ಬೆಂಗಳೂರು: ‘ಕಾಂಗ್ರೆಸ್ ಬಿಟ್ಟು ಬಂದಾಗಿನಿಂದ ನನ್ನ ವಿರುದ್ಧ ಪಿತೂರಿ ನಡೆದಿತ್ತು. ಈ ಷಡ್ಯಂತ್ರದ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವುದು ಇಡಿ ರಾಜ್ಯಕ್ಕೆ ಗೊತ್ತಿದೆ’ ಎಂದು ಶಾಸಕ ಮುನಿರತ್ನ ಹೇಳಿದರು.
ಬಂಧನಕ್ಕೆ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜಕೀಯ ಪಿತೂರಿಯಿಂದ ದೂರು ನೀಡಿದ್ದಾರೆ. ಚುನಾವಣೆ ಸಮಯದಲ್ಲೂ ಪ್ರಯತ್ನ ನಡೆದಿತ್ತು. ನನ್ನ ರಾಜೀನಾಮೆ ಕೊಡಿಸಿ ಅವರ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನ ಮಾಡುತ್ತಿದ್ದಾರೆ. ಕಾನೂನಿನ ಹೋರಾಟ ನಡೆಸುತ್ತೇನೆ’ ಎಂದರು.
‘ನನ್ನ ವಿರುದ್ಧ ವಿಡಿಯೊ ಮಾಡಿಸಲು ಸಾಧ್ಯವಾಗಿಲ್ಲ. ಹಾಗಾಗಿ, ಆಡಿಯೊ ಮಾಡಿಸಿದ್ದಾರೆ. ಬಾಯಿ ಶುದ್ಧವಾಗಿಯೇ ಇದೆ. ಮುಖ್ಯಮಂತ್ರಿ ಕಡೆಯ ಜನ ಮೊದಲು ಇಂತಹ ಕುತಂತ್ರ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.