ಬೆಂಗಳೂರು: ಯಾವುದೇ ಧರ್ಮ ಹಿಂಸೆಯನ್ನು ಬೋಧಿಸುವುದಿಲ್ಲ. ಆದರೆ, ಮನುಷ್ಯ ಪರಸ್ಪರ ದ್ವೇಷ ಸಾಧಿಸುತ್ತಾನೆ. ಮಾನವೀಯತೆಯೇ ನಿಜವಾದ ಧರ್ಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಹಜ್ ಸಮಿತಿ ವತಿಯಿಂದ ಸೋಮವಾರ ಹಜ್ ಯಾತ್ರಿಕರ ವಿಮಾನಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು .

ಪರರ ಒಳಿತನ್ನು ಬಯಸುವವರನ್ನು ದೇವರು ರಕ್ಷಿಸುತ್ತಾನೆ. ತನ್ನ ಧರ್ಮವನ್ನು ಪ್ರೀತಿಸಿ, ಆದರೆ, ಇತರೆ ಧರ್ಮದ ಬಗ್ಗೆ ಸಹಿಷ್ಣುತೆ ಬೆಳೆಸಿಕೊಳ್ಳಬೇಕು. ಭ್ರಾತೃತ್ವ, ಸಮಾನತೆ ಮತ್ತು ಸೌಹಾರ್ದ ಸಂವಿಧಾನದ ಮೂಲತತ್ವವಾಗಿದೆ ಎಂದರು.

ಇಸ್ಲಾಂ ಧರ್ಮದ ಪ್ರಮುಖ ಐದು ಆಧಾರ ಸ್ತಂಭಗಳಲ್ಲಿ ಹಜ್ ಆಚರಣೆಯೂ ಒಂದಾಗಿದ್ದು, ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಕೈಗೊಳ್ಳಲೇಬೇಕಾಗಿದೆ. ಹಜ್ ಯಾತ್ರೆ ಮಾಡುವುದರಿಂದ ಮನುಷ್ಯನ ಹಿಂದಿನ ಎಲ್ಲಾ ಪಾಪಗಳು ಕ್ಷಮಿಸಲ್ಪಡುತ್ತವೆ ಮತ್ತು ಆತ ಮರುಜನ್ಮ ಪಡೆದ ಮಗುವಿನಂತೆ ಪರಿಶುದ್ಧನಾಗುತ್ತಾನೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ಯಾರಾದರೂ ಒಬ್ಬ ಮನುಷ್ಯನನ್ನು (ಅಪರಾಧ ಮಾಡದಿದ್ದರೂ) ಕೊಂದರೆ, ಅವನು ಇಡೀ ಮಾನವಕುಲವನ್ನೇ ಕೊಂದಂತೆ. ಯಾರಾದರೂ ಒಂದು ಜೀವವನ್ನು ಉಳಿಸಿದರೆ, ಅವನು ಇಡೀ ಮಾನವಕುಲವನ್ನೇ ಉಳಿಸಿದಂತೆ ಎಂದು ಜೀವದ ಬೆಲೆಯ ಬಗ್ಗೆ ಕುರಾನ್ ನೀಡುವ ಅತ್ಯುನ್ನತ ಸಂದೇಶವಾಗಿದೆ ಎಂದು ತಿಳಿಸಿದರು.

ಪ್ರತಿಯೊಬ್ಬ ಹಜ್ ಯಾತ್ರಿಕ ನಿಷ್ಕಲ್ಮಶ ಮನದಿಂದ ಯಾತ್ರೆ ಕೈಗೊಳ್ಳಬೇಕು. ಯಾತ್ರೆಯ ಸಂದರ್ಭದಲ್ಲಿ ಮಾಡುವ ಪ್ರಾರ್ಥನೆಯಲ್ಲಿ ಸರ್ಕಾರದ ಒಳಿತನ್ನೂ ಬಯಸಿರಿ ಎಂದು ಯಾತ್ರಿಕರಿಗೆ ಕೋರಿದರು.

ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಒತ್ತು: 2026-27ನೇ ಸಾಲಿನ ಬಜೆಟ್ನಲ್ಲಿ ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿ ಹಜ್ ಯಾತ್ರಾರ್ಥಿಗಳು ಹಾಗೂ ಅವರ ಸಂಬಂಧಿಕರಿಗೆ ಸೌಲಭ್ಯ ಮತ್ತು ಸೌಕರ್ಯಗಳನ್ನು ನೀಡಲುಅನುಕೂಲವಾಗುವಂತೆ ಹಜ್ಭವನಗಳ ನಿರ್ಮಾಣ ಮಾಡಲಾಗು ವುದು. ಸರ್ಕಾರ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಎಂದರು.

ಸಚಿವರಾದ ರಹೀಂ ಖಾನ್, ಕೃಷ್ಣ ಬೈರೇಗೌಡ, ವಿಧಾನ ಪರಿಷತ್ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ಶಾಸಕರಾದ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಲ್ತಾಫ್ ಖಾನ್, ಹಜ್ ಸಮಿತಿ ಅಧ್ಯಕ್ಷ ಜುಲ್ಫಿಕರ್ ಅಲಿ ಖಾನ್ ಹಾಗೂ ಮುಸ್ಲಿಂ ಧರ್ಮ ಗುರುಗಳು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-4-718169016

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.