ನವದೆಹಲಿ: ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ನೂತನ ಮುಖ್ಯಮಂತ್ರಿ ಆಯ್ಕೆಗೆ ದಾರಿ ಮಾಡಿ
ಕೊಟ್ಟಿದ್ದಾರೆ. ಆದರೆ, ಕರ್ನಾಟಕದಲ್ಲಿ ಈಗ ಹಠಾತ್ತನೇ ಮುಖ್ಯಮಂತ್ರಿ ಬದಲಾವಣೆಗೆ ಪಕ್ಷವು ಏಕೆ ಮುಂದಾಯಿತು ಎಂಬ ಬಗ್ಗೆ ಕಾಂಗ್ರೆಸ್ನ ಪಡಸಾಲೆಯಲ್ಲಿ ವಿಶ್ಲೇಷಣೆ ಮತ್ತು ಚರ್ಚೆಗಳು ಆರಂಭವಾಗಿವೆ.

ಪಕ್ಷದ ರಾಜಸ್ಥಾನ ಹಾಗೂ ಛತ್ತೀಸಗಢ ಘಟಕಗಳಲ್ಲಿಯೂ ಈ ಹಿಂದೆ ಅಸಮಾಧಾನ, ಭಿನ್ನಮತ ಭುಗಿಲೆದ್ದಿದ್ದವು. ಆದರೆ ಆ ರಾಜ್ಯಗಳಲ್ಲಿ ಕೈಗೊಳ್ಳದಂತಹ ‘ಕಠಿಣ ನಿಲುವನ್ನು’ ಕರ್ನಾಟಕದಲ್ಲಿ
ಏಕೆ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗಳಿಗೆ ಕಾಂಗ್ರೆಸ್ ನಾಯಕರು ತಮ್ಮದೇ ಉತ್ತರ ಮುಂದಿಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ವಯಸ್ಸಾಗುತ್ತಿದ್ದು, ಅವರ ನೇತೃತ್ವದಲ್ಲಿ 2028ರ ಚುನಾವಣೆ ಎದುರಿಸುವುದು ಕಷ್ಟವಾಗಲಿದೆ ಎಂಬ ಗ್ರಹಿಕೆ ಪಕ್ಷದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿತ್ತು. ನಾಯಕತ್ವ ಬಗೆಗಿನ ಗೊಂದಲ ಹಾಗೂ ಶಾಸಕರಲ್ಲಿ ಹೆಚ್ಚುತ್ತಿರುವ ಅಸಮಾಧಾನಗಳೇ ಈ ದಿಢೀರ್ ಅಧಿಕಾರ ಹಸ್ತಾಂತರಕ್ಕೆ ಪಕ್ಷದ ವರಿಷ್ಠರು ಮುಂದಾಗುವಂತೆ ಮಾಡಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸುವರೇ ಎಂಬುದು ನಿಗೂಢವಾಗಿಯೇ ಇತ್ತು. ಇದು, ಸಿದ್ದರಾಮಯ್ಯ ಬೆಂಬಲಿಗ ಶಾಸಕರಲ್ಲಿ ಹೊಯ್ದಾಟಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಗಳು ಸಿದ್ದರಾಮಯ್ಯ ಬೆಂಬಲಿಗ ಶಾಸಕರಲ್ಲಿ ಅಸಮಾಧಾನ ಮೂಡಿಸಿದ್ದಕ್ಕಿಂತ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಅವರಲ್ಲಿ ಚಿಂತೆ ಮೂಡಿಸಿತ್ತು. ಇದು, ಈ ಶಾಸಕರು ತಮ್ಮ ಆದ್ಯತೆಗಳನ್ನು ಮರುಹೊಂದಾಣಿಕೆ ಮಾಡಿಕೊಳ್ಳುವಂತೆ ಮಾಡಿತು ಎಂದೂ ಹೇಳಲಾಗುತ್ತಿದೆ.

‘2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ’ ಎಂದು 2024ರ ಏಪ್ರಿಲ್ನಲ್ಲಿ ಸಿದ್ದರಾಮಯ್ಯ ಘೋಷಿಸಿದ್ದರು. ಇದು ತಮ್ಮ ಮುಂದಿನ ರಾಜಕೀಯ ನಡೆ ನಿರ್ಧರಿಸಲು ಅವರ ಬೆಂಬಲಿಗರಿಗೆ ದಾರಿ ಸುಗಮ ಮಾಡಿತು ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಚುನಾವಣೆಗಳು ಸಮೀಪಿಸುತ್ತಿರುವಾಗಲೇ ತನ್ನ ಏಕೈಕ ಒಬಿಸಿ ಮುಖ್ಯಮಂತ್ರಿಯನ್ನು ಕೆಳಗಿಳಿಸಿ, ಪ್ರಭಾವಿ ಒಕ್ಕಲಿಗ ನಾಯಕನಿಗೆ ಮುಖ್ಯಮಂತ್ರಿ ಪಟ್ಟ ಕಟ್ಟವುದು ಹಾಗೂ ‘ಅಹಿಂದ’ ಸಮುದಾಯಗಳ ಅಸಮಾಧಾನದ ಬಿಸಿ ಎದುರಿಸುವಂತಹ ಅಪಾಯಗಳನ್ನು ಅರಿತೇ ಪಕ್ಷವು ಕೊನೆಗೆ ಈ ದಿಟ್ಟ ನಿರ್ಧಾರ ಕೈಗೊಂಡಿತು ಎಂದು ಇವೇ ಮೂಲಗಳು ಹೇಳಿವೆ.

ಅಧಿಕಾರ ಹಸ್ತಾಂತರಿಸುವ ತನ್ನ ಯೋಜನೆಯನ್ನು ಹೈಕಮಾಂಡ್ ಬಹಳ ಚಾಣಾಕ್ಷತೆಯಿಂದ ಕಾರ್ಯಗತಗೊಳಿಸಿದೆ. ಯಾವುದೇ ಹೈಡ್ರಾಮಾ ಅಥವಾ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವಂತಹ ಬೇಡಿಕೆ
ಗಳು ಎದುರಾಗದೇ, ಸಿದ್ದರಾಮಯ್ಯ ಅವರ ನಿರ್ಗಮನ ಗೌರವಯುತವಾಗಿರುವಂತೆ ನೋಡಿಕೊಳ್ಳುವಲ್ಲಿಯೂ ಹೈಕಮಾಂಡ್ ಯಶಸ್ವಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೇರಳಂ ಗೆಲುವೂ ಕಾರಣ

ಮುಖ್ಯಮಂತ್ರಿ ಹುದ್ದೆಗೇರಿದ ನಂತರದ ದಿನಗಳಲ್ಲಿ, ‘ಅಧಿಕಾರ ಹಂಚಿಕೆ ಕುರಿತು ಒಪ್ಪಂದ’ ಆಗಿರುವುದನ್ನು ಸಿದ್ದರಾಮಯ್ಯ ನಿರಾಕರಿಸುತ್ತಲೇ ಬಂದರು. ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಮುಖ್ಯಮಂತ್ರಿಯವರನ್ನು ಬದಲಾಯಿಸುವಲ್ಲಿ ಪಕ್ಷದ ಹೈಕಮಾಂಡ್ ವಿಫಲವಾಗಿದ್ದನ್ನೇ ನೆಚ್ಚಿಕೊಂಡಿದ್ದ ಅವರು, ತಮ್ಮನ್ನು ಬದಲಾಯಿಸುವುದಿಲ್ಲ ಎಂದೇ ನಂಬಿದ್ದರು.

ಆದರೆ, ಕೇರಳಂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ಗೆ ಸಿಕ್ಕ ಗೆಲುವು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕುರಿತು ದಿಟ್ಟ ಕ್ರಮ ತೆಗೆದುಕೊಳ್ಳುವಂತೆ ಪಕ್ಷದ ವರಿಷ್ಠರಿಗೆ ಬಲ ತಂದುಕೊಟ್ಟಿತು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.