ಬೆಂಗಳೂರು: ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಿದ್ದ 'ಮಕ್ಕಳ ಸಹಾಯವಾಣಿ' ಅಸಹಾಯಕ ಸ್ಥಿತಿಯಲ್ಲಿದೆ. ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಿದರೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕರೆ ವರ್ಗಾಯಿಸಲಾಗುತ್ತಿದ್ದು, ದೌರ್ಜನ್ಯಕ್ಕೊಳಗಾದ ಮಕ್ಕಳ ಕುರಿತು ಸಾರ್ವಜನಿಕರು, ಸಾಮಾಜಿಕ ಸಂಸ್ಥೆಗಳು ದೂರು ನೀಡಿದರೂ ಪ್ರಯೋಜನಕ್ಕೆ ಬಾರದಂತಾಗಿದೆ.

ಕರೆ ಮಾಡಿ ಬಾಲಕಾರ್ಮಿಕರ ಕುರಿತು ಮಾಹಿತಿ ನೀಡಿ ಗಂಟೆಗಟ್ಟಲೇ ಕಾದರೂ ಯಾವುದೇ ಸಿಬ್ಬಂದಿ ಸ್ಪಂದಿಸದ ಸ್ಥಿತಿ ನಿರ್ಮಾಣವಾಗಿದೆ. ಬಾಲಕಾರ್ಮಿಕರು ತಪ್ಪಿಸಿಕೊಂಡು ಹೋಗುತ್ತಿದ್ದು, ಸಕಾರಾತ್ಮಕ ಸ್ಪಂದನೆ ಸಿಗದಿರುವುದಕ್ಕೆ ಮಕ್ಕಳ ಹಕ್ಕುಗಳ ಸಂಘಟನೆಗಳು ತೀವ್ರ ಬೇಸರ ವ್ಯಕ್ತಪಡಿಸಿವೆ.

ಸಹಾಯವಾಣಿ ಕರೆಗಳಿಗೆ ಸ್ಪಂದಿಸಲೆಂದೇ ಜಿಲ್ಲಾವಾರು ತಲಾ 8 ಮಂದಿ, ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ತಲಾ 6 ಮಂದಿ ಸೇರಿದಂತೆ ರಾಜ್ಯಾದ್ಯಂತ 344 ಸಿಬ್ಬಂದಿ ಇದ್ದಾರೆ. ಆದರೆ, ವೇತನ ಸೇರಿದಂತೆ ಆರ್ಥಿಕ ಸಮಸ್ಯೆಗಳನ್ನು ಮುಂದಿಟ್ಟು ದೂರು ದಾಖಲಾದ ಸ್ಥಳಕ್ಕೆ ಭೇಟಿ ನೀಡದ ಆರೋಪಗಳು ಕೇಳಿಬಂದಿವೆ.

'1098' ಮಕ್ಕಳ ಸಹಾಯವಾಣಿ 2024ರವರೆಗೆ ಸಾಮಾಜಿಕ ಸಂಸ್ಥೆಗಳಿಂದ ನಿರ್ವಹಣೆಯಾಗುತ್ತಿತ್ತು.
ಎರಡು ವರ್ಷಗಳಿಂದ ಸರ್ಕಾರವೇ ಇದರ ನಿರ್ವಹಣೆ ಹೊಣೆ ಹೊತ್ತಿದೆ. ಜಿಲ್ಲಾವಾರು ಮಕ್ಕಳ ರಕ್ಷಣಾ ಘಟಕಗಳು ದೂರುಗಳಿಗೆ ಸ್ಪಂದಿಸುತ್ತಿದ್ದು, ಈ ವ್ಯಾಪ್ತಿ ಬದಲಾವಣೆಯ ಪ್ರಕ್ರಿಯೆಯಲ್ಲಿ ಮಕ್ಕಳ ಹಕ್ಕುಗಳು ಬಲಿಯಾಗುತ್ತಿವೆ.

'ಮಕ್ಕಳ ಸಹಾಯವಾಣಿಯನ್ನು ಆರಂಭದಲ್ಲಿ ನಿಮ್ಹಾನ್ಸ್ ನಿರ್ವಹಣೆ ಮಾಡುತ್ತಿತ್ತು. ಆ ನಂತರ ಎಪಿಎಸ್ಎ, ಬಾಸ್ಕೋ, ಸಿಆರ್ಟಿ ನೋಡಲ್ ಸಂಸ್ಥೆಗಳಾಗಿ ನಿರ್ವಹಣೆ ಮಾಡಿದ್ದವು. ಸಾಮಾಜಿಕ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿ ಜಿಲ್ಲೆಗಳಲ್ಲಿ ಪ್ರತ್ಯೇಕ ಸಿಬ್ಬಂದಿ ಇದ್ದರು. ಕಾಲಕಾಲಕ್ಕೆ ಮಕ್ಕಳ ಹಕ್ಕುಗಳ ಕಾಯ್ದೆಗಳ ಕುರಿತು ಸಿಬ್ಬಂದಿಗೆ ತರಬೇತಿ, ಮಾಹಿತಿ ಸಂಗ್ರಹ ಸೇರಿ ಸಾಕಷ್ಟು ಕೌಶಲ ಕಲಿಸಲಾಗುತ್ತಿತ್ತು. ಪ್ರಸ್ತುತ, ಸರ್ಕಾರ ಕೆಲವೇ ಸಿಬ್ಬಂದಿಯನ್ನು ಮಕ್ಕಳ ಸಹಾಯವಾಣಿಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿದೆ. ಈ ಸಿಬ್ಬಂದಿಗೆ ಸಾಮಾಜಿಕ ಸಂಸ್ಥೆಗಳ ಬಲ ನೀಡಬೇಕಿದೆ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಹ ಜಿ ರಾವ್ ತಿಳಿಸಿದ್ದಾರೆ.

ಸ್ಪಂದಿಸದ ಇಲಾಖೆಗಳು: ಮಕ್ಕಳ ಹಕ್ಕುಗಳ ರಕ್ಷಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗೆ ಕಂದಾಯ, ಪೊಲೀಸ್, ಶಿಕ್ಷಣ, ಕಾರ್ಮಿಕ, ಕೈಗಾರಿಕೆ, ಪಂಚಾಯತ್ ರಾಜ್, ನಗರಾಭಿವೃದ್ಧಿ ಸೇರಿ ಒಟ್ಟು 13 ಇಲಾಖೆಯ ಅಧಿಕಾರಿಗಳು ಒಳಪಡುತ್ತಾರೆ.

ಆದರೆ, ಸಮನ್ವಯದ ಕೊರತೆಯಿಂದ ಮಕ್ಕಳ ರಕ್ಷಣೆ ನಮ್ಮ ಹೊಣೆಯಲ್ಲ ಎನ್ನುವ ಭಾವನೆಯಲ್ಲೇ ಬಹುತೇಕ ಇಲಾಖೆಗಳಿವೆ. ಮಕ್ಕಳ ರಕ್ಷಣಾ ಘಟಕಗಳಿಗೆ ಈ ಇಲಾಖೆಗಳ ಸಹಾಯ ಸಿಗದೆ ಮಕ್ಕಳು ದೌರ್ಜನ್ಯದಲ್ಲೇ ಮುಂದುವರೆಯಬೇಕಾಗುತ್ತಿದೆ ಎಂದು ಸಂಘಟನೆಗಳು ದೂರಿವೆ.

ನೆಪ ಹೇಳಿದರೆ ಕ್ರಮ

‘ಮಕ್ಕಳ ಸಹಾಯವಾಣಿ ದೂರುಗಳಿಗೆ ಕ್ರಮವಹಿಸಲು ಜಿಲ್ಲಾವಾರು ಸಿಬ್ಬಂದಿ ಇದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳಿಂದ ಸಿಬ್ಬಂದಿಗೆ ವೇತನ, ಆಡಳಿತಾತ್ಮಕ ವೆಚ್ಚ ಭರಿಸಲಾಗುತ್ತದೆ. ತಾಂತ್ರಿಕ ಸಮಸ್ಯೆಗಳಿಂದಾಗಿ ವೇತನ ತಡವಾಗಿದೆ. ಆದರೆ, ಇದೇ ನೆಪವನ್ನೊಡ್ಡಿ ಸಿಬ್ಬಂದಿ ಮಕ್ಕಳ ರಕ್ಷಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಕ್ರಮವಹಿಸಲಾಗುತ್ತದೆ. ಈ ಸಂಬಂಧ ಸಾರ್ವಜನಿಕರು ಆಯಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಬಹುದು ಎಂದು ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕಿ ಡಾ.ಸ್ನೇಹಾ ಹೇಳಿದ್ದಾರೆ.

ಸಹಾಯವಾಣಿ ಸಿಬ್ಬಂದಿಯ ಆರ್ಥಿಕ ಸಮಸ್ಯೆಗಳ ಕುರಿತು ಪರಿಶೀಲಿಸಲಾಗುತ್ತದೆ. ಸಮರ್ಪಕ ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತದೆ.
–ಲಕ್ಷ್ಮೀ ಹೆಬ್ಬಾಳ್ಕರ, ಸಚಿವೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ಸಕಾಲಕ್ಕೆ ವೇತನ ನೀಡದ ಹಿನ್ನೆಲೆ ಸಿಬ್ಬಂದಿ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರ ಶೀಘ್ರ ಸ್ಪಂದಿಸಬೇಕಿದೆ.
–ವರಲಕ್ಷ್ಮಿ, ಗೌರವಾಧ್ಯಕ್ಷೆ, ರಾಜ್ಯ ಕಾಯಂಯೇತರ ನೌಕರರ ಸಂಘ.

ಸಹಾಯವಾಣಿ ಹಿಂದಿನಂತೆ ತ್ವರಿತ ಸ್ಪಂದನೆಯಿಲ್ಲ. ಸಿಬ್ಬಂದಿಗೆ ಅಗತ್ಯ ವಾಹನ ಸೌಲಭ್ಯದ ಜೊತೆಗೆ ತರಬೇತಿ ಒದಗಿಸಬೇಕಿದೆ.
–ಡಾ.ವಾಸುದೇವ ಶರ್ಮ, ರಾಜ್ಯ ಸಂಯೋಜಕ, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ.

4–5 ಬಾರಿ ಬಾಲಕಾರ್ಮಿಕರ ಪತ್ತೆ ಹಚ್ಚಿ ಕರೆ ಮಾಡಿದರೂ ಸಿಬ್ಬಂದಿ ಸ್ಪಂದಿಸಿಲ್ಲ. ಹೀಗಾದರೆ, ಸಹಾಯವಾಣಿ ಮೇಲಿನ ನಂಬಿಕೆ ಹಾಳಾಗುತ್ತದೆ.
–ನವೀನ್, ಸದಸ್ಯ, ಯುವಸಂಚಲನ ಸಂಘಟನೆ, ದೊಡ್ಡಬಳ್ಳಾಪುರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.