ದಾಂಡೇಲಿ: ಕನಿಷ್ಟ ವೇತನ ಪರಿಷ್ಕರಿಸಿ, ವೇತನ ಹೆಚ್ಚಳ ಮಾಡಿ ಅಂತಿಮ ಅಧಿಸೂಚನೆ ಜಾರಿಗೆ ಆಗ್ರಹಿಸಿ ದಾಂಡೇಲಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಸಾಬ ಕೇಸನೂರ ನೇತೃತ್ವದಲ್ಲಿ ಸರ್ಕಾರದ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾತಿಮಾಗೆ ಮನವಿ ಸಲ್ಲಿಸಲಾಯಿತು.

ಕಾರ್ಮಿಕರಿಗೆ 2017ರಲ್ಲಿ ಕನಿಷ್ಟ ವೇತನ ದರಗಳನ್ನು ಪರಿಷ್ಕರಿಸಿ ಹೆಚ್ಚಳ ಮಾಡಲಾಗಿದೆ. ನಿಯಮದಂತೆ ಪ್ರತಿ ಐದು ವರ್ಷಗಳಿಗೊಮ್ಮೆ ಕನಿಷ್ಟ ವೇತನ ದರಗಳು ಪರಿಷ್ಕರಣೆ ಆಗಬೇಕು. ಆ ಪ್ರಕಾರ 2022ರಲ್ಲಿ ಕನಿಷ್ಠ ವೇತನ ಪನಿಷ್ಕರಣೆ ಆಗಬೇಕಿತ್ತು. ಆದರೆ, 2025 ರಲ್ಲಿ ಕಾರ್ಮಿಕ ಇಲಾಖೆ ಕನಿಷ್ಠ ವೇತನ ಪರಿಷ್ಕರಣೆ ಕರಡು ಅಧಿಸೂಚನೆ ಜಾರಿ ಮಾಡಿದೆ. ಈ ಕರಡು ಅಧಿಸೂಚನೆ ಜಾರಿಯಾಗಿ ಒಂದು ವರ್ಷ ರಾಜ್ಯದಲ್ಲಿ ಹಲವಾರು ಪೂರ್ಣಗೊಂಡಿದೆ. ಈವರೆಗೆ ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆ ಜಾರಿ ಆಗಿಲ್ಲ. ಸರಕಾರದ ಈ ವಿಳಂಬ ಧೋರಣೆ ಖಂಡನೀಯ, ಆದ್ದರಿಂದ 2022ನೇ ಸಾಲಿನಿಂದ ಕನಿಷ್ಟ ವೇತನ ಹೆಚ್ಚಳಕ್ಕಾಗಿ ಕಾಯುತ್ತಿರುವ ಬಡಕಾರ್ಮಿಕರ ದೈನಂದಿನ ಕಷ್ಟದ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕನಿಷ್ಟ ವೇತನ ಹೆಚ್ಚಳ ಮಾಡಿ ಅಂತಿಮ ಅಧಿಸೂಚನೆ ಮಾಡಬೇಕೆಂದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಆಯೋಗ ಸಂಘಟನೆ ರಾಜ್ಯ ನಿರ್ದೇಶಕ ಫಿರೋಜ್ ಪೀರ್ಜಾದೆ, ಕಾಂಗ್ರೆಸ್ ಮುಖಂಡ ಕರಿಂ ಅಜರೇಕರ ಕಾರ್ಮಿಕರ ಸಂಘದ ಪ್ರಮುಖರಾದ ಶರಣಪ್ಪ ಬಾಗಲಿ, ಶಿವಪ್ಪ ಎಚ್., ಬಾಬು ಆಲೂರು, ಶೇಖರ ನಾಯ್ಕ, ಜಾಕೀರ, ಶೇಖ್, ರಾಜಶೇಖರ್ ಎನ್, ಮಹೇಶ, ಸಿ.ಡಿ. ಬೈಲಾ ಹಾಗೂ ಸಂಘಟನೆ ಸದಸ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-20-1889561910

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.