ದಾವಣಗೆರೆ: ‘ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಪದಚ್ಯುತ ವಚನಾನಂದ ಸ್ವಾಮೀಜಿ ಆದಷ್ಟು ಬೇಗ ಮಠದಿಂದ ನಿರ್ಗಮಿಸಲಿ. ಅವರು ಗೌರವಯುತವಾಗಿ ಹೊರನಡೆದ ಬಳಿಕ ಹೊಸ ಮಠಾಧೀಶರ ಕುರಿತು ಆಲೋಚನೆ ಮಾಡುತ್ತೇವೆ’ ಎಂದು ಟ್ರಸ್ಟ್ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ತಿಳಿಸಿದರು.

‘ವಚನಾನಂದ ಸ್ವಾಮೀಜಿ ಅವರನ್ನು ಏ.13ರಂದು ಟ್ರಸ್ಟ್ ಪದಚ್ಯುತಗೊಳಿಸಿದ್ದು, ಸಭೆ, ಸಮಾರಂಭ ನಡೆಸುವ ಹಕ್ಕನ್ನು ಅವರು ಕಳೆದುಕೊಂಡಿದ್ದಾರೆ. ವಜಾಗೊಂಡು 10 ದಿನ ಕಳೆದರೂ ಮಠದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ನಿರ್ಗಮಿಸುವ ದಿನಕ್ಕೆ ಕಾಯುತ್ತಿದ್ದೇವೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸ್ವಾಮೀಜಿ ಹಾಗೂ ಟ್ರಸ್ಟಿಗಳ ನಡುವೆ ಯಾವುದೇ ದ್ವೇಷವಿಲ್ಲ. ಸಮಾಜ ನೀಡಿದ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಸ್ವಾಮೀಜಿ ವಿಫಲರಾಗಿದ್ದಾರೆ ಎಂಬ ಬೇಸರ ಮಾತ್ರ ಇದೆ. ಗೌರವಯುತವಾಗಿ ನಿರ್ಗಮಿಸಲು ಸ್ವಾಮೀಜಿಗೆ ನೀಡಿದ ಕಾಲಾವಕಾಶ ದುರ್ಬಳಕೆ ಆಗುತ್ತಿದೆ. ಮುಂದಿನ ಮಠಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸುವ ಬಗ್ಗೆ ಆಲೋಚಿಸುತ್ತಿದ್ದೇವೆ’ ಎಂದರು.

‘ಸಮುದಾಯಕ್ಕೆ ಗುರುಪೀಠ ಸ್ಥಾಪಿಸುವ ಹಾಗೂ ಮೀಸಲಾತಿ ದಕ್ಕಿಸಿಕೊಡುವ ಉದ್ದೇಶದಿಂದ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದೆ. ನಾನು ರಾಜಕಾರಣ ಪ್ರವೇಶಿಸುವ ಮಹತ್ವಕಾಂಕ್ಷೆ ಇಟ್ಟುಕೊಂಡಿದ್ದೆ. ಟ್ರಸ್ಟ್ ಹೊಣೆಗಾರಿಕೆಯನ್ನು ಸಮುದಾಯ ನೀಡಿದ ಬಳಿಕ ನನ್ನ ನಿರ್ಧಾರ ಬದಲಿಸಿಕೊಂಡೆ. ಬಾವಿ ಬೆಟ್ಟಪ್ಪ ಸೇರಿ ಅನೇಕರು ನಿಸ್ವಾರ್ಥ ಸೇವೆ ಮಾಡುತ್ತಿದ್ದೇವೆ. ಬಸವ ತತ್ವದ ಆಧಾರದ ಮೇರೆಗೆ ನಡೆದುಕೊಂಡಿದ್ದೇವೆ’ ಎಂದು ವಿವರಿಸಿದರು.

‘ಯೋಗಪಟುವಾಗಿದ್ದ ಕಾಲದಿಂದಲೂ ಸ್ವಾಮೀಜಿ ಚಿರಪರಿಚಿತರು. 2008ರಿಂದ ಅವರಿಗೆ ಹಲವು ರೀತಿಯಲ್ಲಿ ನೆರವಾಗಿದ್ದೇನೆ. 6 ಮಠಾಧೀಶರ ಸಮ್ಮುಖದಲ್ಲಿ ವಚನಾನಂದ ಸ್ವಾಮೀಜಿ ಅವರನ್ನು ಗುರುಪೀಠಕ್ಕೆ ತರಲು ತೀರ್ಮಾನಿಸಲಾಗಿತ್ತು. ವರ್ಷದಿಂದ ಈಚೆಗೆ ಅವರ ನಡವಳಿಕೆ ಸಾಕಷ್ಟು ಬದಲಾಗಿತ್ತು. ಅವರನ್ನು ತಿದ್ದಲು ಪ್ರಯತ್ನಿಸಿ ವಿಫಲರಾಗಿದ್ದೇವೆ. ಅವರ ಬಗ್ಗೆ ಈಗಲೂ ಅಪಾರ ಗೌರವವಿದೆ’ ಎಂದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಶಂಕರ ಬಿಸರಳ್ಳಿ, ಪ್ರಧಾನ ಕಾರ್ಯದರ್ಶಿ ಪರಮೇಶ ಪಟ್ಟಣಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷ ವಸಂತ ಹುಲ್ಲತ್ತಿ, ಟ್ರಸ್ಟಿಗಳಾದ ಜ್ಯೋತಿ ಪ್ರಕಾಶ್, ಚಂದ್ರಶೇಖರ ಪೂಜಾರ್, ಸಮುದಾಯದ ಮುಖಂಡ ಎಂ. ದೊಡ್ಡಪ್ಪಣ್ಣ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-43-2068227293

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.