ಬೆಂಗಳೂರು: ವಿಧಾನಸೌಧದ ಪಶ್ಚಿಮದ ನೆಲಮಹಡಿಯಲ್ಲಿನ ನವೀಕೃತ ಪ್ರವೇಶ ದ್ವಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಉದ್ಘಾಟಿಸಿದರು.

ವಿಧಾನಸಭಾ ಸಭಾಂಗಣಕ್ಕೆ ನೇರ ಪ್ರವೇಶ ಕಲ್ಪಿಸುವ ಈ ದ್ವಾರಕ್ಕೆ ಬೀಟೆ ಮರದಲ್ಲಿ ಆಕರ್ಷಕವಾದ ಕೆತ್ತನೆಯುಳ್ಳ ನೂತನ ಬಾಗಿಲನ್ನು ₹84 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಿಧಾನಸೌಧದ ಸೌಂದರ್ಯಕ್ಕೆ ತಕ್ಕಂತೆ ಲೋಕೋಪಯೋಗಿ ಇಲಾಖೆ ಪಶ್ಚಿಮ ದ್ವಾರದ ಕಬ್ಬಿಣದ ಗ್ರಿಲ್ ಬದಲಾಯಿಸಿ ಕುಸುರಿ ಕೆತ್ತನೆಯ ಬೀಟೆ ಮರದ ಬಾಗಿಲನ್ನು ರೂಪಿಸಿದೆ.

ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಕಾಮಗಾರಿಯ ಗುತ್ತಿಗೆ ನಿರ್ವಹಿಸಿತ್ತು. ಮೈಸೂರು ಅರಮನೆಯಲ್ಲಿನ ಬಾಗಿಲುಗಳ ಮಾದರಿಯ ಕುಸುರಿ ಕೆತ್ತನೆ, ದ್ವಾರದ ಮೇಲ್ಭಾಗದಲ್ಲಿ ರಾಜ್ಯದ ಲಾಂಛನ, ಗಂಡಭೇರುಂಡ ಮತ್ತು ರಾಷ್ಟ್ರದ ಅಶೋಕ ಸ್ತಂಭ ಕಲಾಕೃತಿಗಳನ್ನು ದ್ವಾರಕ್ಕೆ ಅಳವಡಿಸಲಾಗಿದೆ.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಚಿವರಾದ ಎಚ್.ಕೆ. ಪಾಟೀಲ, ಜಿ.ಪರಮೇಶ್ವರ, ರಾಮಲಿಂಗಾರೆಡ್ಡಿ, ಎನ್.ಎಸ್.ಬೋಸರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.