ಬಾಗಲಕೋಟೆ: ‘ಹುಟ್ಟುವ ಮಗುವಿನ ಮೇಲೆ ₹1.5 ಲಕ್ಷ ಸಾಲ ಮಾಡಿದ್ದೇನೆ ಎಂದು ಒಪ್ಪಿಕೊಂಡು ಮತ ಕೇಳುವ ಧೈರ್ಯ ಮುಖ್ಯಮಂತ್ರಿ ಅವರಿಗಿದೆಯೇ’ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಪ್ರಶ್ನಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರೇ ಯಾವ ಸಾಧನೆಗಾಗಿ ಜನರ ಬಳಿ ನೀವು ಮತ ಕೇಳುತ್ತೀರಿ? ಈ ರಾಜ್ಯದಲ್ಲಿ ಎಲ್ಲ ಮುಖ್ಯಮಂತ್ರಿಗಳಿಗಿಂತ ಅಧಿಕ ಸಾಲ ಮಾಡಿದ ಸಿಎಂ ನಾನು ಎಂದು ಹೇಳುತ್ತೀರಾ’ ಎಂದು ಕೇಳಿದರು.

‘ಈ ಹಿಂದೆ ಸಾಕಷ್ಟು ಮುಖ್ಯಮಂತ್ರಿ ಸಾಲ ಮಾಡಿದ್ದರು. ಅವರಿಗಿಂತ ಜಾಸ್ತಿ ಮಾಡಿ, ವಾರ್ಷಿಕ ₹89 ಸಾವಿರ ಕೋಟಿ ಬಡ್ಡಿಯನ್ನೇ ಕಟ್ಟುತ್ತಿದ್ದಾರೆ. ರಾಜ್ಯದ ಜನರನ್ನು ಮೆಚ್ಚಿಸಲಿಕ್ಕೇ ಮುಖ್ಯಮಂತ್ರಿಯಾಗಿಲ್ಲ. ಹೈಕಮಾಂಡ್ ಮೆಚ್ಚಿಸಿ ಮುಖ್ಯಮಂತ್ರಿಯಾಗಿ ಮುಂದುವರೆಸುವಂತೆ ಕೇಳುತ್ತಿದ್ದಾರೆ. ತಮ್ಮ ಹಾಗೂ ಡಿಕೆ ಶಿವಕುಮಾರ ನಡುವಿನ ಕುರ್ಚಿ ಕಾಳಗದ ಬಗ್ಗೆ ಹೇಳಿರಿ’ ಎಂದು ಆಗ್ರಹಿಸಿದರು.

‘ಉಪಚುನಾವಣೆ ಪ್ರಚಾರಕ್ಕೆ ನಿಮ್ಮ ಪಕ್ಷದ ಅಜೆಂಡಾ ಏನಿದೆ? ರಾಜ್ಯದಲ್ಲಿ ರಸ್ತೆಗಳು ಹಾಳಾಗಿವೆ. ಮೂಲಸೌಲಭ್ಯ ಕಲ್ಪಿಸಲು ನಮ್ಮ ಬಳಿ ಅನುದಾನ ಇಲ್ಲ. ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಎಲ್ಲ ದಿನಸಿ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ವಾಲ್ಮೀಕಿ ನಿಗಮದ ಹಣ ಭ್ರಷ್ಟಾಚಾರ ಮಾಡಿದ್ದನ್ನು ವಾಪಸ್ ಕಟ್ಟಿಸುತ್ತೇನೆ ಎಂದು ಹೇಳಿದ್ದು, ಈ ವರೆಗೂ ಕಟ್ಟಿಸಿಲ್ಲ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ಬಿಟ್ಟು, ತಮ್ಮ ಕುಟುಂಬದವರಿಗಾಗಿ ಐಪಿಎಲ್ ಟಿಕೆಟ್ ಕೇಳುತ್ತಿದ್ದಾರೆ. ಪ್ರತ್ಯೇಕ ವಿಐಪಿ ಗ್ಯಾಲರಿ ಇರಬೇಕು ಎಂದಿದ್ದಾರೆ. ಪುಣ್ಯಾತ್ಮ ಆ ಗ್ಯಾಲರಿಗೆ ತನ್ನದೇ ಹೆಸರಿಡಬೇಕು ಎಂದು ಕೇಳಿಲ್ಲ ಎಂದು ವ್ಯಂಗ್ಯವಾಡಿದರು.

‘ಶಾಸಕರು ಟಿಕೆಟ್ ಕೇಳಿದ್ದರೆ ಅದನ್ನು ಒಪ್ಪಬಹುದಿತ್ತು. ಆದರೆ, ನಾವು ವಿಐಪಿ ಜನಸಾಮಾನ್ಯರ ಜೊತೆ ಕುಳಿತು ಕ್ರಿಕೆಟ್ ವೀಕ್ಷಣೆ ಮಾಡಲು ಆಗಲ್ಲ. ಪ್ರತ್ಯೇಕ ಗ್ಯಾಲರಿ ಬೇಕು ಎಂದರೆ ಹೇಗೆ? ಶಾಸಕರು ಎಂದರೆ ದೇವಮಾನವರಾ’ ಎಂದು ಪ್ರಶ್ನಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-19-1425792225

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.