ಬೆಂಗಳೂರು: ‘ಯಾವುದೇ ಸರ್ಕಾರಿ ನೌಕರನನ್ನು ವರ್ಗಾವಣೆ ಮಾಡಿದ ಬಳಿಕ, ಸ್ಥಳ ನಿಯುಕ್ತಿಗಾಗಿ ಕಾಯುವಂತೆ ಮಾಡದೆ ಕಡ್ಡಾಯವಾಗಿ ಹುದ್ದೆ ನೀಡಬೇಕು’ ಎಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚಿಸಿದ್ದಾರೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಅವರು, ‘ಈ ಸೂಚನೆಯನ್ನು ಉಲ್ಲಂಘಿಸಿ ಸ್ಥಳ ನಿಯುಕ್ತಿ ನೀಡದೆ ಕಡ್ಡಾಯ ನಿರೀಕ್ಷಣೆಯಲ್ಲಿ ಇರಿಸಿದರೆ ಇತ್ತೀಚೆಗೆ ಹೈಕೋರ್ಟ್ ನೀಡಿರುವ ನಿರ್ದೇಶನದಂತೆ, ಅಂತಹ ಅಧಿಕಾರಿ, ನೌಕರರಿಗೆ ನಿರೀಕ್ಷಣೆಯ ಅವಧಿಗೆ ಪಾವತಿಸಿದ ವೇತನ ಮತ್ತು ಭತ್ಯೆಯನ್ನು ಸಂಬಂಧಿತ ಸಕ್ಷಮ ಪ್ರಾಧಿಕಾರಗಳಿಂದ ವಸೂಲಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ಥಳ ನಿಯುಕ್ತಿಗೊಳಿಸದೆ ತಮ್ಮನ್ನು ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಅಬಕಾರಿ ಉಪ ಆಯುಕ್ತ ಕೆ. ಅರುಣ್ ಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ‘ಯಾವುದೇ ನೌಕರರನ್ನು ಸ್ಥಳ ನಿಯುಕ್ತಿ ನೀಡದೆ ವರ್ಗಾವಣೆ ಮಾಡುವಂತೆ ಇಲ್ಲ. ಒಂದೊಮ್ಮೆ ಸ್ಥಳ ನಿಯುಕ್ತಿ ನೀಡದೇ ವರ್ಗಾವಣೆ ಮಾಡಿ ಕಡ್ಡಾಯ ನಿರೀಕ್ಷಣೆಯಲ್ಲಿ ಇರಿಸಿದರೆ ಆ ಅವಧಿಗೆ ಪಾವತಿಸಲಾದ ವೇತನ ಮತ್ತು ಭತ್ಯೆಯನ್ನು ಸಂಬಂಧಿತ ಸಕ್ಷಮ ಪ್ರಾಧಿಕಾರಗಳಿಂದ ವಸೂಲಿ ಮಾಡಬೇಕು’ ಎಂದು ತೀರ್ಪು ನೀಡಿತ್ತು.

ಹೈಕೋರ್ಟ್ನ ಈ ತೀರ್ಪನ್ನು ಸುತ್ತೋಲೆಯಲ್ಲಿ ಉಲ್ಲೇಖಿಸಿರುವ ಶಾಲಿನಿ ರಜನೀಶ್, ‘ಯಾವುದೇ ಸರ್ಕಾರಿ ನೌಕರರ ವರ್ಗಾವಣೆಯಾದ ಸಂದರ್ಭಗಳಲ್ಲಿ ತಕ್ಷಣವೇ ಕಡ್ಡಾಯವಾಗಿ ಸ್ಥಳ ನಿಯುಕ್ತಿ ನೀಡಬೇಕೆಂದು ಈ ಹಿಂದೆಯೇ ಸ್ಪಷ್ಟವಾದ ಸೂಚನೆ ನೀಡಲಾಗಿದೆ. ಆದರೂ ಕೆಲವು ಇಲಾಖೆಗಳಲ್ಲಿ ಅಧಿಕಾರಿ, ನೌಕರರನ್ನು ವರ್ಗಾಯಿಸಿದಾಗ ಪರ್ಯಾಯ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸದೇ ಇರುವುದರಿಂದ ಅಂತಹ ಅಧಿಕಾರಿಗಳು, ನೌಕರರು ಕಡ್ಡಾಯ ನಿರೀಕ್ಷಣೆಗೆ ಬರುವ ಪರಿಸ್ಥಿತಿ ಉಂಟಾಗಿ, ಅವರು ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸದಿದ್ದರೂ ಅವರಿಗೆ ವೇತನ ಹಾಗೂ ಭತ್ಯೆಗಳನ್ನು ಪಾವತಿಸುವ ಅನಿವಾರ್ಯ ಉಂಟಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಅನವಶ್ಯಕ ಆರ್ಥಿಕ ಹೊರೆಯಾಗುತ್ತಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.