ಬೆಂಗಳೂರು: ‘ಆದಿ ಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿಯವರ ಮೇಲೆ ಜನತಾದಳ ಸರ್ಕಾರ ಪ್ರಕರಣ ದಾಖಲಿಸಿದ್ದಾಗ ಆರ್. ಅಶೋಕ ಎಲ್ಲಿ ಹೋಗಿದ್ದರು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಚಂದ್ರಶೇಖರ ಸ್ವಾಮೀಜಿಯವರು ಮಾತನಾಡಿರುವುದು ತಪ್ಪು. ಕಾನೂನಿನ ವಿಷಯದಲ್ಲಿ ಯಾರಿಗೂ ದಾಕ್ಷಿಣ್ಯ ಇಲ್ಲ. ಅವರು ಕ್ಷಮಾಪಣೆಯನ್ನೂ ಕೇಳಿದ್ದಾರೆ. ಆದರೆ, ಅಶೋಕ ಅವರು ಬೆಂಕಿ ಇಟ್ಟು ಅದರಲ್ಲಿ ಬೀಡಿ ಸೇದಲು ಹೊರಟಿದ್ದಾರೆ’ ಎಂದರು.

‘ಬಾಲಗಂಗಾಧರನಾಥ ಸ್ವಾಮೀಜಿ ತಪ್ಪು ಮಾಡದಿದ್ದರೂ ಅಂದಿನ ಅರಣ್ಯ ಸಚಿವ ಚೆನ್ನಿಗಪ್ಪ ಅವರಿಂದ ಪ್ರಕರಣ ದಾಖಲಿಸಿದ್ದರು. ಸ್ವಾಮೀಜಿ ಜಾಮೀನು ಪಡೆಯಲು ಹೋರಾಡುತ್ತಿದ್ದಾಗ ಅಶೋಕಣ್ಣ ಸೇರಿದಂತೆ ಉಳಿದವರೆಲ್ಲ ಎಲ್ಲಿದ್ದರು’ ಎಂದು ಪ್ರಶ್ನಿಸಿದರು.

ಶಿವಕುಮಾರ್ ಒಕ್ಕಲಿಗ ಸಮುದಾಯವನ್ನು ಬೇಕಾದಾಗ ಬಳಸಿಕೊಳ್ಳುತ್ತಾರೆ ಎಂದು ಅಶೋಕ ಹೇಳಿರುವ ಬಗ್ಗೆ ಪ್ರತಿಕ್ರಿಯಸಿದ ಅವರು, ‘ನಾನು ಸಮುದಾಯ ಬಳಸಿಕೊಳ್ಳಬೇಕಿಲ್ಲ, ಅದರಲ್ಲಿ ನಾನು ಹುಟ್ಟಿದ್ದೇನೆ. ಯಾರ ಹಕ್ಕಿನ ಬಗ್ಗೆಯೂ ಮಾತನಾಡುವುದು ಯಾರಿಗೂ ಸರಿಯಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.