ಬೆಂಗಳೂರು: ತುರ್ತು ಸೇವೆ ಒದಗಿಸುವ ಸರ್ಕಾರಿ ಸ್ವಾಮ್ಯದ ದೇಶದ ಮೊದಲ ‘108 ಆರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ (ಸಿಸಿಸಿ)’ ಕಾರ್ಯಾರಂಭ ಮಾಡಿದೆ. 2008ರಿಂದ ಖಾಸಗಿ ಸಹಭಾಗಿತ್ವದಲ್ಲಿದ್ದ ಈ ಸೇವೆ ಇನ್ನು ಮುಂದೆ ಸರ್ಕಾರದ ಸುರ್ಪದಿಯಲ್ಲಿ ನಡೆಯಲಿದೆ.

ಆರೋಗ್ಯ ಇಲಾಖೆ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಕೇಂದ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

‘ಒಂದು ಕರೆ ನಮಗೆ, ತುರ್ತು ಸೇವೆ ನಿಮಗೆ’ ಎಂಬ ಘೋಷವಾಕ್ಯದೊಂದಿಗೆ ಆರಂಭಿಸಿರುವ ಸಿಸಿಸಿ ತಂತ್ರಜ್ಞಾನ ಆಧರಿತವಾಗಿದೆ. 24X7 ಮೂರು ಪಾಳಿಗಳಲ್ಲಿ 50 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. 108 ಆರೋಗ್ಯ ಕವಚ, 104 ಆರೋಗ್ಯ ಸಹಾಯವಾಣಿ, 112 ಸಹಾಯವಾಣಿ, ಟೆಲಿ ಮನಸ್, ಇ ಸಂಜೀವಿನಿ, ಮಹಿಳಾ ಸಹಾಯವಾಣಿ 181, ಮಕ್ಕಳ ಸಹಾಯವಾಣಿ 1098 ಸೇವೆಗಳನ್ನು ಇದಕ್ಕೆ ಸಂಯೋಜನೆ ಮಾಡಲಾಗಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಸಿಸಿಸಿಗೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸುವ ಸಲುವಾಗಿ ಸಿಂಗಪುರದ ಆಂಬುಲೆನ್ಸ್ ವ್ಯವಸ್ಥೆ ಸೇರಿ ಹಲವು ಮಾದರಿಗಳನ್ನು ಅಧ್ಯಯನ ಮಾಡಲಾಯಿತು. ಈ ವ್ಯವಸ್ಥೆಯನ್ನು ಚಾಮರಾಜನಗರದಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿದ್ದು, ಯಶಸ್ವಿಯಾಯಿತು. ಈಗ ರಾಜ್ಯವ್ಯಾಪಿ ವಿಸ್ತರಿಸಲಾಗಿದೆ’ ಎಂದರು.

‘ಸರ್ಕಾರಿ ಸ್ವಾಮ್ಯದ ಸಿ-ಡಾಕ್ ಸಂಸ್ಥೆಯು ಸಾಫ್ಟ್ವೇರ್ ಸಿದ್ದಪಡಿಸಿದೆ. ಈಗಿನ ಸುಧಾರಿತ ವ್ಯವಸ್ಥೆಯಲ್ಲಿ ತುರ್ತು ಸಂದರ್ಭದಲ್ಲಿ ಕಮಾಂಡ್ ಸೆಂಟರ್ಗೆ ರಾಜ್ಯದ ಯಾವುದೇ ಭಾಗದಿಂದ ಕರೆ ಮಾಡಿದ ವ್ಯಕ್ತಿಯ ಲೋಕೇಷನ್ ಗೊತ್ತಾಗಲಿದೆ. ರೋಗಿಯ ಸ್ಥಿತಿ ಆಧರಿಸಿ ಸೂಕ್ತ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ನಿಂದಲೇ ಎಂಡಿಟಿ ಟ್ಯಾಬ್ ಸಾಧನದ ಮೂಲಕ ವೈದ್ಯರನ್ನು ಸಂಪರ್ಕಿಸಿ, ಮಾರ್ಗದರ್ಶನ ಪಡೆಯಬಹುದು ಹಾಗೂ ಆಸ್ಪತ್ರೆಗೂ ಸಂದೇಶ ನೀಡಿ, ಸಕಲ ಸಿದ್ಧತೆ ಮಾಡಿಕೊಳ್ಳಲು ಹೇಳಬಹುದು’ ಎಂದು ತಿಳಿಸಿದರು.

‘ಅಲ್ಲದೇ, 108 ಆರೋಗ್ಯ ಕವಚದ 715 ಆಂಬುಲೆನ್ಸ್ಗಳಿಗೂ ಜಿಪಿಎಸ್ ಅಳವಡಿಸಿರುವುದರಿಂದ ಚಲನವಲನ ತಿಳಿದುಕೊಳ್ಳಬಹುದು. ಕರೆ ಮಾಡಿದ ವ್ಯಕ್ತಿಗೂ ಆಂಬುಲೆನ್ಸ್ ಮಾಹಿತಿ, ತಲುಪುವ ಸಮಯ, ಆಸ್ಪತ್ರೆ ಬಗ್ಗೆ ಮೊಬೈಲ್ಗೆ ಸಂದೇಶ ಕಳುಹಿಸಲಾಗುತ್ತದೆ. ದೇಶದಲ್ಲಿ ಸರ್ಕಾರಿ ಸ್ವಾಮ್ಯದ ಸಿಸಿಸಿ ಆರಂಭಿಸಿರುವ ಮೊದಲ ರಾಜ್ಯ ಕರ್ನಾಟಕ’ ಎಂದು ಮಾಹಿತಿ ನೀಡಿದರು.

ಶಾಸಕ ಎಸ್. ಸುರೇಶ್ ಕುಮಾರ್ ಅವರು ಸಿಸಿಸಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಧಾನ ಪರಿಷತ್ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ಶಾಸಕ ಪ್ರಿಯಕೃಷ್ಣ, ಆರೋಗ್ಯ ಇಲಾಖೆ ಕಾರ್ಯದರ್ಶಿ ರಿತ್ವಿಕ್ ರಂಜನ್ ಪಾಂಡೆ, ಡಿಜಿಟಲ್ ಹೆಲ್ತ್ ಸೊಸೈಟಿ ನಿರ್ದೇಶಕ ವಿಪಿನ್ ಸಿಂಗ್, ಆರೋಗ್ಯ ಇಲಾಖೆ ನಿರ್ದೇಶಕಿ ಡಾ.ರಜನಿ, ಸಿಸಿಸಿ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೈ.ಕೆ.ದಿನೇಶ್ ಕುಮಾರ್ ಹಾಜರಿದ್ದರು.

ಜೀವ ಉಳಿಸುವ ಗೋಲ್ಡನ್ ಅವರ್ ಚಿಕಿತ್ಸೆ: ಸಿ.ಎಂ

‘ರಸ್ತೆ ಅಪಘಾತಗಳು ಹೆರಿಗೆ ಹೃದಯಾಘಾತ ಸೇರಿದಂತೆ ಹಲವು ಕ್ಲಿಷ್ಟ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆ ಅಗತ್ಯವಾಗಿದ್ದು ಗೋಲ್ಡನ್ ಅವರ್ನಲ್ಲಿ (ಘಟನೆ ಸಂಭವಿಸಿದ ಒಂದು ಗಂಟೆಯೊಳಗೆ) ಚಿಕಿತ್ಸೆ ದೊರೆತರೆ ರೋಗಿಗಳು ಬದುಕುವ ಸಾಧ್ಯತೆ ಹೆಚ್ಚಿರುತ್ತದೆ. ಗೋಲ್ಡನ್ ಅವರ್ನಲ್ಲಿ ದೊರೆತ ಚಿಕಿತ್ಸೆಯಲ್ಲಿ ಸುಮಾರು ಶೇಕಡ 80 ರಷ್ಟು ಜನರು ಬದುಕುಳಿದಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಂಬುಲೆನ್ಸ್ ಸೇವೆ ಲಭ್ಯವಾಗಲಿದೆ. ಬೆಂಗಳೂರು ನಗರದಲ್ಲಿ 65ರಿಂದ 70 ಆಂಬುಲೆನ್ಸ್ಗಳು ತುರ್ತು ಚಿಕಿತ್ಸೆಗೆ ನೆರವಾಗುತ್ತಿವೆ. 108 ಆಂಬುಲೆನ್ಸ್ ವ್ಯವಸ್ಥೆ ಖಾಸಗಿಯವರ ಕೈಯಲ್ಲಿದ್ದಾಗ ಅವರ ಹೊಣೆಗಾರಿಕೆ ಪ್ರಶ್ನಿಸುವಂತಿರಲಿಲ್ಲ. ಆದರೆ ಈಗ ಸರ್ಕಾರದ ಅಧೀನದಲ್ಲಿರುವುದರಿಂದ ಈ ಸೇವೆಯ ಹೊಣೆಗಾರಿಕೆ ಹೆಚ್ಚಿದೆ’ ಎಂದರು.

‘ಜನರು ಖಾಸಗಿ ಆಸ್ಪತ್ರೆಗೆ ಹೋಗಿ ಸರ್ಕಾರದಿಂದ ಧನಸಹಾಯ ಕೇಳುವ ಬದಲು ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಸರ್ಕಾರಿ ಆರೋಗ್ಯ ಸೇವೆ ಕಳಪೆಯಾಗಿರದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ನೋಡಿಕೊಳ್ಳಬೇಕು’ ಎಂದು ಕಿವಿ ಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.