ರಾಜ್ಯ, ದೇಶ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..

ಭಾರತ ಜಗತ್ತಿನಲ್ಲಿ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ ಎಂಬುದು ಒಂದು ಕಡೆಯಾದರೆ, ದೇಶದಲ್ಲಿ ಇನ್ನೂ ಅನೇಕ ಸಂಖ್ಯೆಯಲ್ಲಿರುವ ಅನಕ್ಷರಸ್ಥರು, ಬಡವರು, ಬುಡಕಟ್ಟು, ಆದಿವಾಸಿ ಜನ ಪಡಬಾರದ ಪಡಿಪಾಟಲುಗಳನ್ನು ಪಡುತ್ತಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
.ಸಿಗದ ಠೇವಣಿ ಹಣ; ಸಹೋದರಿಯ ಅಸ್ಥಿಪಂಜರವನ್ನೇ ತಂದು ಬ್ಯಾಂಕ್ ಮುಂದೆ ಇಟ್ಟ! .
'ನಾನು ನನ್ನ ಕಾರಿನಲ್ಲಿ ಎಸಿ ಬಳಸುವುದಿಲ್ಲ. ಎಸಿ ಇರುವ ಕಡೆಯಲ್ಲಿ ನಾನು ಕೂರುವುದೂ ಇಲ್ಲ. ಯಾಕೆಂದರೆ, ನಾನು ನನ್ನ ಜೇಬಿನಲ್ಲಿ ಈರುಳ್ಳಿ ಇಟ್ಟುಕೊಳ್ಳುತ್ತೇನೆ. ಹೀಗೆ ಮಾಡುವುದರಿಂದ ಧಗೆಯೇ ಆಗುವುದಿಲ್ಲ' ಎಂದು ಕೇಂದ್ರ ಸಂವಹನ ಸಚಿವ ಜೋತಿರಾದಿತ್ಯ ಸಿಂಧಿಯಾ ಹೇಳಿಕೆ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
.ನಿಜಕ್ಕೂ ಈರುಳ್ಳಿ ಇಟ್ಟುಕೊಂಡರೆ ಸೆಖೆ ಆಗಲ್ವಾ? ಸಚಿವ ಸಿಂಧಿಯಾ ಮಾತು ನಿಜವೇ?.
ನಾಲ್ಕು ವೋಟಿಗೋಸ್ಕರ ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡವರನ್ನು ಬ್ರದರ್ಸ್ ಎಂದು ಸಮರ್ಥನೆ ಮಾಡಿಕೊಳ್ಳುವ ಸ್ವಾರ್ಥಿಗಳು ನಾಡಿನ ಮುಖ್ಯಮಂತ್ರಿ ಆಗಲು ಹೊರಟಿರುವುದು ಕರ್ನಾಟಕದ ದುರಂತ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
.ಉಗ್ರರನ್ನು ಸಮರ್ಥನೆ ಮಾಡಿಕೊಳ್ಳುವವರು CM ಆಗಲು ಹೊರಟಿರುವುದು ದುರಂತ: ಆರ್.ಅಶೋಕ.
'ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಮುಂದುವರಿಯಬೇಕೆಂಬ ಅಭಿಪ್ರಾಯವನ್ನು ನಾವೆಲ್ಲ ಹೈಕಮಾಂಡ್ಗೆ ಹೇಳಿದ್ದೇವೆ' ಎಂದು ಶಾಸಕ ಕೆ.ಎನ್. ರಾಜಣ್ಣ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು,'ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಂದುವರಿಯಲು ಸಿದ್ದರಾಗಿದ್ದಾರೆ. ಪದತ್ಯಾಗಕ್ಕೂ ಸಿದ್ದರಾಗಿದ್ದಾರೆ. ಹೈಕಮಾಂಡ್ ಏನು ಹೇಳುತ್ತದೆಯೊ ಅದಕ್ಕೆ ಬದ್ದರಾಗಿದ್ದಾರೆ' ಎಂದರು.
.CM ಆಗಿ ಸಿದ್ದರಾಮಯ್ಯ ಮುಂದುವರಿಯಬೇಕೆಂದು ಹೈಕಮಾಂಡ್ಗೆ ಹೇಳಿದ್ದೇವೆ- ರಾಜಣ್ಣ.
ಯುದ್ಧ, ನೆರೆಯ ದೇಶಗಳ ಜೊತೆ ಸಂಘರ್ಷದ ಪರಿಣಾಮ ವಿಶ್ವದಾದ್ಯಂತ ರಕ್ಷಣಾ ವೆಚ್ಚದಲ್ಲಿ ಏರಿಕೆ ಕಂಡುಬಂದಿದೆ. ಜಾಗತಿಕ ರಕ್ಷಣಾ ವೆಚ್ಚದಲ್ಲಿ ಭಾರತ 5ನೇ ಸ್ಥಾನದಲ್ಲಿದ್ದು ಮೊದಲ ಮತ್ತು ಎರಡನೇ ಸ್ಥಾನದಲ್ಲಿ ಅಮೆರಿಕ ಮತ್ತು ಚೀನಾ ದೇಶಗಳಿವೆ.
.ವಿಶ್ವದ ರಕ್ಷಣಾ ವೆಚ್ಚದಲ್ಲಿ ಭಾರತಕ್ಕೆ 5ನೇ ಸ್ಥಾನ: ಚೀನಾ, ಪಾಕ್ ಸ್ಥಿತಿಗತಿ ಏನು?.
ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಸಹಚರ ಸಲೀಂ ಡೋಲಾನನ್ನು ಮಂಗಳವಾರ ಮುಂಜಾನೆ ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.

ಇತ್ತೀಚೆಗೆ ಇಸ್ತಾಂಬುಲ್ನಲ್ಲಿ ನಡೆದ ಅತ್ಯಂತ ಮಹತ್ವದ ಕಾರ್ಯಾಚರಣೆಯಲ್ಲಿ ಡೋಲಾನನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಗಳು ತಿಳಿಸಿವೆ. ಅಂತರರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಗುಪ್ತಚರ ಸಂಸ್ಥೆಗಳು ನಡೆಸಿದ ಸಮನ್ವಯದ ಕಾರ್ಯಾಚರಣೆಯ ನಂತರ ಈ ಹಸ್ತಾಂತರ ಪ್ರಕ್ರಿಯೆ ನಡೆದಿದೆ.
.ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಸಲೀಂ ಡೋಲಾ ಭಾರತಕ್ಕೆ ಹಸ್ತಾಂತರ.
ಬದುಕು ಕಟ್ಟಿಕೊಳ್ಳಲೆಂದು ಬೆಂಗಳೂರಿಗೆ ಲಕ್ಷಾಂತರ ಜನರು ಬರುತ್ತಾರೆ. ವಿದ್ಯಾರ್ಥಿಗಳು ಹಾಗೂ ಅವಿವಾಹಿತರು ಪಿಜಿಗಳಲ್ಲಿ ಉಳಿದುಕೊಳ್ಳುತ್ತಾರೆ. ಆದರೆ ಕುಟುಂಬ ಸಮೇತ ಬೆಂಗಳೂರಿಗೆ ಬಂದು ನೆಲೆಸಲು ಬಯಸುವವರಿಗೆ ಇಲ್ಲಿ ಮನೆ ಹುಡುಕುವುದೇ ದೊಡ್ಡ ಸವಾಲಾಗಿದೆ. ಉತ್ತಮ ಸೌಲಭ್ಯ ಇರುವ ಮನೆ ಬಾಡಿಗೆ ಪಡೆಯಬೇಕು ಅಂದರೆ, ದುಬಾರಿ ಬಾಡಿಗೆ ಕೊಡಬೇಕಾಗುತ್ತದೆ.
.ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ಮ್ಯಾರಥಾನ್ ಇದ್ದಂತೆ: ಇದೆಂಥ ಹೋಲಿಕೆ?.
ಈಶಾನ್ಯ ಭಾರತದ 8 ರಾಜ್ಯಗಳನ್ನು ‘ಅಷ್ಟಲಕ್ಷ್ಮಿ’ಯರು ಎಂದು ಕರೆದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪೂರ್ವಕ್ಕಾಗಿ ಕೆಲಸ, ಪೂರ್ವದ ರಾಜ್ಯಗಳಿಗಾಗಿ ವೇಗದ ಕೆಲಸ ಎಂಬ ಮಾತಿಗ ನಮ್ಮ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

ಈ ರಾಜ್ಯಗಳು ಸಮೃದ್ಧಿ, ಸಂಪತ್ತು ಮತ್ತು ಶುಭದ ಬಹುಮುಖಿ ಸ್ವರೂಪವನ್ನು ಪ್ರತಿನಿಧಿಸುತ್ತವೆ ಎಂದು ಹೇಳಿದ್ದಾರೆ.
.ಈಶಾನ್ಯ ಭಾರತದ ರಾಜ್ಯಗಳನ್ನು ‘ಅಷ್ಟಲಕ್ಷ್ಮಿ’ಯರು ಎಂದ ಪ್ರಧಾನಿ ಮೋದಿ.
ಬೇಸಿಗೆಯಲ್ಲಿ ತಾಪಮಾನ ಹೆಚ್ಚಾದಂತೆ, ಎಲೆಕ್ಟ್ರಾನಿಕ್ ವಸ್ತುಗಳು ಕೂಡ ಬಿಸಿಯಾಗುವುದು ಸಾಮಾನ್ಯ ಸಂಗತಿ. ಆದರೆ ಅತಿಯಾಗಿ ಬಿಸಿಯಾಗುವುದು ಅಪಾಯಕ್ಕೆ ಕಾರಣವಾಗಬಹುದು. ಲ್ಯಾಪ್ಟಾಪ್ಗಳು ಕೂಡ ಬೇಸಿಗೆಯಲ್ಲಿ ಇದ್ದಕ್ಕಿಂದ್ದಂತೆ ಬಿಸಿಯಾಗುತ್ತವೆ. ಇದರಿಂದ, ಅದರ ಕೆಲಸದ ವೇಗ ಕಡಿಮೆಯಾಗುವುದರ ಜೊತೆಗೆ ಹಾನಿಯಾಗುವ ಸಾಧ್ಯತೆ ಕೂಡ ಇರುತ್ತದೆ.

ಧಾರ್ಮಿಕ ಸಂಸ್ಥೆಗಳ ನಿರ್ವಹಣೆಯ ಹಕ್ಕಿನ ಹೆಸರಿನಲ್ಲಿ ಅರಾಜಕತೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಏ.28) ಅಭಿಪ್ರಾಯಪಟ್ಟಿದೆ.

ಧಾರ್ಮಿಕ ಸಂಸ್ಥೆಯನ್ನು ನಿರ್ವಹಿಸುವ ಹಕ್ಕು ಎಂದರೆ ಅಲ್ಲಿ ಯಾವುದೇ ನಿಯಮಾವಳಿಗಳು ಇರಬಾರದು ಎಂದರ್ಥವಲ್ಲ. ಸಂಸ್ಥೆಯ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಮಾದರಿ ಹಾಗೂ ನಿಯಮಗಳನ್ನು ರೂಪಿಸುವುದು ಅತ್ಯಗತ್ಯ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.
.ಪ್ರತಿಯೊಂದು ಧಾರ್ಮಿಕ ಸಂಸ್ಥೆಗೂ ನಿಯಮಾವಳಿ ಬೇಕು, ಅರಾಜಕತೆ ಇರಲು ಸಾಧ್ಯವಿಲ್ಲ: SC.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.