ದಾವಣಗೆರೆ: ‘ಕಾರ್ಮಿಕ ಸಂಘಟನೆಗಳು ನಡೆಸಿದ ನಿರಂತರ ಬೀದಿ ಹೋರಾಟ ಹಾಗೂ ಕಾನೂನು ಹೋರಾಟಗಳ ಫಲವಾಗಿ ಕಾರ್ಮಿಕ ಇಲಾಖೆಯು ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ’ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ (ಜೆಸಿಟಿಯು) ಮುಖಂಡ ಆವರಗೆರೆ ಉಮೇಶ್ ತಿಳಿಸಿದರು.

‘ಕಾರ್ಮಿಕರ ಹಿತದೃಷ್ಟಿಯಿಂದ ಅಂತಿಮ ಅಧಿಸೂಚನೆಯನ್ನು ಜಾರಿಗೊಳಿಸುವ ಮುನ್ನ ಪರಿಷ್ಕರಣೆ ಮಾಡಿ, ನಮ್ಮ ಮುಖ್ಯ ಹಕ್ಕೊತ್ತಾಯವಾಗಿದ್ದ ಎಲ್ಲಾ ರೀತಿಯ ಕಾರ್ಮಿಕರಿಗೆ ಮಾಸಿಕ ಕನಿಷ್ಠ ವೇತನವನ್ನು ₹ 31,000 ದಿಂದ ₹ 36,000 ಕ್ಕೆ ಹೆಚ್ಚಿಸಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಈ ಪರಿಷ್ಕೃತ ಅಂತಿಮ ಅಧಿಸೂಚನೆಯು ರಾಜ್ಯದ ಒಟ್ಟು 80 ಅನುಸೂಚಿತ ಉದ್ಯಮಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನ್ವಯವಾಗಲಿದೆ. 2022ರಲ್ಲಿ ಪ್ರಾರಂಭವಾದ ಈ ಪ್ರಕ್ರಿಯೆಯ ಭಾಗವಾಗಿ ಕಳೆದ ಎರಡು ವರ್ಷಗಳ ಕಾಲದ ವೇರಿಯಬಲ್ ಡಿಯರ್ನೆಸ್ ಅಲೋಯೆನ್ಸ್ ಅನ್ನು ಸೇರಿಸುವ ಅಗತ್ಯವನ್ನು ಸರ್ಕಾರ ಪರಿಗಣಿಸಿದೆ’ ಎಂದು ಮಾಹಿತಿ ನೀಡಿದರು.

‘ಕನಿಷ್ಠ ವೇತನ ಕಾಯ್ದೆ 1948ರ ಕಲಂ 3(1) (ಬಿ) ಮತ್ತು 5 (1) (ಬಿ)ರ ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಕೌಶಲ, ಕುಶಲ, ಅರೆಕುಶಲ ಎಂಬ ಮೂರು ವಲಯಗಳನ್ನು ಮಾಡಿ ವೇತನ ದರದ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿದೆ’ ಎಂದರು.

ಸಮಿತಿಯ ಮುಖಂಡರಾದ ಸತೀಶ್ ಅರವಿಂದ್, ಲಕ್ಷ್ಮಣ್ ವಿ., ಎಸ್.ಮುರುಗೇಶ್, ಶಾಗಲೆ ಶರಣಪ್ಪ ಹಾಗೂ ಇನ್ನಿತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-43-375787709

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.