ಬೆಂಗಳೂರು: ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರತಿ 40 ನಿಮಿಷಕ್ಕೊಂದು ಪ್ರಕರಣ ದಾಖಲಾಗುತ್ತಿದೆ. ಆದರೆ, ಶಿಕ್ಷೆಯ ಪ್ರಮಾಣ ಶೇಕಡ 32ರಿಂದ 34ರಷ್ಟು ಇದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (ಯುಎನ್ಎಚ್ಆರ್ಸಿ) ವಿಷಯ ತಜ್ಞೆ ಕೆ.ಪಿ.ಅಶ್ವಿನಿ ಹೇಳಿದರು.

ನಗರದಲ್ಲಿ ಮಂಗಳವಾರ ಪರ್ಯಾಯ ಕಾನೂನು ವೇದಿಕೆ, ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಂವಿಧಾನ ಸಂರಕ್ಷಣಾ ವೇದಿಕೆ, ಚಿಕ್ಕಮಗಳೂರು ಜಂಟಿಯಾಗಿ ಆಯೋಜಿಸಿದ್ದ ‘ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡಗಳ(ಎಸ್ಟಿ) ಸಮುದಾಯಗಳ ಕಲ್ಯಾಣಕ್ಕೆ ಸಂಬಂಧಿಸಿದ ಕಾನೂನುಗಳ ಉತ್ತಮ ಅನುಷ್ಠಾನದ ಕಡೆಗೆ’ ಸಮಾಲೋಚನಾಸಭೆಯಲ್ಲಿ ಮಾತನಾಡಿದರು.

ದೌರ್ಜನ್ಯ ಪ್ರಕರಣಗಳು ದಾಖಲಾ ಗುತ್ತಿವೆ. ಆದರೆ, ಸಾಕ್ಷ್ಯಾಧಾರಗಳ ಕೊರತೆ ಕಾರಣಕ್ಕೆ ಆರೋಪಿಗಳು ಖುಲಾಸೆ ಆಗುತ್ತಿದ್ದಾರೆ. ಹಾಗಾಗಿ ಶಿಕ್ಷೆ ಪ್ರಮಾಣ ಕಡಿಮೆ ಆಗುತ್ತಿದೆ. ಹಾಗೆಂದ ಮಾತ್ರಕ್ಕೆ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಹೇಳಿದರು.

‘ಉತ್ತರ ಭಾರತಕ್ಕೆ ಹೋಲಿಸಿದರೆ, ಕರ್ನಾಟಕದಲ್ಲಿ ಹಿಂದುಳಿದ ವರ್ಗ ದವರಿಗೆ ಕಾನೂನು ನೆರವು ಸಿಗುತ್ತಿದೆ. ಯಾವುದೇ ವಿಷಯದ ಬಗ್ಗೆ ಮಾತನಾಡ ಬೇಕಾದರೆ ದತ್ತಾಂಶ ಹೊಂದಿರಬೇಕು. ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳ ದತ್ತಾಂಶ ವನ್ನು ಅವಲಂಬಿಸಿದ್ದೇವೆ’ ಎಂದರು.

‘ಜಾತಿ ತಾರತಮ್ಯ ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲ, ನಗರ ಪ್ರದೇಶದಲ್ಲೂ ಇದೆ. ಜಾತಿ ತಾರತಮ್ಯ ಕಣ್ಣಿಗೆ ಕಾಣದಿರಬಹುದು. ಸಾಮಾಜಿಕ ಜಾಲತಾಣ, ವಿಶ್ವವಿದ್ಯಾಲಯಗಳಲ್ಲಿ ನೋಡಬಹುದು. ಜಾತಿ ನಿರ್ಮೂಲನೆ ಮಾಡಲು ನಮ್ಮ ಮನಸ್ಥಿತಿ ಬದಲಿಸಿಕೊಳ್ಳಬೇಕು’ ಎಂದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ ಮಾತನಾಡಿ, ‘ಜನರಿಗೆ ಮೊದಲು ಕಾನೂನು ಜಾಗೃತಿ ಮೂಡಿಸಬೇಕು. ಪ್ರಾಧಿಕಾರದ ವತಿಯಿಂದ ‘ಜಾಗೃತಿ’ ಯೋಜನೆ ಜಾರಿಗೆ ತರಲಾಗಿದೆ. ಸಂಘ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಗ್ರಾಮ ಸಭೆಗಳಲ್ಲಿ ಕಾನೂನುಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ’ ಎಂದು ವಿವರಿಸಿದರು.

ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್ ಕುರಿತ ಮರುಸಮೀಕ್ಷೆ ನಡೆಸಿ, ವರ್ಷದೊಳಗೆ ಪುನರ್ವಸತಿ ಕಲ್ಪಿಸಬೇಕು. ಎಸ್ಸಿ, ಎಸ್ಟಿ ಕುಟುಂಬಗಳಲ್ಲಿ ಶೇಕಡ 36ರಷ್ಟು ಕುಟುಂಬಗಳು ಭೂರಹಿತರಾಗಿದ್ದು, ಭೂಮಿ ಹಂಚಿಕೆ ಮಾಡಬೇಕು ಎಂದು ಸಭೆಯು ಸರ್ಕಾರವನ್ನು ಒತ್ತಾಯಿಸಿತು.

ಇದಕ್ಕೂ ಮುನ್ನ ಸಂಶೋಧಕ ಸಿದ್ಧಾರ್ಥ್ ಜೋಶಿ ಅವರು ಪರಿಶಿಷ್ಟ ಜಾತಿ, ಪಂಗಡಗಳ ಕಲ್ಯಾಣಕ್ಕೆ ಸಂಬಂಧಿಸಿದ ಕಾನೂನುಗಳ ಅನುಷ್ಠಾನ ಕುರಿತ ಸಂಶೋಧನಾ ವರದಿ ಮಂಡಿಸಿದರು.

ನಂತರ ನಡೆದ ಚರ್ಚೆಯಲ್ಲಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಸಂಚಾಲಕ ಕೆ.ಬಿ.ಓಬಲೇಶ್, ಸಂಘಟನಾ ಸಂಚಾಲಕಿ ಎಂ.ಪದ್ಮಾ, ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ್, ಎಐಸಿಸಿಟಿಯು ಸಹ ಕಾರ್ಯದರ್ಶಿ ನಾಗರಾಜ ಪೂಜಾರ್, ತುಮಕೂರು ರೆಡ್ಸ್ ಸಂಸ್ಥೆ ಜಿಲ್ಲಾ ಸಂಯೋಜಕ ರಂಗಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಡಿ.ರಂದೀಪ್, ಸಾವಿತ್ರಿ ಬಾಯಿ ಫುಲೆ ಮಹಿಳಾ ಸಂಘಟನೆ ಸಂಚಾಲಕಿ ಚಂದ್ರಮ್ಮ ಹಾಜರಿದ್ದರು.

ದೌರ್ಜನ್ಯಕ್ಕೆ ಒಳಗಾದರೆ, ಅಸ್ಪೃಶ್ಯತೆ ಆಚರಿಸಿದರೆ ಪ್ರಾಧಿಕಾರ ಅಥವಾ ಸಂಬಂಧಪಟ್ಟವರ ಗಮನಕ್ಕೆ ತರಬೇಕು.
ಎಚ್.ಶಶಿಧರ ಶೆಟ್ಟಿ, ಸದಸ್ಯ ಕಾರ್ಯದರ್ಶಿ, ಕಾನೂನು ಸೇವೆಗಳ ಪ್ರಾಧಿಕಾರ

ಎಸ್ಸಿ, ಎಸ್ಟಿ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಪರಿಶೀಲಿಸಲು ಸರ್ಕಾರ ಡಿಸಿಆರ್ಇ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿ, ಅಧಿಕಾರ ನೀಡಿದೆ.
ಅರುಣ್ ಚಕ್ರವರ್ತಿ, ಡಿಜಿಪಿ, ಪೊಲೀಸ್ ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.