ರಾಜ್ಯ, ರಾಷ್ಟ್ರೀಯ, ವಿದೇಶ, ಕ್ರೀಡೆ, ಸಿನಿಮಾ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ...

ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ(ಎಸ್ಐಆರ್) ಮೊದಲ ಪೂರಕ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗವು ಸೋಮವಾರ ರಾತ್ರಿ ಬಿಡುಗಡೆ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿ ಬೂತ್ನ ಪಟ್ಟಿಗಳನ್ನು ರಾತ್ರಿ 11.55ರ ಸುಮಾರಿಗೆ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
.ಪಶ್ಚಿಮ ಬಂಗಾಳ: ಎಸ್ಐಆರ್ ಬಳಿಕ ಮೊದಲ ಪೂರಕ ಮತದಾರರ ಪಟ್ಟಿ ಬಿಡುಗಡೆ.
ಕೊಲಂಬಿಯಾದ ದಕ್ಷಿಣ ಭಾಗದಲ್ಲಿ ಸೋಮವಾರ ಸೇನಾ ಸಾರಿಗೆ ವಿಮಾನ ಅಪಘಾತಕ್ಕಿಡಾಗಿದ್ದು, ಕನಿಷ್ಠ 80 ಸೈನಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಕೊಲಂಬಿಯಾದ ಸೇನೆ ತಿಳಿಸಿದೆ. ಈಕ್ವೆಡಾರ್ನ ದಕ್ಷಿಣ ಗಡಿ ಬಳಿಯ ಪೋರ್ಟೊ ಲೆಗಿಜಾಮೊದಿಂದ ಸೈನಿಕರು ಮತ್ತು ಸಿಬ್ಬಂದಿ ಸೇರಿದಂತೆ 125 ಜನರನ್ನು ಹೊತ್ತೊಯ್ಯತ್ತಿದ್ದ ‘ಸಿ–130 ಹರ್ಕ್ಯುಲಸ್’ ವಿಮಾನ ‘ಟೇಕ್ ಆಫ್’ ಆಗುತ್ತಿದ್ದಂತೆ ಪತನಗೊಂಡು ಅಪಘಾತ ಸಂಭವಿಸಿದೆ.
.ಕೊಲಂಬಿಯಾ ವಿಮಾನ ಅಪಘಾತ: 80 ಸೈನಿಕರ ಸಾವಿನ ಶಂಕೆ.
ವಿವಿಧ ನೀರಾವರಿ ಕಾಮಗಾರಿಗಳ ಬಿಲ್ಗಳ ಪಾವತಿಗೆ ₹1,025.48 ಕೋಟಿ, ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶ ಮತ್ತು ಪ್ರಚಾರಕ್ಕಾಗಿ ₹147 ಕೋಟಿ, ಕಾಡಾನೆ– ಮಾನವ ಸಂಘರ್ಷ ತಡೆಗಾಗಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ₹223 ಕೋಟಿ ಸೇರಿ ವಿವಿಧ ಬೇಡಿಕೆಗಳಿಗೆ ₹14,767.89 ಕೋಟಿ ಮೊತ್ತದ ಮೂರನೇ ಮತ್ತು ಅಂತಿಮ ಕಂತಿನ ಪೂರಕ ಅಂದಾಜನ್ನು ವಿಧಾನಸಭೆಯಲ್ಲಿ ಸೋಮವಾರ ಮಂಡಿಸಲಾಯಿತು.
.Karnataka Govt: ವಿಧಾನಸಭೆಯಲ್ಲಿ ₹14,767 ಕೋಟಿ ಪೂರಕ ಅಂದಾಜು ಮಂಡನೆ.
ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ (ಎಡಿಎಜಿ) ಮತ್ತು ಅದರ ಸಂಸ್ಥೆಗಳನ್ನು ಒಳಗೊಂಡಿರುವ ಭಾರಿ ಪ್ರಮಾಣದ ಬ್ಯಾಂಕಿಂಗ್ ವಂಚನೆ ಪ್ರಕರಣದ ತನಿಖೆಯಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ನಿರಾಸಕ್ತಿ ತೋರುತ್ತಿರುವುದು ಸರಿ ಅಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಬೇಸರ ವ್ಯಕ್ತಪಡಿಸಿದೆ.
.ಅನಿಲ್ ಅಂಬಾನಿ ವಿರುದ್ಧದ ತನಿಖೆಗೆ CBI, ಇ.ಡಿ ನಿರಾಸಕ್ತಿ ಸಲ್ಲ: ಸುಪ್ರೀಂ .
ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಲು ಇರಾನ್ಗೆ ನೀಡಿದ್ದ ಗಡುವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಸ್ತರಿಸಿದ್ದಾರೆ. ಇರಾನಿನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಐದು ದಿನಗಳವರೆಗೆ ತಡೆಹಿಡಿದಿರುವುದಾಗಿ ಸೋಮವಾರ ಹೇಳಿದ್ದಾರೆ.
.ಹೊರ್ಮುಜ್ ಜಲಸಂಧಿ ತೆರವಿಗೆ ಗಡುವು ವಿಸ್ತರಿಸಿದ ಟ್ರಂಪ್, ತೈಲ ಬೆಲೆ ಇಳಿಕೆ.
ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯನ್ನು ಶೇ 20ರಷ್ಟು ಜಾಸ್ತಿ ಮಾಡಿರುವುದರಿಂದ ರೆಸ್ಟೋರೆಂಟ್, ಡಾಬಾ, ಹೋಟೆಲ್ಗಳಿಗೆ ನಿತ್ಯ 10 ಸಾವಿರ ಎಲ್ಪಿಜಿ ಸಿಲಿಂಡರ್ಗಳನ್ನು ನೀಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಆದಿತ್ಯ ಧಾರ್ ನಿರ್ದೇಶನದ, ರಣ್ವೀರ್ ಸಿಂಗ್ ನಟನೆಯ ‘ಧುರಂಧರ್–ದಿ ರಿವೇಂಜ್’ ಸಿನಿಮಾ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಭಾರತದಲ್ಲಿ ₹541 ಕೋಟಿಗೂ ಅಧಿಕ ಹಣ ಗಳಿಸಿದೆ. ಸಿನಿಮಾವು ಪೇಯ್ಡ್ ಪ್ರಿವ್ಯೂವ್ ಮೂಲಕವೇ ₹43 ಕೋಟಿ ಗಳಿಸಿದ್ದು, ಬಿಡುಗಡೆಯಾದ ದಿನ(ಮಾರ್ಚ್ 19) ₹102.55 ಕೋಟಿ ಗಳಿಸಿತ್ತು. ವಿಶ್ವದಾದ್ಯಂತ ಸಿನಿಮಾದ ಒಟ್ಟಾರೆ ಗಳಿಕೆಯು ₹751 ಕೋಟಿ ದಾಟಿದೆ ಎಂದು ಸ್ಯಾಕ್ನಿಲ್ಕ್ ವೆಬ್ಸೈಟ್ ಉಲ್ಲೇಖಿಸಿದೆ.
.ನಾಲ್ಕು ದಿನಗಳಲ್ಲಿ ₹500 ಕೋಟಿ ದಾಟಿದ ‘ಧುರಂಧರ್–ದಿ ರಿವೇಂಜ್’ ಗಳಿಕೆ .
ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಕುರಿತು ವಿದೇಶಾಂಗ ಸಚಿವ ಜೈಶಂಕರ್ ಅವರು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪಶ್ಚಿಮ ಏಷ್ಯಾ ಸಂಘರ್ಷವು ಜಾಗತಿಕ ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
.ಪಶ್ಚಿಮ ಏಷ್ಯಾ ಬಿಕ್ಕಟ್ಟು: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜತೆ ಜೈಶಂಕರ್ ಮಾತುಕತೆ.
ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಒಂದೆಡೆ ಭರದ ಸಿದ್ಧತೆಗಳು ನಡೆದಿವೆ. ಇನ್ನೊಂದೆಡೆ ಪಂದ್ಯಗಳ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರ್ಯಾಂಚೈಸಿ ನಿರ್ಧರಿಸಿದೆ. ಕ್ರೀಡಾಂಗಣದ ನವೀಕರಣದ ಭಾಗವಾಗಿ ಹೊಸ ಪ್ರವೇಶದ್ವಾರಗಳಿಗೆ ಸಂಖ್ಯೆಗಳನ್ನು ಅಳವಡಿಸುವ, ಗೇಟ್ಗಳಿಗೆ ಮಾರ್ಗದ ನಕ್ಷೆಗಳನ್ನು ಅಲ್ಲಲ್ಲಿ ಹಾಕುವ ಕಾರ್ಯ ಭರದಿಂದ ನಡೆದಿದೆ.
.IPL-2026: ಆರ್ಸಿಬಿ ಟಿಕೆಟ್ಗಾಗಿ ಅಭಿಮಾನಿಗಳ ಬೇಡಿಕೆ; ಸಿದ್ಧತೆಗಳು ಜೋರು.
‘ಈ ಹಿಂದೆ ಆಡುವ ಭರದಲ್ಲಿ ದೇಹದ ಬಗ್ಗೆ ನಾನು ಅಷ್ಟೇನೂ ಕಾಳಜಿ ವಹಿಸಿರಲಿಲ್ಲ. ಆದರೆ ಗಂಭೀರ ಸ್ವರೂಫದ ಗಾಯದ ಸಮಸ್ಯೆಗಳು ಎದುರಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಪುನಶ್ಚೇತನ ಅವಧಿಯಲ್ಲಿ ಜಸ್ಪ್ರೀತ್ ಬೂಮ್ರಾ ಜೊತೆಗಿನ ಸಂವಾದ ನನ್ನ ಚೇತರಿಕೆಗೆ ನೆರವು ನೀಡಿತು’ ಎಂದು ವೇಗದ ಬೌಲರ್ ಮಯಂಕ್ ಯಾದವ್ ಹೇಳಿದ್ದಾರೆ.
.ಶಸ್ತ್ರಚಿಕಿತ್ಸೆ ಪಾಠ ಕಲಿಸಿತು: ಮಯಂಕ್ ಯಾದವ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.