ಬೆಂಗಳೂರು: ‘ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯ ಮುಂದುವರೆದಿರುವ ಕಾರಣ ಹೋಟೆಲ್ ಮತ್ತು ಉದ್ಯಮಗಳು ಮುಚ್ಚಬೇಕಾದ ಸ್ಥಿತಿ ಎದುರಾಗಿದೆ. ಕೇಂದ್ರ ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಿ, ರಾಜ್ಯಕ್ಕೆ ಪೂರೈಕೆ ಹೆಚ್ಚಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರಿದೀಪ್ ಸಿಂಗ್ ಪುರಿ ಅವರನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಸಚಿವ ಪುರಿ ಅವರಿಗೆ ಮತ್ತೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ‘ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ನಮ್ಮ ಸರ್ಕಾರವು ಪಾಲಿಸುತ್ತಿದ್ದು, ಅತ್ಯಗತ್ಯದ ವಲಯಗಳಿಗಷ್ಟೇ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ’ ಎಂದಿದ್ದಾರೆ.

‘ರಾಜ್ಯದಲ್ಲಿ ಪ್ರತಿದಿನ ವಾಣಿಜ್ಯ ಬಳಕೆ ಎಲ್ಪಿಜಿಯ 50,000 ಸಿಲಿಂಡರ್ಗಳ ಅಗತ್ಯವಿದ್ದು, ಆದರೆ 1,000 ಸಿಲಿಂಡರ್ಗಳನ್ನು ಮಾತ್ರ ಪೂರೈಕೆ ಮಾಡಲಾಗುತ್ತಿದೆ. ಇದರಿಂದಾಗಿ ಹೋಟೆಲ್ ಮತ್ತು ಇತರ ಉದ್ಯಮಗಳು ಎಲ್ಪಿಜಿ ಸಿಲಿಂಡರ್ ಕೊರತೆ ಎದುರಿಸುತ್ತಿದ್ದು, ಮುಚ್ಚಬೇಕಾದ ಸ್ಥಿತಿಯಲ್ಲಿವೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ರಾಜ್ಯದ ಲಕ್ಷಾಂತರ ಜನರು ಊಟೋಪಚಾರಕ್ಕಾಗಿ ಹೋಟೆಲ್ ಮತ್ತು ಕ್ಯಾಟರಿಂಗ್ ವಲಯವನ್ನೇ ಅವಲಂಬಿಸಿದ್ದಾರೆ. ಇವು ಬಂದ್ ಆಗಿರುವ ಕಾರಣ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ಇತರೆ ಅಸಂಘಟಿತ ವಲಯದ ಉದ್ಯೋಗಿಗಳಿಗೆ ಭಾರಿ ತೊಂದರೆಯಾಗಿದೆ’ ಎಂದು ಸಮಸ್ಯೆಯನ್ನು ವಿವರಿಸಿದ್ದಾರೆ.

‘ಗೃಹಬಳಕೆ ಎಲ್ಪಿಜಿ ಸಿಲಿಂಡರ್ಗಳ ಸಾಗಾಟ ಮತ್ತು ಪೂರೈಕೆ ಮೇಲೆ ನಿಗಾ ಇರಿಸುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ವಾಣಿಜ್ಯ ಬಳಕೆ ಸಿಲಿಂಡರ್ಗಳ ಪೂರೈಕೆಯ ಮೇಲ್ವಿಚಾರಣೆ ನಡೆಸಲು ಅಂತಹ ವ್ಯವಸ್ಥೆ ಇಲ್ಲ. ಪಾರದರ್ಶಕ ವ್ಯವಸ್ಥೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಭಾರತಕ್ಕೆ ಪಶ್ಚಿಮ ಏಷ್ಯಾ ದೇಶಗಳಿಂದ ಎರಡು ಎಲ್ಪಿಜಿ ಟ್ಯಾಂಕರ್ಗಳು ಬರಲಿದೆ. ಆ ಎಲ್ಪಿಜಿಯಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣವನ್ನು ಪೂರೈಕೆ ಮಾಡಬೇಕು’ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಒತ್ತಾಯಿಸಿದ್ದಾರೆ.

‘ಆಟೊ ಎಲ್ಪಿಜಿ ಪೂರೈಸಿ’ ರಾಜ್ಯದಲ್ಲಿ ಆಟೊರಿಕ್ಷಾಗಳು ಖಾಸಗಿ ವಾಹನಗಳು ಎಲ್ಪಿಜಿ ಕಿಟ್ ಅಳವಡಿಸಿಕೊಂಡಿವೆ. ಆಟೊ ಎಲ್ಪಿಜಿ ಪೂರೈಕೆ ಆಗದೇ ಇರುವುದರಿಂದ ಅವು ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾರಿಗೆ ವ್ಯವಸ್ಥೆಗೆ ತೊಡಕಾಗಿದೆ. ಆಟೊ ಎಲ್ಪಿಜಿ ಪೂರೈಕೆ ಎಷ್ಟು ಪ್ರಮಾಣದಲ್ಲಿ ಆಗುತ್ತಿದೆ ಎಷ್ಟು ಕೊರತೆ ಇದೆ ಎಂಬುದರ ಲೆಕ್ಕಾಚಾರವಿಲ್ಲ. ಅಪಾರದರ್ಶಕ ವ್ಯವಸ್ಥೆಯ ಕಾರಣಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಕೂಡಲೇ ಈ ಬಗ್ಗೆ ಗಮನಹಿರಿಸಿ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹರಿದೀಪ್ ಸಿಂಗ್ ಪುರಿ ಅವರನ್ನು ಒತ್ತಾಯಿಸಿದ್ದಾರೆ. ದೇಶದಲ್ಲಿ ಅತಿಹೆಚ್ಚು ಆಟೊ ಎಲ್ಪಿಜಿ ಬಳಸುವ ರಾಜ್ಯ ಕರ್ನಾಟಕ. ಇಡೀ ದೇಶವು ವಾರ್ಷಿಕ 85000 ಟನ್ಗಳಷ್ಟು ಆಟೊ ಎಲ್ಪಿಜಿ ಬಳಿಸಿದರೆ ಕರ್ನಾಟದಲ್ಲಿ ಅದರ ಪಾಲು ಶೇ 37ರಷ್ಟು. ಅಂದರೆ ರಾಜ್ಯದಲ್ಲಿ ವಾರ್ಷಿಕ 31500–32000 ಟನ್ಗಳಷ್ಟು ಆಟೊ ಎಲ್ಪಿಜಿ ಬಳಕೆಯಾಗುತ್ತದೆ. ಆದರೆ ಈಗ ಎಷ್ಟು ಟನ್ ಆಟೊ ಎಲ್ಪಿಜಿ ಪೂರೈಕೆಯಾಗುತ್ತಿದೆ ಎಂಬುದರ ಮಾಹಿತಿ ಲಭ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.