ದಾವಣಗೆರೆ: ಶತಮಾನಗಳಿಂದ ಅಸಮಾನತೆಯನ್ನು ಪ್ರತಿಪಾದಿಸಿದ ಶಕ್ತಿಗಳು ಅಂಬೇಡ್ಕರ್ ವ್ಯಕ್ತಿತ್ವ ಹಾಳು ಮಾಡುವ ಪ್ರಯತ್ನಕ್ಕೆ ಕೈಹಾಕಿವೆ. ರಾಜಕೀಯ ಪಕ್ಷಗಳು ಅಂಬೇಡ್ಕರ್ ಆರಾಧಿಸುವ ನೆಪದಲ್ಲಿ ಕ್ರಾಂತಿಯ ಕಿಡಿ ಆರಿಸುವ ಹುನ್ನಾರ ನಡೆಸಿವೆ ಎಂದು ನಟ ಚೇತನ್ ಅಹಿಂಸಾ ಅಭಿಪ್ರಾಯಪಟ್ಟರು.

ಇಲ್ಲಿನ ಜಯದೇವ ವೃತ್ತ ಸಮೀಪದ ಬ್ರಾಹ್ಮಣರ ಹಾಸ್ಟೆಲ್ ಬೀದಿಯಲ್ಲಿ ಮಹಾನಾಯಕ ಬಿ.ಆರ್. ಅಂಬೇಡ್ಕರ್ ಸೇನೆ ವತಿಯಿಂದ ಶುಕ್ರವಾರ ಹಮ್ಮಿ ಕೊಂಡಿದ್ದ ಅಂಬೇಡ್ಕರ್ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲ ರಾಜಕೀಯ ಪಕ್ಷಗಳು ಅಂಬೇಡ್ಕರ್ ಆರಾಧಿಸುತ್ತಿವೆ. ದೇಶದಲ್ಲಿರುವ ಬಹುತೇಕ ರಾಜಕೀಯ ಪಕ್ಷಗಳಿಗೆ ಅಂಬೇಡ್ಕರ್ ಭಾವಚಿತ್ರವನ್ನು ಹಾಕಿಕೊಳ್ಳುವ ನೈತಿಕತೆ ಕೂಡ ಇಲ್ಲ. ಅಂಬೇಡ್ಕರ್ ಅವರು ಸಮಾನತಾವಾದಿಗಳಿಗೆ ಸೇರಿದವರೇ ಹೊರತು ಅಸಮಾನತೆಯ ಪ್ರತಿಪಾದಕರ ಸ್ವತ್ತಲ್ಲ’ ಎಂದರು.

‘ಸಂವಿಧಾನ ರಚನಾ ಸಮಿತಿಯಲ್ಲಿಯೂ ಸೈದ್ಧಾಂತಿಕ ವಿರೋಧಿ ಗಳಿದ್ದರು. ಅಂಬೇಡ್ಕರ್ ಅವರ ಹಲವು ಆಲೋಚನೆಗಳು ಸಂವಿಧಾನ ಸೇರದಂತೆ ನೋಡಿಕೊಂಡರು. ಅವರಿಗೆ ಸಹಮತ ಇಲ್ಲದ ಕೆಲ ವಿಚಾರಗಳು ಕೂಡ ಸಂವಿಧಾನ ಸೇರಿವೆ’ ಎಂದು ಹೇಳಿದರು.

‘ಅಂಬೇಡ್ಕರ್ ಭಾವಚಿತ್ರ ಇಟ್ಟು ಪೂಜೆ ಮಾಡುವುದರಿಂದ ಅವರ ಆಶಯಗಳು ಅನುಷ್ಠಾನಕ್ಕೆ ಬರಲು ಸಾಧ್ಯವಿಲ್ಲ. ಅವರು ಪ್ರತಿಪಾದಿಸಿದ ವಿಚಾರ, ರಚಿಸಿದ ಕೃತಿಗಳನ್ನು ಅಧ್ಯಯನ ಮಾಡಬೇಕು. ಅವರ ಕನಸು ನನಸು ಮಾಡಲು ಗಟ್ಟಿಯಾಗಿ ನಿಲ್ಲಬೇಕು. ಸಮಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕಟಿಬದ್ಧರಾಗಬೇಕು’ ಎಂದು ಸಲಹೆ ನೀಡಿದರು.

‘ಅಂಬೇಡ್ಕರ್ ಹಾಗೂ ಸಾವರ್ಕರ್ ಅವರನ್ನು ಸಮಾನವಾಗಿ ನೋಡುವ ಷಡ್ಯಂತ್ರವನ್ನು ಬಲಪಂಥೀಯರು ಹೆಣೆದಿದ್ದಾರೆ. ಯಥಾಸ್ಥಿತಿವಾದಿಗಳು ಅಂಬೇಡ್ಕರ್ ಅವರನ್ನು ಮಹಾತ್ಮ ಗಾಂಧಿ ಜೊತೆಗೆ ನಿಲ್ಲಿಸುತ್ತಾರೆ. ಎಡಪಂಥೀಯರು ಮಾರ್ಕ್ಸ್ ಜೊತೆ ಸಮೀಕರಿಸುತ್ತಾರೆ. ಪೆರಿಯಾರ್ ಹೊರತುಪಡಿಸಿ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಅಂಬೇಡ್ಕರ್ ಸಮೀಕರಿಸಲು, ಹೋಲಿಕೆ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಇತಿಹಾಸವನ್ನು ಸರಿಯಾಗಿ ಅರಿತರೆ ಮಾತ್ರವೇ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಶತಮಾನಗಳಿಂದ ವಂಚನೆಗೆ ಒಳಗಾಗಿರುವವರಿಗೆ ಹೆಚ್ಚು ಅವಕಾಶಗಳು ಸಿಗಬೇಕು. ಇತಿಹಾಸದ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಅಸಮಾನತೆ ಹಾಗೂ ಅನ್ಯಾಯದಿಂದ ಕೂಡಿರುವ ವ್ಯವಸ್ಥೆಯನ್ನು ವಿರೋಧಿಸಬೇಕು. ಭ್ರಷ್ಟಾಚಾರ ಪೋಷಿಸುತ್ತ, ಮನುವಾದ ಪ್ರತಿಪಾದಿಸುವವರಿಂದ ದೂರವಿರಬೇಕು. ಗಾಂಧಿವಾದಿಗಳ ಬಗೆಗೂ ಎಚ್ಚರಿಕೆ ಅಗತ್ಯ’ ಎಂದರು.

‘ರಾಜಕೀಯ ಅಧಿಕಾರ ಮಾತ್ರವೇ ಬಿಡುಗಡೆಯ ಮಾರ್ಗ ಎಂಬುದನ್ನು ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ. ರಾಜಕೀಯ ಚಳವಳಿ ರೂಪಿಸಿದರೆ ಮಾತ್ರವೇ ಸಂವಿಧಾನವನ್ನು ಅನುಷ್ಠಾನಕ್ಕೆ ತರಲು ಸಾಧ್ಯ. ಸಂವಿಧಾನದ ಪೀಠಿಕೆ ಅಳವಡಿಸಿಕೊಂಡ ಶಕ್ತಿಗಳು ಮಾತ್ರವೇ ಅಧಿಕಾರ ಹಿಡಿಯಬೇಕು. ಇಂತಹ ‘ಸತ್ಯಪಂಥ’ದ ಮೂಲಕ ರಾಜಕೀಯ ಚಳವಳಿ ಕಟ್ಟಿದರೆ ಶೋಷಿತ ಸಮುದಾಯಗಳಿಗೆ ಪರಿಹಾರ ಸಿಗಲಿದೆ’ ಎಂದರು.

ಅಂಬೇಡ್ಕರ್ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಡಿ. ಮೈಲಾರಪ್ಪ, ಆವರಗೆರೆ ಚನ್ನಮ್ಮ, ವಿಜಯ್ಕರ್, ವಿಜಯ್ ಕುಮಾರ್, ಟಿ.ಮಂಜುನಾಥ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-43-2061542303

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.