಂತೆ ನ್ಯಾಯಪೀಠ ನಿರ್ದೇಶಿಸಿದೆ.

‘ತಾಯಿಗೆ ರಜೆ ನಿರಾಕರಿಸಿದರೆ ಅದು ಮಕ್ಕಳ ಮೇಲೆ ಒತ್ತಡಕ್ಕೆ ಕಾರಣವಾಗಬಹುದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ, ಸಿಎಟಿ ಆದೇಶವನ್ನು ಎತ್ತಿಹಿಡಿದಿದೆ.

‘ಎಲ್ಲಾ ರಜೆಗಳನ್ನು ಮಂಜೂರು ಮಾಡುವುದು ಅಥವಾ ಬಿಡುವುದು ಉದ್ಯೋಗದಾತರ ವಿವೇಚನೆಗೆ ಬಿಟ್ಟಿದ್ದಾಗಿದೆ. ಆದರೆ, ಸಿಸಿಎಲ್ ವಿಚಾರ ಬಂದಾಗ ಅದರಲ್ಲಿ ವಿವೇಚನಾಧಿಕಾರದ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಅದು ಮಕ್ಕಳ ಆರೈಕೆಗೆಂದೇ ಮೀಸಲಾಗಿದೆ. ಹಾಗಾಗಿ, ತಾಯಿಯ ಸಿಸಿಎಲ್ ಕೋರಿಕೆಯನ್ನು ನಿರಾಕರಿಸಲು ಆಗದು’ ಎಂದು ಆದೇಶಿಸಿದೆ.

ಪ್ರಕರಣವೇನು?

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿ-ಡಾಕ್ನಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕವಿತಾ ವಡ್ಡೆ ತಮ್ಮ ಮಗನ 10ನೇ ತರಗತಿ ಸಿಬಿಎಸ್ಸಿ ಪರೀಕ್ಷೆಗೆ ನೆರವಾಗಲು 5 ತಿಂಗಳ ಸಿಸಿಎಲ್ ನೀಡುವಂತೆ ಕೋರಿದ್ದರು. ಆದರೆ, ಕೇವಲ 18 ದಿನ ಮಾತ್ರ ರಜೆ ಮಂಜೂರು ಮಾಡಲಾಗಿತ್ತು. ಇದನ್ನು ಅವರು ಸಿಎಟಿಯಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ್ದ ಸಿಎಟಿ, ‘ಅರ್ಜಿದಾರರಿಗೆ ಸಿಸಿಎಲ್ ನೀಡಲೇಬೇಕು’ ಎಂದು ಫೆಬ್ರುವರಿ 5ರಂದು ಆದೇಶಿಸಿತ್ತು. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಕೆ. ಸತೀಶ್ ಭಟ್ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.