ಬೆಂಗಳೂರು: ‘ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯಬೇಕು. ಮರುಪರಿಶೀಲನೆ ಮಾಡಬೇಕು ಎಂದು ಬಿಜೆಪಿ ನಿರ್ಧಾರ ಮಾಡಿಕೊಂಡು ಸದನದಲ್ಲಿ ನಿರ್ಣಯ ಮಂಡಿಸಲಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.

ವಿಧಾನಸಭೆಯಲ್ಲಿ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಬಿಜೆಪಿಯ ಸುರೇಶ್ ಗೌಡ ಅವರು ಉಳ್ಳವರ ಪಾಲಾಗುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಮರುಪರಿಷ್ಕರಣೆ ಮಾಡಬೇಕು ಎಂಬ ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಈ ಅಭಿಪ್ರಾಯ ಕೇವಲ ನಿಮ್ಮದಲ್ಲ. ಅದು ಬಿಜೆಪಿ ಅಭಿಪ್ರಾಯ. ಅಕ್ಕಪಕ್ಕ ಕೂತು, ಯಾವುದೇ ಸ್ಥಳದಲ್ಲಿ ನಿಂತು ಟೀಕೆ ಮಾಡುವುದಕ್ಕಿಂತ, ಈ ಕುರಿತು ಒಮ್ಮತದ ತೀರ್ಮಾನ ತೆಗೆದುಕೊಂಡು ಸದನದಲ್ಲೇ ನಿರ್ಣಯ ಮಂಡಿಸಲಿ. ನಂತರ ಸಾರ್ವಜನಿಕ ಅಭಿಪ್ರಾಯ ಪಡೆದು ರದ್ದು ಮಾಡುವ ಕುರಿತು ನಿರ್ಧಾರ ಮಾಡೋಣ’ ಎಂದರು.

‘ಕೋಳಿ ಕೇಳಿ ಖಾರ ಅರೆದಂತಿದೆ, ಗ್ಯಾರಂಟಿ ಕೊಡುವಾಗ ನಮ್ಮನ್ನು ನೀವು ಕೇಳಿದ್ದೀರಾ’ ಎಂದು ಸುರೇಶ್ ಮರು ಪ್ರಶ್ನೆಗೆ ಹಾಕಿದರು. ‘ಬಿ.ಎಸ್.ಯಡಿಯೂರಪ್ಪ ಅವರು ಒಂದು ಕಾಳು ಕಡಿಮೆ ಆದರೂ ಬಿಡುವುದಿಲ್ಲ ಎಂದು ಹೇಳಿದ್ದರು. ಆನಂತರ ಅದು ಕಡಿಮೆ, ಇದು ಆಯಿತು ಎಂದರು. ಆರು ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು. ನಿಮ್ಮ ಮಾತನ್ನೂ ಕೇಳಿಯೇ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡಿದ್ದೇವೆ’ ಎಂದು ಶಿವಕುಮಾರ್ ತಿರುಗೇಟು ಕೊಟ್ಟರು.

‘ಅಸ್ಸಾಂನಲ್ಲಿ ಸರ್ಕಾರದ ಉಚಿತ ಕೊಡುಗೆಗಳು ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಸಿಗುತ್ತಿವೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಗುತ್ತಿಲ್ಲ. ಕರ್ನಾಟಕದಲ್ಲಿ ಎಲ್ಲ ಪಕ್ಷದವರಿಗೂ ಸೌಲಭ್ಯ ಸಿಗುತ್ತಿದೆ. ಉಳ್ಳವರಿಗೆ ಬೇಡ ಎನ್ನುವ ಕುರಿತು ಸರ್ಕಾರವೂ ಚಿಂತಿಸುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.