ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಮುಸ್ಲಿಂ ಮುಖಂಡರ ಮೇಲೆ ಕಾಂಗ್ರೆಸ್ ತೆಗೆದುಕೊಂಡ ಕ್ರಮದ ಪರ–ವಿರುದ್ಧ ವಾಕ್ಸಮರ ಮತ್ತೆ ಮುಂದುವರಿದಿದೆ.

ತಮ್ಮ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರು ಸ್ಥಾನ ತ್ಯಜಿಸಬೇಕಾಗಿ ಬಂದರೂ ಈ ಕುರಿತು ಪ್ರಶ್ನಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೌನವನ್ನು ಕಾಂಗ್ರೆಸ್ನ ಹಿರಿಯ ಶಾಸಕ ಕೆ.ಎನ್.ರಾಜಣ್ಣ ಪ್ರಶ್ನಿಸಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಏಕೆ ಇಷ್ಟೊಂದು ಅಸಹಾಯಕರಾಗಿದ್ದಾರೆ ಎನ್ನುವುದು ಗೊತ್ತಿಲ್ಲ. ಯಾರಾದರೂ ಅವರಿಗೆ ಮಾಟ–ಮಂತ್ರ ಮಾಡಿಸಿರಬಹುದು. ಈ ಕುರಿತು ತನಿಖೆ ಮಾಡಿಸಲು ಚಿಂತನೆ ನಡೆಸಿದ್ದೇನೆ’ ಎಂದರು.

‘ನಾನು ಅಥವಾ ಸಿದ್ದರಾಮಯ್ಯ ಮಾಟ–ಮಂತ್ರದಲ್ಲಿ ನಂಬಿಕೆ ಇಟ್ಟಿಲ್ಲ. ನನ್ನ ಮೇಲೆಯೂ ಹಿಂದೆ ಒಮ್ಮೆ ಮಾಟ–ಮಂತ್ರ ಮಾಡಿದ್ದರು. ಚುನಾವಣೆಗೆ ನಿಂತಾಗೆಲ್ಲಾ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು. ಸಿದ್ದರಾಮಯ್ಯ ಅವರ ಮೌನ ನೋಡಿದರೆ ಯಾರಾದರೂ ಮಾಟ ಮಾಡಿಸಿರಬಹುದಾ ಎಂಬ ಅನುಮಾನ ಬರುತ್ತದೆ’ ಎಂದರು.

ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂಬ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜಮೀರ್ ಅಹಮದ್, ‘ಸಿದ್ದರಾಮಯ್ಯ ಈಗ ಮೌನವಾಗಿರಬಹುದು. ಸಮಯ ಬಂದಾಗ ಮಾತನಾಡುತ್ತಾರೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-51-1563614575

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.